ಜಾಗೃತ ಯುವಕ ಸಂಘದ ಸನ್ಮಾನ ಸ್ವೀಕರಿಸಿದ ದಲಾಲಿ ವರ್ತಕರ ಸಂಘದ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕಾರಟಗಿನೂತನ ತಾಲೂಕು ಕೇಂದ್ರ ಸ್ಥಾನ ಪಡೆದರೂ ಆಡಳಿತಾತ್ಮಕವಾಗಿ ಇನ್ನೂ ಅನೇಕ ಕಾರ್ಯಗಳು ಜಾರಿಗೆ ಬಂದಿಲ್ಲ. ತಾಲೂಕು ಆಡಳಿತ ಕಚೇರಿಗಳ ಸಮರ್ಪಕ ಅನುಷ್ಠಾನಕ್ಕೆ ಮತ್ತು ಸಮಗ್ರ ಅಭಿವೃದ್ಧಿಗೆ ಸಂಘಟಿತ ಹೋರಾಟ ಅಗತ್ಯ ಎಂದು ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ ಕರೆ ನೀಡಿದರು.
ಇಲ್ಲಿನ ಹೊರವಲಯದಲ್ಲಿ ಜಾಗೃತ ಯುವಕ ಸಂಘ ಆಯೋಜಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಾರಟಗಿ ತಾಲೂಕಾ ಕೇಂದ್ರವಾಗಿ ಒಂದು ದಶಕ ಕಳೆದರೂ ತಾಲೂಕು ಕಚೇರಿಗಳು ಸಮರ್ಪಕ ಅನುಷ್ಠಾನಗೊಂಡಿಲ್ಲ, ಮುಖ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬೆಳೆಯುತ್ತಿರುವ ಪಟ್ಟಣಕ್ಕೆ ಭೂಮಾಪನ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ಇಲ್ಲಿ ಇನ್ನೂ ಕಾರ್ಯನಿರ್ವಹಿಸದೇ ಇರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ಜಾಗೃತ ಯುವಕ ಸಂಘದ ನೇತೃತ್ವದಲ್ಲಿ ತಾಲೂಕಾ ಕೇಂದ್ರಕ್ಕೆ ಅತ್ಯವಶ್ಯಕವಾಗಿರುವ ಮಿನಿ ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳ ಪ್ರಾರಂಭಕ್ಕೆ ಒತ್ತಾಯಿಸೋಣ ಎಂದರು.
ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕಿಗೆ ಅವಶ್ಯವಿರುವ ಡಿಗ್ರಿ ಕಾಲೇಜು, ಬಾಲಕಿಯರಿಗೆ ಪ್ರತ್ಯೇಕ ಪ್ರೌಢಶಾಲೆ ಸೇರಿದಂತೆ ಹತ್ತು ಹಲವು ಕಚೇರಿಗಳು ಸೇರಿದಂತೆ ಸಮಗ್ರ ಅನುಷ್ಠಾನಕ್ಕೆ ನಮ್ಮ ಸಂಘಟನೆಯಿಂದ ಒತ್ತಾಯಿಸಲಾಗುವುದು ಎಂದರು.ಇಲ್ಲಿನ ದಲಾಲಿ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ಪಗಡದಿನ್ನಿ ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು.
ಸೇರ್ಪಡೆ:ಜಾಗೃತ ಯುವಕ ಸಂಘಕ್ಕೆ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಶರಣುಸಾ ನಗಾರಿ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಮರೇಶ್ ಬಿಜಕಲ್, ಎಸ್‌ಡಿಎಮ್ ವಿದ್ಯಾಸಂಸ್ಥೆಯ ಸಿದ್ದು ವಳಕಲದಿನ್ನಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ವೀರನಗೌಡ ಬೇವಿನಾಳ, ಯಂಕೋಬ ಪತ್ತಾರ, ಆನಂದ ಹೊಳಗುಂದಿ, ಶಿವಕುಮಾರ್ ದೊಡ್ಲ, ಮಹಿಬೂಬ್ ಹಂಚಿ, ರಜಬ್ ಅಲಿ, ಮಂಜುನಾಥ್ ಹೊನಗುಡಿ, ಹನುಮಂತ ಡಂಕನಕಲ್, ಆನಂದ ಕುಲಕರ್ಣಿ, ವೀರೇಶ ವೀಣಾ ಸೌಂಡ್, ಮಂಜುನಾಥ ಪೋಟೋ ಸ್ಟುಡಿಯೋ, ಮಂಜುನಾಥ್ ಉಂತಕಲ್, ಹುಲಗೇಶ್ ಮ್ಯಾದಾರ್, ಶರಣಬಸವ ದೇವರಮನಿ, ನರೇಶ್ ಅಂಗಡಿ, ಭದ್ರಿ, ವೆಂಕಟೇಶ್ ಈಡಿಗೇರ್ ಸೇರಿದಂತೆ ೨೫ಕ್ಕೂ ಹೆಚ್ಚು ಜನರು ಸೇರ್ಪಡೆಗೊಂಡರು.
ಈ ವೇಳೆ ಪ್ರಹ್ಲಾದ ಜೋಷಿ, ಸಂದೀಪಗೌಡ, ಶರಣಪ್ಪ ಕೋಟ್ಯಾಳ, ರುದ್ರೇಶ ಮಂಗಳೂರು, ಯಮನಪ್ಪ ಮೂಲಿಮನಿ, ತಾಯಪ್ಪ ಕೋಟ್ಯಾಳ, ವೀರೇಶ್ ಕೋಟ್ಯಾಳ, ಅಮರೇಶ್ ಮೇಗೂರು, ರಾಮು ನಾಯಕ್, ಹನುಮಂತಪ್ಪ ನಾಯಕ್, ಅಮರೇಶ್ ಪಾಟೀಲ್ ಇತರರಿದ್ದರು. ಶರಣಪ್ಪ ಕಾಯಿಗಡ್ಡಿ ಕಾರ್ಯಕ್ರಮ ನಿರ್ವಹಿಸಿದರು.