ನೊಳಂಬ ಸಮಾಜದ ಅಭಿವೃದ್ಧಿಗೆ ಸಂಘಟಿತ ಹೋರಾಟ ಮುಖ್ಯ

KannadaprabhaNewsNetwork |  
Published : Aug 05, 2024, 12:41 AM IST
4ಕೆೆಡಿಯು2. | Kannada Prabha

ಸಾರಾಂಶ

ಕಡೂರು, ರಾಜ್ಯದಾದ್ಯಂತ 20 ಲಕ್ಷಕ್ಕೂ ಹೆಚ್ಚಿರುವ ನೊಳಂಬ ಸಮಾಜದ ಅಭಿವೃದ್ಧಿಗೆ ಸಂಘಟಿತ ಹೋರಾಟ ಬಹುಮುಖ್ಯ ಎಂದು ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸಂಘದ ಜಿಲ್ಲಾ ಘಟಕ ಉದ್ಘಾಟನೆಯಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದಾದ್ಯಂತ 20 ಲಕ್ಷಕ್ಕೂ ಹೆಚ್ಚಿರುವ ನೊಳಂಬ ಸಮಾಜದ ಅಭಿವೃದ್ಧಿಗೆ ಸಂಘಟಿತ ಹೋರಾಟ ಬಹುಮುಖ್ಯ ಎಂದು ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನೊಳಂಬ ಸ್ವಯಂ ಸೇವಕ ಸಂಘದಿಂದ ಕಡೂರಿನ ಗೆದ್ಲೆ ಹಳ್ಳಿಯ ಬಯಲು ಬಸವೇಶ್ವರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸಂಘದ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೊಳಂಬ ಸಂಗಮ- ಚಿಕ್ಕಮಗಳೂರು ಜಾತ್ರೆ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಶ್ರೀಮಠ ಅನೇಕ ಕಾರ್ಯ ಮಾಡುತ್ತಿದೆ. 1 ಸಾವಿರಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಆರ್ಥಿಕ ನೆರವು ನೀಡಲಾಗಿದೆ. ನೊಳಂಬ ಸಮಾಜದ ಅಭಿವೃದ್ಧಿಗೆ ಯಾವುದೇ ಅಸಮಾಧಾನ ವಿದ್ದರೂ ಬದಿಗಿಟ್ಟು ಸಮಾಜದ ಏಳಿಗೆಗೆ ಎಲ್ಲರೂ ಒಮ್ಮತದಿಂದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.

ನೊಳಂಬ ಸ್ವಯಂ ಸೇವಕ ಸಂಘದ ರಾಜ್ಯಾಧ್ಯಕ್ಷ ಡಾ.ಎಂ.ವಿ.ಧನಂಜಯ ಮಾತನಾಡಿ, ನೊಳಂಬ ಸಮಾಜದ ಸಂಘಟನೆ, ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಧನಸಹಾಯ, ಅಶಕ್ತರಿಗೆ ಆಸರೆ, ಸಮಾಜದ ಸಂಘಟನೆ ಮುಂತಾದ ಉದ್ದೇಶಗಳಿಂದ ಈ ಸ್ವಯಂ ಸೇವಕ ಸಂಘ ಪುಷ್ಪಗಿರಿ ಶಾಖಾ ಮಠದಲ್ಲಿ 3 ವರ್ಷದ ಹಿಂದೆ ಆರಂಭವಾಗಿದ್ದು 18 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ನಮ್ಮ ಆಚಾರ ವಿಚಾರಗಳ ರಕ್ಷಣೆ ಗುರಿಯೊಂದಿಗೆ ಆರಂಭವಾದ ಈ ಸಂಘದ ಅಭ್ಯುದಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವುದೇ ಒಳಜಗಳವಿಲ್ಲದೆ ಸಾಮರಸ್ಯದ ಮೂಲಕ ಸಂಘ ಮುಂದುವರೆಯಲಿ. ನೊಳಂಬ ಸಮಾಜದ ಅಭಿವೃದ್ಧಿಗೆ ಸದಾ ನನ್ನ ಸಹಕಾರವಿದೆ ಎಂದರು.

ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೊಳಂಬ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹೆಚ್ಚು ಪ್ರಾತಿನಿಧ್ಯ ದೊರೆಯಬೇಕು. ಆ ನಿಟ್ಟಿನಲ್ಲಿ ಇಂತಹ ಸ್ವಯಂ ಸೇವಕ ಸಂಘದ ಕಾರ್ಯ ಶ್ಲಾಘನೀಯ. ವೈಯುಕ್ತಿಕ ಹಿತಾಸಕ್ತಿ ಬದಿಗಿರಿಸಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ದೊರೆಯುವುದು ಖಂಡಿತ ಎಂದರು.

ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 600 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿದರು. ಡಾ.ದಿನೇಶ್,

ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಡಿ.ಪರಮೇಶ್ವರಪ್ಪ, ವಿಶ್ರಾಂತ ಉಪಕುಲಪತಿ ಡಾ.ಕೆ.ಎಂ.ಇಂದ್ರೇಶ್, ಚಿಕ್ಕದೇವನೂರು ರವಿ, ನವೀನ್, ಡಾ.ಉಮೇಶ್, ಕೆ.ಬಿ. ಬಸವರಾಜಪ್ಪ, ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್‌. ಚಂದ್ರಶೇಖರ್, ಗುಣಸಾಗರ ವಿಜಯ್ ಕುಮಾರ್, ಅರೇಹಳ್ಳಿ ಮಲ್ಲಿಕಾರ್ಜುನ್, ಕಾಮೇನಹಳ್ಳಿ ಯೋಗೀಶ್ ಇದ್ದರು.

4ಕೆಕೆಡಿಯು2.

ನೊಳಂಬ ಸ್ವಯಂ ಸೇವಕ ಸಂಘದಿಂದ ಕಡೂರಿನ ಗೆದ್ಲೆ ಹಳ್ಳಿಯ ಬಯಲು ಬಸವೇಶ್ವರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಸಂಘದ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೊಳಂಬ ಸಂಗಮ- ಚಿಕ್ಕಮಗಳೂರು ಜಾತ್ರೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ