ಪಾವಗಡ: ಫಲಾನುಭವಿಗಳಿಗೆ ಪಂಪ್‌ಸೆಟ್‌ ವಿತರಿಸಿದ ಶಾಸಕ ವೆಂಕಟೇಶ್‌

KannadaprabhaNewsNetwork | Published : Feb 19, 2024 1:36 AM

ಸಾರಾಂಶ

ಕರ್ನಾಟಕ ಆದಿಜಾಂಬವ ನಿಗಮ ಮಂಡಳಿಯ ವತಿಯಿಂದ ಶನಿವಾರ ಗಂಗಾ ಕಲ್ಯಾಣ ಯೋಜನೆಯಡಿ 19 ಮಂದಿ ಆರ್ಹ ರೈತ ಫಲಾನುಭವಿಗಳಿಗೆ ಕೊಳವೆಬಾವಿಯ ಪಂಪ್‌ಸೆಟ್‌ ಸಾಮಗ್ರಿಗಳನ್ನು ಶಾಸಕ ಎಚ್‌.ವಿ. ವೆಂಕಟೇಶ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕರ್ನಾಟಕ ಆದಿಜಾಂಬವ ನಿಗಮ ಮಂಡಳಿಯ ವತಿಯಿಂದ ಶನಿವಾರ ಗಂಗಾ ಕಲ್ಯಾಣ ಯೋಜನೆಯಡಿ 19 ಮಂದಿ ಆರ್ಹ ರೈತ ಫಲಾನುಭವಿಗಳಿಗೆ ಕೊಳವೆಬಾವಿಯ ಪಂಪ್‌ಸೆಟ್‌ ಸಾಮಗ್ರಿಗಳನ್ನು ಶಾಸಕ ಎಚ್‌.ವಿ. ವೆಂಕಟೇಶ್‌ ವಿತರಿಸಿದರು.

ಪಂಪುಸೆಟ್‌ ವಿತರಿಸಿ ಮಾತನಾಡಿದ ಅವರು, ಜಿಲ್ಲಾ ಅದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಕಳೆದ 2021-22 ಹಾಗೂ 22-23ನೇ ಸಾಲಿನಲ್ಲಿ ಆಯ್ಕೆಯಾದ ತಾಲೂಕಿನ 19ಮಂದಿ ಬಡ ಫಲಾನುಭವಿಗಳ ಕೊಳವೆಬಾವಿ ಕೊರೆಸಿದ್ದು, ಈ ಸಂಬಂಧ ಕೊಳವೆಬಾವಿಯಿಂದ ನೀರೆತ್ತಲು ಮೋಟಾರ್‌ ವೈರು, ಪೈಪು ಸ್ಟಾಟರ್‌ ಸೇರಿದಂತೆ ಇತರೆ ಅಗತ್ಯ ಪಂಪ್‌ಸೆಟ್‌ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.

ತಲ ಕೊಳ‍ವೆಬಾವಿಯ ಘಟಕದ ವೆಚ್ಚ 4.75ಲಕ್ಷ ರು.ಗಳಾಗಿದ್ದು ಒಟ್ಟು 90.25ಲಕ್ಷ ರು.ಗಳ ವೆಚ್ಚದ ಪಂಪ್‌ಸೆಟ್‌ ಸಾಮಗ್ರಿಗಳಲ್ಲು ತಾಲೂಕಿನ 19ಮಂದಿ ರೈತ ಫಲಾನುಭವಿಗಳಿಗೆ ವಿತರಿಸಲಾಗಿದೆ. ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಅದಿಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯರಾಮ್‌ ಮಾತನಾಡಿ, ಬಡ ರೈತರ ಪ್ರಗತಿಗೆ ಸರ್ಕಾರ ಗಂಗಕಲ್ಯಾಣ ಯೋಜನೆ ಅಡಿ ಕೊಳವೆಬಾವಿಯನ್ನು ಕೊರೆಸಿದ್ದು 19ಮಂದಿ ಫಲಾನುವಿಗಳ ಕೊಳವೆಬಾವಿ ಕೊರೆಯುವಿಕೆ ಹಾಗೂ ಮೋಟಾರ್‌ ಹಾಗೂ ಇತರೆ ಪಂಪ್‌ಸೆಟ್‌ ಸಾಮಗ್ರಿಗಳಿಗೆ ಒಟ್ಟು 90.75ಲಕ್ಷ ರು. ವಿನಿಯೋಗಿಸಲಾಗಿದೆ. ಪಂಪ್‌ಸೆಟ್‌ಗಳ ಸಾಮಗ್ರಿಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

ತಾಲೂಕು ಕಾಂಗ್ರೆಸ್‌ ಮುಖಂಡರಾದ ಎ. ಶಂಕರರೆಡ್ಡಿ, ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌ (ನಾನಿ) ಪುರಸಭೆ ಸದಸ್ಯರಾದ ಪಿ.ಎಚ್‌. ರಾಜೇಶ್‌, ತೆಂಗಿನಕಾಯಿ ರವಿ, ಮಾಜಿ ಎಪಿಎಂಸಿ ಅಧ್ಯಕ್ಷ ವಿಶೇಶ್ವರಯ್ಯ, ತಾಲೂಕು ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ವಿರಪಸಮುದ್ರ ರಾಮಾಂಜಿನಪ್ಪ, ಗುಮ್ಮಘಟ್ಟ ಶ್ರೀನಿವಾಸಲು, ಕೆ.ಟಿ. ಹಳ್ಳಿ ರಾಮಾಂಜಿನಪ್ಪ, ಅಮರ್‌ ಹಾಗೂ ಜಿಲ್ಲಾ ಅದಿಜಾಂಬವ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ರಾಜಶೇಖರ್‌ ಇತರೆ ಆನೇಕ ಮಂದಿ ಗಣ್ಯರು ಹಾಗೂ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿದ್ದರು.

Share this article