ರಿಕ್ಷಾ, ಬಸ್ಸು ಹತ್ತಿ ಗಮನ ಸೆಳೆದ ಪದ್ಮರಾಜ್ ಪೂಜಾರಿ

KannadaprabhaNewsNetwork |  
Published : Apr 15, 2024, 01:16 AM IST
ಬಸ್ಸಿನಲ್ಲಿ ಪದ್ಮರಾಜ್‌ ಪೂಜಾರಿ ಅವರು ಮತಯಾಚನೆ ನಡೆಸಿದರು. | Kannada Prabha

ಸಾರಾಂಶ

ಪದ್ಮರಾಜ್ ಆರ್. ಪೂಜಾರಿ ಅವರು ಆಟೋ ರಿಕ್ಷಾ ಹತ್ತಿ ಪ್ರಚಾರ ನಡೆಸಿ ಗಮನ ಸೆಳೆದರು. ಕುತ್ತಾರು ಬಳಿ ಆಟೋ ಹತ್ತಿದ ಅವರು, ಆಸುಪಾಸಿನ ಪ್ರದೇಶಗಳಿಗೆ ಆಟೋದಲ್ಲೇ ತೆರಳಿ ಮತ ಯಾಚನೆ ನಡೆಸಿದರು. ಬಸ್ಸನ್ನೂ ಏರಿ ಪ್ರಯಾಣಿಕರ ಬಳಿ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯ ನಡೆಯಿತು. ಪದ್ಮರಾಜ್ ಜತೆ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮನೆ, ಅಂಗಡಿಗಳಿಗೆ ತೆರಳಿ ಮತ ಯಾಚನೆ ನಡೆಸಿದರು.

ಕೋಟೆಕಾರ್, ಕಾಪಿಕಾಡ್, ತಲಪಾಡಿಯ ಕೆ.ಸಿ. ರೋಡ್ ಜಂಕ್ಷನ್, ಕುಂಪಲ ಕ್ರಾಸ್, ಕುಂಪಲ ಆಶ್ರಯ ಕಾಲನಿ, ಪಿಲಾರು, ಕುತ್ತಾರು, ಅಂಬ್ಲಮೊಗರು, ಅಸೈಗೋಳಿ, ಕೊಣಾಜೆ, ಗ್ರಾಮಚಾವಡಿ ಮೊದಲಾದೆಡೆ ಪ್ರಚಾರ ಕಾರ್ಯ ನಡೆಸಲಾಯಿತು. ತಲಪಾಡಿ ಟೋಲ್ ಗೇಟ್ ಬಳಿಯಿಂದ ದೇವಿಪುರದವರೆಗೆ ಬೃಹತ್ ರೋಡ್ ಶೋ ನಡೆಯಿತು.

ರಿಕ್ಷಾ, ಬಸ್ಸು ಹತ್ತಿ ಪದ್ಮರಾಜ್ ಪ್ರಚಾರ:

ಈ ವೇಳೆ ಪದ್ಮರಾಜ್ ಆರ್. ಪೂಜಾರಿ ಅವರು ಆಟೋ ರಿಕ್ಷಾ ಹತ್ತಿ ಪ್ರಚಾರ ನಡೆಸಿ ಗಮನ ಸೆಳೆದರು. ಕುತ್ತಾರು ಬಳಿ ಆಟೋ ಹತ್ತಿದ ಅವರು, ಆಸುಪಾಸಿನ ಪ್ರದೇಶಗಳಿಗೆ ಆಟೋದಲ್ಲೇ ತೆರಳಿ ಮತ ಯಾಚನೆ ನಡೆಸಿದರು. ಬಸ್ಸನ್ನೂ ಏರಿ ಪ್ರಯಾಣಿಕರ ಬಳಿ ಮತಯಾಚಿಸಿದರು.

ಧಾರ್ಮಿಕ ಕ್ಷೇತ್ರಗಳ ಭೇಟಿ:

ಕೋಟೆಕಾರಿನ ಕಾಪಿಕಾಡ್ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾನುವಾರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳಿಕ ಕೋಟೆಕಾರು ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ, ಮುಂಡ್ಯತ್ತಾಯ ದೈವಸ್ಥಾನ, ತಲಪಾಡಿ ಶ್ರೀ ರಾಮ ಭಜನಾ ಮಂದಿರ, ಕುಂಪಲ ಶಿವಪುರ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರ ಕುಂಪಲ ಶಿವಪುರ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ, ಕುಂಪಲ ಆಶ್ರಯ ಕಾಲನಿಯಲ್ಲಿರುವ ಶ್ರೀ ಕೊರಗಜ್ಜ ಗುಳಿಗ ಕಟ್ಟೆ ಹಾಗೂ ಅಂಬ್ಲಮೊಗರು ಕೋಟಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಅಂಬ್ಲಮೊಗರು ಶ್ರೀ ಕೋರ್ದಬ್ಬು ದೈವಸ್ಥಾನ, ಹರೇಕಳ ವರೇಕಳ ಶ್ರೀ ಕ್ಷೇತ್ರ ವರೇಕಳ ನಾಗಬ್ರಹ್ಮ ಮೂಲಸ್ಥಾನ ಹಾಗೂ ಧೂಮಾವತಿ ಬಂಟ ಮತ್ತಿತರ ಪರಿವಾರ ದೈವಸ್ಥಾ‌ನಕ್ಕೆ ತೆರಳಿ ಪ್ರಸಾದ ಸ್ವೀಕರಿಸಲಾಯಿತು. ಇದೇ ಸಂದರ್ಭ ಕುತ್ತಾರು ಶ್ರೀ ಕೊರಗತನಿಯ ದೈವದ ಆದಿಸ್ಥಳ ಕ್ಷೇತ್ರಕ್ಕೆ ತೆರಳುವ ಸಂದರ್ಭ ಆಡಳಿತ ಕಚೇರಿಯಲ್ಲಿ ಸನ್ಮಾನಿಸಿದರು. ಅದೇ ರೀತಿ ರಾಣಿಪುರ ಮರಿ ವಿಶ್ವರಾಣಿ ಇಗರ್ಜಿ ಹಾಗೂ ಕೆ.ಸಿ. ರೋಡ್ ಮಸೀದಿ, ರೆಂಜಾಡಿ ಬೆಳ್ಮ ಕೇಂದ್ರ ಜುಮ್ಮಾ ಮಸೀದಿಗೆ ತೆರಳಿ ಪ್ರಾರ್ಥಿಸಿದರು.

ಎಲ್ಲೆಡೆ ಭವ್ಯ ಸ್ವಾಗತ:

ಪದ್ಮರಾಜ್ ಆರ್. ಪೂಜಾರಿ ಅವರು ಮತದಾರರನ್ನು ಭೇಟಿಯಾಗಲು ಬರುವಾಗ ಕಾರ್ಯಕರ್ತರು, ಮತದಾರರು ಭವ್ಯ ಸ್ವಾಗತ ಕೋರಿದರು. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪದ್ಮರಾಜ್ ಆರ್ ಪೂಜಾರಿ ಅವರು ಪ್ರತಿಯೊಬ್ಬ ನಾಗರಿಕರನ್ನು ಮಾತನಾಡಿಸುತ್ತಾ ತೆರಳಿದರು.

ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಆಲಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಕಾರ್ಯದರ್ಶಿ ಮನ್ಸೂರ್ ಆಲಿ, ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಕಣಚೂರು ಮೋನು, ಪಾವೂರು ಮೋನು ಮತ್ತಿತರರು ಇದ್ದರು.

ಫೋಟೊ

14ಪದ್ಮರಾಜ್‌

ಲಗತ್ತಿಸಲಾಗಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸ್‌ ರಸ್ತೆಯಲ್ಲಿ ಟೋಲ್‌ ಕಟ್ಟಬೇಡಿ: ಕುಮಾರಸ್ವಾಮಿ
ಕೆಪಿಎಸ್ಸಿ ನೇಮಕ ಹಗರಣ : ಮತ್ತೆ ಸಾಹುಕಾರ್‌ ಸಸ್ಪೆಂಡ್‌ಗೆ ಸಚಿವ ಸಂಪುಟ ಶಿಫಾರಸು