ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ಡಿಎಚ್‌ಒ ಡಾ. ನೀಲಗುಂದ

KannadaprabhaNewsNetwork | Published : Jan 30, 2024 2:03 AM

ಸಾರಾಂಶ

ನೌಕರರು ದೈಹಿಕ ಮಾನಸಿಕವಾಗಿ ಸದೃಢಗೊಂಡು ತಮ್ಮ ನಿತ್ಯ ಜೀವನ ಮತ್ತು ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲು ಕ್ರೀಡೆಗಳು ತುಂಬ ಸಹಕಾರಿಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.

ಗದಗ: ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಜಿಲ್ಲಾ ಘಟಕದಿಂದ ೨೦೨೪ ಪ್ರಜಾರಾಜ್ಯೋತ್ಸವದ ಅಂಗವಾಗಿ ಪ್ರಜಾರಾಜ್ಯೋತ್ಸವ ಹೆಲ್ತ್ ಕಪ್ ಕ್ರಿಕೆಟ್ ಆಯೋಜನೆ ಮಾಡಿದ್ದು ನೌಕರರು ದೈಹಿಕ ಮಾನಸಿಕವಾಗಿ ಸದೃಢಗೊಂಡು ತಮ್ಮ ನಿತ್ಯ ಜೀವನ ಮತ್ತು ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲು ಕ್ರೀಡೆಗಳು ತುಂಬ ಸಹಕಾರಿಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.

ನಗರದಲ್ಲಿ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಜಿಲ್ಲಾ ಘಟಕ ದಿಂದ ೨೦೨೪ ಪ್ರಜಾರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾದ ಪ್ರಜಾರಾಜ್ಯೋತ್ಸವ ಹೆಲ್ತ್ ಕಪ್ ಕ್ರಿಕೆಟ್ ಲೀಗ್ ಟೂರ್ನಾಮೆಂಟ್ ಸೀಸನ್ ೨ರ ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ತಮ್ಮ ರಜೆಯ ದಿನಗಳಲ್ಲಿ ಕ್ರೀಡಾ ಕೂಟವನ್ನು ಆಯೋಜನೆ ಮಾಡಿದ್ದು ಸಂಘದ ಕಾರ್ಯವನ್ನು ಮೆಚ್ಚುವಂತದ್ದಾಗಿದೆ. ಮುಂದಿನ ವರ್ಷ ಎಲ್ಲ ಆರೋಗ್ಯ ಇಲಾಖೆಯ ಮಹಿಳೆಯರು ಮತ್ತು ಪುರುಷರಿಗಾಗಿ ವಿಶೇಷ ಕ್ರೀಡೆಗಳನ್ನು ಆಯೋಜನೆ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ.ಎನ್.ಲಿಂಗದಾಳ ಮಾತನಾಡಿ, ಎಲ್ಲಾ ಇಲಾಖೆಗಳ ನೌಕರರು ಕ್ರೀಡೆಯನ್ನು ಸಂಘಟಿಸಿ ನೌಕರರನ್ನು ದೈಹಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ನೋಡಿದಾಗಿ ನಮ್ಮ ರೋಗ್ಯ ಇಲಾಖೆಯಲ್ಲಿ ನಮ್ಮ ಆರೋಗ್ಯ ನಿರೀಕ್ಷಣಾಧಿಕಾರಿಗಳು ಕ್ರೀಡಾ ಪಟುಗಳು ಬಹಳಷ್ಟು ಇರುವುದನ್ನು ಗಮನಿಸಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದ್ದು, ಈ ಪ್ರಜಾರಾಜ್ಯೋತ್ಸವ ಹೆಲ್ತ್ ಕಪ್ ಕ್ರಿಕೆಟ್ ಲೀಗ್ ಟೂರ್ನಾಮೆಂಟ್‌ಗೆ ಇಲಾಖೆಯ ಮುಖ್ಯಸ್ಥರು ಪ್ರೋತ್ಸಾಹ ಮತ್ತು ಬಹುಮಾನಗಳನ್ನು ಆರ್ಥಿಕ ಸಹಾಕರ ನೀಡಿರುವುದರಿಂದ ಸೀಜ್ ೧ ಹಾಗೂ ಸೀಜನ್ ೨ ಹೆಲ್ತ್ ಕಪ್ ಟೂರ್ನಾಮೆಂಟ್ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದರು.

ಈ ವೇಳೆ ನರಗುಂದ ತಾಲೂಕಾ ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನ್ನವರ ಮಾತನಾಡಿದರು.

ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎಲ್. ನಾರಾಯಣಸ್ವಾಮಿ, ಮಹಾವೀರ ಜೈನ್, ಡಾ. ವೆಂಕಟೇಶ್ ರಾಠೋಡ್, ಡಾ. ಬಿ.ಎಸ್. ಭಜಂತ್ರಿ, ರಾಜ್ಯ ನೌಕರ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಯ್ ಕುಮಾರ್ ಕಲಾಲ್, ಮಲ್ಲಿಕಾರ್ಜುನ್ ಕಲಕಂಬಿ, ದೇವಪ್ಪ ಲಿಂಗದಾಳ, ಆರೋಗ್ಯ ನಿರೀಕ್ಷಣಾಧಿಕರಿಗಳ ಸಂಘದ ಅಧ್ಯಕ್ಷ ಬಿ.ಸಿ. ಹಿರೇಹಾಳ, ಏಕನಾಥಗೌಡ ಪಾಟೀಲ, ಕೆ.ವಿ. ಬಡಿಗೇರ, ವೈ.ಎನ್. ಕಡೆಮನಿ, ಸಿಎಚ್‌ಒ ಚಂದ್ರು ಪೂಜಾರ, ನಿರ್ಣಾಯಕ ಶೀವು ಕರಡಿ, ಪ್ರಭು ಹೊನಗುಡಿ, ಚಿದಾನಂದ ಕುಂಬಾರ, ವಿಜಯಲಕ್ಷ್ಮಿ ಚಲವಾದಿ, ಶಾಮುಲ್ ಕರಡಿಗುಡ್ಡ, ಬಸವರಾಜ್ ಸೋಮಗೊಂಡ, ಯಲ್ಲಪ್ಪ ಹಗೇದಾಳ ಉಪಸ್ಥಿತರಿದ್ದರು.

Share this article