ಸಂಘಟನೆಗಳು ಎಂದರೆ ಕೇವಲ ಹೋರಾಟಕ್ಕೆ ಸೀಮಿತವಾಗಿಲ್ಲ: ಬಿ.ಮಹೇಂದ್ರ

KannadaprabhaNewsNetwork |  
Published : Oct 13, 2024, 01:01 AM IST
12ಕೆಎಂಎನ್ ಡಿ12 | Kannada Prabha

ಸಾರಾಂಶ

ಸಂಘಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಸದಸ್ಯರಲ್ಲೂ ಮುಕ್ತ ಮನಸ್ಸು ಇರಬೇಕು. ಸಂಘ ಸ್ಥಾಪನೆ ಮಾಡಿರುವ ಉದ್ದೇಶ ಆರ್ಥಿಕ ಮುಗ್ಗಟ್ಟಿನಿಂದ ಅಥವಾ ಇನ್ನಿತರ ಕಾರಣಗಳಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ ಹಲವು ವಿದ್ಯಾರ್ಥಿಗಳ ಸರ್ವೇ ಮಾಡಿ ಅವರಿಗೆ ಅನುಕೂಲ ಮಾಡಲು. ವಿದ್ಯಾವಂತ ನಿರುದ್ಯೋಗಿಗಳು ಹಾಗೂ ಬಡ ವ್ಯಕ್ತಿಗಳ ಪರವಾಗಿ ಸಮಾಜ ಸೇವೆ ಮಾಡಲು ಸಹಕಾರಿ ಆಗಲಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಂಘಟನೆಗಳು ಅನ್ಯಾಯದ ವಿರುದ್ಧ ಹೋರಾಡಲು, ಒಬ್ಬ ವ್ಯಕ್ತಿ ಪರ ಬೆಂಬಲವಾಗಿ ನಿಂತು ನ್ಯಾಯ ಕೇಳಲು ಮಾತ್ರವಲ್ಲ. ಸಮಾಜ ಸೇವೆ ಮಾಡಲು ಕೂಡ ಸಂಘಟನೆಗಳಿಂದ ಸಾಧ್ಯವಿದೆ ಎಂದು ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭ ಮತ್ತು ನೂತನ ಕಚೇರಿಯನ್ನು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಂಘಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಸದಸ್ಯರಲ್ಲೂ ಮುಕ್ತ ಮನಸ್ಸು ಇರಬೇಕು. ಸಂಘ ಸ್ಥಾಪನೆ ಮಾಡಿರುವ ಉದ್ದೇಶ ಆರ್ಥಿಕ ಮುಗ್ಗಟ್ಟಿನಿಂದ ಅಥವಾ ಇನ್ನಿತರ ಕಾರಣಗಳಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ ಹಲವು ವಿದ್ಯಾರ್ಥಿಗಳ ಸರ್ವೇ ಮಾಡಿ ಅವರಿಗೆ ಅನುಕೂಲ ಮಾಡಲು. ವಿದ್ಯಾವಂತ ನಿರುದ್ಯೋಗಿಗಳು ಹಾಗೂ ಬಡ ವ್ಯಕ್ತಿಗಳ ಪರವಾಗಿ ಸಮಾಜ ಸೇವೆ ಮಾಡಲು ಸಹಕಾರಿ ಆಗಲಿದೆ ಎಂದರು.

ಓದು ಒಬ್ಬ ವ್ಯಕ್ತಿಯಿಂದ ಕಿತ್ತುಕೊಳ್ಳಲಾಗದ ಸಂಪತ್ತು. ಪ್ರತಿಯೊಬ್ಬರಿಗೂ ವಿದ್ಯೆ ಅತ್ಯವಶ್ಯಕ. ಇದೇ ನಿಮ್ಮ ಭವಿಷ್ಯದ ಆಸ್ತಿ. ಮಕ್ಕಳಿಗೆ ಆಸ್ತಿ ಮಾಡದಿದ್ದರೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಸಂಘಕ್ಕೆ ಬೆಂಬಲವಾಗಿ ನಿಂತರ ನಮ್ಮ ಕೈಲಾದ ಸಹಾಯ ಮಾಡೋಣ ಎಂದು ತಿಳಿಸಿದರು.

ತಹಸೀಲ್ದಾರ್ ಬಿ.ವಿ.ಕುಮಾರ್ ಮಾತನಾಡಿ, ಸಂಘ ಹಲಗೂರು ಹೋಬಳಿ ಮಾತ್ರವಲ್ಲದೆ ಮಳವಳ್ಳಿ ಇನ್ನಿತರ ಕಡೆ ಪ್ರಾರಂಭವಾಗಿ, ದೊಡ್ಡ ಮಟ್ಟದಲ್ಲಿ ಹೆಚ್ಚಿನ ಸಮಾಜ ಸೇವೆ ಮಾಡಲಿ ಎಂದು ಆಶಿಸುತ್ತೇನೆ ಎಂದರು.

ಸಾಗ್ಯ ಕೆಂಪಯ್ಯ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬಡವರ ,ವಿದ್ಯಾರ್ಥಿಗಳ, ವಿದ್ಯಾವಂತ ನಿರುದ್ಯೋಗಿಗಳ ಮತ್ತು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ,ಗ್ರಾಮದ ಪ್ರತಿಯೊಂದು ಬೀದಿ ಬೀದಿಯಲ್ಲಿ ನಮ್ಮ ಸದಸ್ಯರು ಸರ್ವೇ ಮಾಡಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಸಹಾಯವನ್ನು ದಾನಿಗಳ ಮೂಲಕ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಆರ್. ಶಶಿಕಲಾ ಶ್ರೀನಿವಾಸಾಚಾರಿ ಮಾತನಾಡಿದರು. ಉಪಾಧ್ಯಕ್ಷೆ ಸಿ.ಲತಾ, ಸದಸ್ಯರಾದ ಮಂಗಳಾ, ವೀರೇಶ, ಸಂಘದ ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸಿದ್ದಲಿಂಗಮೂರ್ತಿ, ಪದಾಧಿಕಾರಿಗಳಾದ ನಾಗಯ್ಯ, ಮುಖಂಡರಾದ ಬೈರವಯ್ಯ, ಮಹದೇವು, ಸಾಗ್ಯ ಕೆಂಪಯ್ಯ, ಶಿವು, ಉಮೇಶ್ ಮೌರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ