ನಾಲ್ಕು ಹೆದ್ದಾರಿ ಬೈಪಾಸ್‌ ನಿರ್ಮಾಣಕ್ಕೆ ಶಿಲಾನ್ಯಾಸ

KannadaprabhaNewsNetwork |  
Published : Mar 11, 2024, 01:21 AM IST
೧೦ಕೆಎಲ್‌ಆರ್-೯ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಗಳ ಶಿಲಾನ್ಯಾಸ ಕಾಮಗಾರಿಗಳಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ೪ ರಸ್ತೆಗಳಿಗೂ ಶಿಲಾನ್ಯಾಸ ನೆರವೇರಿಸಿದ ಸಚಿವ ಗಡ್ಕರಿ ಹಾಗೂ ಸಂಸದ ಮುನಿಸ್ವಾಮಿ. | Kannada Prabha

ಸಾರಾಂಶ

ಶಿಡ್ಲಘಟ್ಟ-ಚಿಂತಾಮಣಿ-ಶ್ರೀನಿವಾಸಪುರ-ಮುಳಬಾಗಿಲುವರೆಗೂ ನಾಲ್ಕು ಪಥದ ರಸ್ತೆ ಅಂದಾಜು ೨೨೦೦ ಕೋಟಿ ವೆಚ್ಚದ ೮೮.೫೦ ಕಿಮೀ ಉದ್ದದ ಎನ್‌ಹೆಚ್-೪ರಲ್ಲಿ ಬೈಪಾಸ್ ನಿರ್ಮಾಣ ಕಾಮಗಾರಿಗೆ ನಡೆದ ಶಿಲಾನ್ಯಾಸ

ಕನ್ನಡಪ್ರಭ ವಾರ್ತೆ ಕೋಲಾರ

ಮೈಸೂರಿನಲ್ಲಿ ಭಾನುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ೨೨ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ್ದು, ಇದರಲ್ಲಿ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ರಸ್ತೆ ಕಾಮಗಾರಿಗಳೂ ಸೇರಿವೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದ್ದಾರೆ.

ಕಾರ್ಯಕ್ರಮದ ನಂತರ ದೂರವಾಣಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದಲ್ಲಿ ಅಂದಾಜು ೨೦೪ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-೬೯ ರಲ್ಲಿ ೧೦.೦೮ ಕಿಮೀ ಉದ್ದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ೨೧೪ ಕೋಟಿ ವೆಚ್ಚದ ೧೫.೪೦ ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ-೬೯ರಲ್ಲಿ ಬೈಪಾಸ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದಾಗಿ ತಿಳಿಸಿದರು.

ಚತುಷ್ಪತ ರಸ್ತೆ ನಿರ್ಮಾಣ

ಇದೇ ಸಂದರ್ಭದಲ್ಲಿ ೩೦ ಕೋಟಿ ರೂ ವೆಚ್ಚದಲ್ಲಿ ಸೇತುಬಂಧನ ಯೋಜನೆಯಡಿ ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ಹೊಸ ಆರ್‌ಒಬಿ ನಿರ್ಮಾಣ ಕಾಮಗಾರಿ ಹಾಗೂ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ-ಚಿಂತಾಮಣಿ-ಶ್ರೀನಿವಾಸಪುರ-ಮುಳಬಾಗಿಲುವರೆಗೂ ನಾಲ್ಕು ಪಥದ ರಸ್ತೆ ಅಂದಾಜು ೨೨೦೦ ಕೋಟಿ ವೆಚ್ಚದ ೮೮.೫೦ ಕಿಮೀ ಉದ್ದದ ಎನ್‌ಹೆಚ್-೪ರಲ್ಲಿ ಬೈಪಾಸ್ ನಿರ್ಮಾಣ ಕಾಮಗಾರಿಗೂ ಸಚಿವ ನಿತಿನ್ ಗಡ್ಕರಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾಗಿ ಸಂಸದರು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕ್ರಮಸಂಸದರು ಮಾಹಿತಿ ನೀಡಿ ತಮ್ಮ ಅವಧಿಯಲ್ಲಿ ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ೧೩೫ ಕೋಟಿ, ಮಾರಿಕುಪ್ಪಂ-ಕುಪ್ಪಂ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ೨೦೦ ಕೋಟಿ, ಅಮೃತ್ ಸಿಟಿ ಯೋಜನೆಯಡಿ ಕೋಲಾರ, ಕೆಜಿಎಫ್‌ಗೆ ೩೦೦ ಕೋಟಿ ರು.ಗಳ ಅನುದಾನ ದೊರೆತಿದೆ. ಅಮೃತ್ ಸರೋವರ್ ಯೋಜನೆಯಡಿ ೧೦.೯ಕೋಟಿ, ಕೋಲಾರಮ್ಮ,ಸೋಮೇಶ್ವರ,ಆವಣಿ ದೇವಾಲಯ ಅಭಿವೃದ್ದಿಗೆ ೩.೯೬ ಕೋಟಿ ರೂ, ಚೆನ್ನೈಕಾರಿಡಾರ್ ರಸ್ತೆಗೆ ೧೬.೫೦ ಸಾವಿರ ಕೊಟಿ ಅನುದಾನ ತಮ್ಮ ಅವಧಿಯಲ್ಲಿ ಬಂದಿದೆ ಎಂದು ತಿಳಿಸಿದ್ದಾರೆ.೬ಪಥಗಳ ರಸ್ತೆಗಾಗಿ ₹೩೮೬ ಕೋಟಿ ಕೋಲಾರ ಜಿಲ್ಲೆ ಗಡಿ ನಂಗಲಿವರೆಗೂ ೩೮೬ ಕೋಟಿ ರೂ ವೆಚ್ಚದಲ್ಲಿ ಆರು ಪಥದ ರಸ್ತೆ ನಿರ್ಮಾಣಕ್ಕೆ ಅನುದಾನ ಬಂದಿದೆ,ಚಿಂತಾಮಣಿ, ಶ್ರೀನಿವಾಸಪುರ ಬೈಪಾಸ್ ರಸ್ತೆಗಳಿಗೆ೫೧೮ ಕೋಟಿ ರೂ ಅನುದಾನ ನೀಡಲಾಗಿದೆ. ನರಸಾಪುರ,ವೇಮಗಲ್ ಕೈಗಾರಿಕೆಗಳ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ೪.೮ ಕೋಟಿ ರೂ, ಬಂಗಾರಪೇಟೆ-ಆಂಧ್ರಗಡಿವರೆಗೂ ರಸ್ತೆ ೪೨.೫೧ ಕೋಟಿ ರೂ ಪಿಎಂಜಿಎಸ್‌ವೈ ೧೫೦ ಕಿಮೀ ರಸ್ತೆಗಳಿಗಾಗಿ ೮೨೬೬ ಕೋಟಿ ರೂ ಅನುದಾನ ಬಂದಿದೆ ಎಂದು ತಿಳಿಸಿದ್ದಾರೆ.ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ ೮ ಕೋಟಿ ರೂ, ಬಂಗಾರಪೇಟೆ ಒಳಾಂಗಣಕ್ಕೆ ೨ ಕೋಟಿ,ಸಂಸದರ ಪ್ರದೇಶಾಭಿವೃದ್ದಿ ನಿಧಿಯಿಂದ ಜಿಲ್ಲೆಯ ೩೫ ಕಡೆಗಳಲ್ಲಿ ಅಗತ್ಯತೆ ಗಮನಿಸಿ ಹೈಮಾಸ್ ದೀಪ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ