ಸತ್ಯವಂತರ ಜೊತೆ ಇದ್ದರೇ ನಮ್ಮ ಜೀವನ ಪಾವನ

KannadaprabhaNewsNetwork |  
Published : Apr 14, 2024, 01:52 AM IST
೧೩ ಐಗಳಿ ೦೧  | Kannada Prabha

ಸಾರಾಂಶ

ಐಗಳಿ: ಮನೆಯಲ್ಲಿ ವಟಾ ವಟಾ ಎನ್ನುವ ಹೆಂಡತಿ ಇದ್ದರೇ, ನಿತ್ಯ ಮದ್ಯಪ್ರಿಯ ಮಗನಿದ್ದರೇ, ಗಂಡನ ಮನೆ ಬಿಟ್ಟ ಬಂದ ಮಗಳು ಮನೆಯಲ್ಲಿ ಇದ್ದರೇ ಆ ಮನೆ ಯಾವಾಗಲೂ ನರಕವಿದ್ದಂತೆ ಎಂದು ಕಕಮರಿಯ ಗುರುದೇವ ಆಶ್ರಮದ ಪೀಠಾಧ್ಯಕ್ಷ ಆತ್ಮಾರಾಮ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಐಗಳಿ ಮನೆಯಲ್ಲಿ ವಟಾ ವಟಾ ಎನ್ನುವ ಹೆಂಡತಿ ಇದ್ದರೇ, ನಿತ್ಯ ಮದ್ಯಪ್ರಿಯ ಮಗನಿದ್ದರೇ, ಗಂಡನ ಮನೆ ಬಿಟ್ಟ ಬಂದ ಮಗಳು ಮನೆಯಲ್ಲಿ ಇದ್ದರೇ ಆ ಮನೆ ಯಾವಾಗಲೂ ನರಕವಿದ್ದಂತೆ ಎಂದು ಕಕಮರಿಯ ಗುರುದೇವ ಆಶ್ರಮದ ಪೀಠಾಧ್ಯಕ್ಷ ಆತ್ಮಾರಾಮ ಸ್ವಾಮೀಜಿ ನುಡಿದರು.

ಇಲ್ಲಿಯ ಅಂಕಲ ಸಿದ್ದೇಶ್ವರ ದೇವರ ಜಾತ್ರೆಯ ಅಂಗವಾಗಿ 3ನೇ ದಿನದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸತ್ಯವಂತರ ಸಂಘದಲ್ಲಿ ಇದ್ದರೇ ಕಾಶಿ ಯಾತ್ರಾ ಏಕೆ ಬೇಕು? ನಾವು ಸತ್ಯವಂತರ ಜೊತೆ ಇದ್ದರೇ ನಮ್ಮ ಜೀವನ ಪಾವನ ಆಗಲಿದೆ. ಧರ್ಮ ರಕ್ಷಣೆ ಮಾಡುವ ಒಬ್ಬ ಕನಕದಾಸರು ಮತ್ತು ದೇಶ ರಕ್ಷಣೆ ಮಾಡುವ ಒಬ್ಬ ಸಂಗೋಳ್ಳಿ ರಾಯಣ್ಣ ನಂತಹ ಮಕ್ಕಳನ್ನು ಜನ್ಮಹೆತ್ತಬೇಕು. ೧೯೦ ದೇಶಗಳಲ್ಲಿ ಭಾರತ ದೇಶದಲ್ಲಿ ಮಠ ಮಂದಿರ ದೇವಾಲಯಗಳು ಅಧಿಕ ನಾಡ ಕಂಡ ಅನೇಕ ಸಂತರು ಇದ್ದಾರೆ. ಇದರಿಂದ ಸಂಸ್ಕಾರವಂತ ಭಾರತೀಯರಾಗಿ ಲಿಂ.ಸಿದ್ದೇಶ್ವರ ಸ್ವಾಮಿಗಳಿಗೆ ಕಿಸೆ ಇಲ್ಲದೆ ಜೀವನ ಸಾಗಿಸಿದವರು. ಇಂತಹವರೇ ಸತ್ಯವಂತರು ಎಂದು ಕರೆಯುತ್ತಾರೆ. ಸದೃಢವಂತ ಸಂಸ್ಕಾರವಂತ ದೇಶ ಪ್ರೇಮ ಮಾಡುವ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಬೇಕು. ದಾರಿ ತಪ್ಪುವ ಮಕ್ಕಳ ಮೇಲೆ ನಿಗಾ ವಹಿಸಿರಿ ಎಂದು ಸಲಹೆ ನೀಡಿದರು. ತುಂಗಳದ ಸಿದ್ದಲಿಂಗ ಶಾಂಭವಿ ಆಶ್ರಮದ ಮಾತೋಶ್ರೀ ಅನಸೂಯಾ ದೇವಿ ಮಾತನಾಡಿ, ಉತ್ತಮರು ಜೊತೆ ಇದ್ದರೇ ನಮ್ಮ ಬಾಳು ಬಂಗಾರವಾಗಲಿದೆ. ಒಳ್ಳೆಯ ಆಚಾರ, ವಿಚಾರ, ಪ್ರೀತಿ, ವಿಶ್ವಾಸ ಎಲ್ಲವನ್ನು ನೋಡಿ ಸಂಘದಲ್ಲಿ ಭಾಗಿಯಾಗಿರಿ ಎಂದರು.

ಪ್ರಾಸ್ತಾವಿಕ ಸಿದ್ದೇಶ್ವರ ಮಹಾರಾಜರು ಮಾತನಾಡಿದರು. ಈ ವೇಳೆ ಅಪ್ಪಾಸಾಬ್‌ ಪಾಟೀಲ, ಎ.ಎಸ್.ನಾಯಿಕ, ನಿಂಗನಗೌಡ ಪಾಟೀಲ, ಹಣಮಂತ ಕರಿಗಾರ, ಬಸವರಾಜ ಬಿರಾದಾರ, ಮಲ್ಲಪ್ಪ ಬೇವಿನಗಿಡದ, ಪರಶು ಹುಣಶಿಕಟ್ಟಿ, ಪರಶುರಾಮ ಸನದಿ, ರಮೇಶ ಹುಣಶಿಕಟ್ಟಿ, ಶಿವಾನಂದ ಸನದಿ, ಡಾ.ಎಸ್.ಎಸ್.ಸನದಿ ಸೇರಿದಂತೆ ಗುರು, ಹಿರಿಯರು ಯುವಕರು ಇದ್ದರು. ಪ್ರಾರಂಭದಲ್ಲಿ ನಿಂಗಪ್ಪ ದಳವಾಯಿ ಸ್ವಾಗತಿಸಿದರು. ಕೆ.ಎಸ್.ಬಿರಾದಾರ ನಿರೂಪಿಸಿದರು. ಕೊನೆಯಲ್ಲಿ ಅಣ್ಣಪ್ಪ ಬೇವಿನಗಿಡದ ವಂದಿಸಿದರು.

PREV

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ