ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಪಕ್ಷಾತೀತ ಒಂದಾಗಿ

KannadaprabhaNewsNetwork | Published : May 23, 2025 12:53 AM
ಕನ್ನಡಪ್ರಭ ವಾರ್ತೆ ಇಂಡಿ ಜ್ಞಾನದಾಸೊಹಿ ಸಿದ್ದೇಶ್ವರ ಶ್ರೀಗಳು, ಬಸವಣ್ಣನವರು, ಬಂಥನಾಳದ ಸಂಗನಬಸವ ಸ್ವಾಮೀಜಿ, ವಚನ ಪಿತಾಮಹ ಫ.ಗು.ಹಳಕಟ್ಟಿ, ಭಾಸ್ಕರಾಚಾರ್ಯರಂತ ಶರಣರು ಹುಟ್ಟಿದ ಜಿಲ್ಲೆಯಲ್ಲಿ ಇತ್ತೀಚೆಗೆ ರಾಜಕೀಯ ಆರೋಪ ಪ್ರತ್ಯಾರೋಪದಿಂದ ಜಿಲ್ಲೆಯ ಹೆಸರು ಹಾಳಾಗುತ್ತಿದೆ. ರಾಜಕೀಯ ನಾಯಕರು, ಜನಪ್ರತಿನಿಧಿಗಳು ಸ್ವಪ್ರತಿಷ್ಠೆ ಬಿಟ್ಟು, ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು ಎಂದು ರಾಜಕೀಯ ಯುವ ಚಿಂತಕರ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಇಂಡಿ

ಜ್ಞಾನದಾಸೊಹಿ ಸಿದ್ದೇಶ್ವರ ಶ್ರೀಗಳು, ಬಸವಣ್ಣನವರು, ಬಂಥನಾಳದ ಸಂಗನಬಸವ ಸ್ವಾಮೀಜಿ, ವಚನ ಪಿತಾಮಹ ಫ.ಗು.ಹಳಕಟ್ಟಿ, ಭಾಸ್ಕರಾಚಾರ್ಯರಂತ ಶರಣರು ಹುಟ್ಟಿದ ಜಿಲ್ಲೆಯಲ್ಲಿ ಇತ್ತೀಚೆಗೆ ರಾಜಕೀಯ ಆರೋಪ ಪ್ರತ್ಯಾರೋಪದಿಂದ ಜಿಲ್ಲೆಯ ಹೆಸರು ಹಾಳಾಗುತ್ತಿದೆ. ರಾಜಕೀಯ ನಾಯಕರು, ಜನಪ್ರತಿನಿಧಿಗಳು ಸ್ವಪ್ರತಿಷ್ಠೆ ಬಿಟ್ಟು, ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು ಎಂದು ರಾಜಕೀಯ ಯುವ ಚಿಂತಕರ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಳು ಮುಳಜಿ, ಮಹೇಶ ಹೂಗಾರ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಗಳು ಹಾಗೂ ರಾಜಕೀಯ ಮುಖಂಡರು ಆರೋಪ ಪ್ರತ್ಯಾರೋಪದಲ್ಲಿಯೇ ತೊಡಗಿದ್ದಾರೆ. ಎಲ್ಲಾ ಪಕ್ಷದ ಚುನಾಯಿತ ಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ಹಾಗೂ ನೀರಾವರಿ ಕಡೆ ಗಮನ ಹರಿಸಿ ಜಿಲ್ಲೆ ನೀರಾವರಿ ಮಾಡಿದ್ದರೆ, ದೇವರೆಂದು ಪೂಜಿಸುತ್ತಾರೆ. ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು ಎಂಬುದು ವೇದಿಕೆ ಕಳಕಳಿ ಎಂದರು.ಜಿಲ್ಲೆಯ ನಮ್ಮ ನಾಯಕರು, ನಮ್ಮನ್ನಾಳುವವರ ವರ್ತನೆ, ನಡತೆ, ಮಾತು, ಕೃತಿಗಳು ಎಲ್ಲವೂ ಮಾದರಿಯಾಗಿರಬೇಕಲ್ಲವೇ?. ಜಿಲ್ಲೆ ಹಾಗೂ ಮತದಾರರ ಘನತೆಯನ್ನು ಹೆಚ್ಚಿಸಬೇಕಲ್ಲವೇ? ಎಂದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಾಯಿಯಂತೆ ಮಗಳು, ತಂದೆಯಂತೆ ಮಗ, ಗುರುವಿನಂತೆ ಸಮಾಜ, ಪ್ರತಿನಿಧಿಗಳಂತೆ ಪ್ರಜೆಗಳು ಎಂಬುದುರ ಕಡೆ ಗಮನ ಹರಿಸಬೇಕು. ಮತಕೊಟ್ಟು ಆಯ್ಕೆಮಾಡಿ ಕಳಿಸಿದವರ ನಡೆ,ನುಡಿ ಮಾದರಿಯಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪ್ರಜೆಯ ಆಶಯವಾಗಿದೆ. ಆದರೆ, ಜಿಲ್ಲೆಯ ನಾಯಕರ ಕಿತ್ತಾಟದಿಂದ ಜನತೆ ಮುಜುಗರಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಆಲಮಟ್ಟಿ ಅಣ್ಣೆಕಟ್ಟನ್ನು 519 ರಿಂದ 524ವರಗೆ ಎತ್ತರಿಸಲು ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಒಂದಾಗಿ ಶ್ರಮಿಸಬೇಕು. ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರಿಸಿ ಜಿಲ್ಲೆಗೆ ಅಂಟಿಕೊಂಡ ಭೀಕರ ಬರಗಾಲವನ್ನು ಹೊಡೆದೂಡಿಸುವ ಚಿಂತನೆ ಕಡೆಗೆ ಒಲವು ತೋರಿಸಿ, ಅನ್ನದಾತ ರೈತರಿಗೆ ಅನುಕೂಲ ಕಲ್ಪಿಸಬೇಕು. ಪಕ್ಕದ ಕಲಬುರಗಿ, ಯಾದಗಿರಿ ಜಿಲ್ಲೆಯ ಎಲ್ಲ ಪಕ್ಷದ ಪ್ರತಿನಿಧಿಗಳು ಒಂದಾಗಿ ಹೋರಾಟ ಮಾಡಿ 371 ಜೆ (ಕಲಂ) ಪಡೆದು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಯಾವಾಗ ಒಂದಾಗುತ್ತಿರಿ ಎಂದು ಪ್ರಶ್ನಿಸಿದರು.ನೆರೆಯ ಬಾಗಲಕೋಟ ಜಿಲ್ಲೆ ಕೃಷ್ಣಾ ಯೋಜನೆಯಿಂದ ಬಾಧಿತವಾಗಿದ್ದು, ಅಲ್ಲಿನ ರೈತರು ಕೃಷ್ಣ ಪುನರ್ ವಸತಿ ಯೋಜನೆಗಾಗಿ ಹೋರಾಟ ಮಾಡಿ ಯಶಸ್ವಿ ಕಂಡರು. ಧಾರವಾಡ - ಹುಬ್ಬಳಿ ಕಳಸಾ ಬಂಡೂರಿ ಮಹದಾಯಿ ಯೋಜನೆ ಜಲ ವಿವಾದ ಸುಮಾರು 5 ದಶಕಗಳಿದ ಈ ಯೋಜನೆ ನೆನಗುದ್ದಿಗೆ ಬಿದ್ದಿತ್ತು, ಜಿಲ್ಲೆಯ ಎಲ್ಲಾ ಪಕ್ಷದ ಪ್ರತಿನಿಧಿಗಳು ಒಂದಾಗಿ ಪಕ್ಷಾತೀತವಾಗಿ ಹೋರಾಟ ಮಾಡಿ ತಮ್ಮ ಪಾಲಿನ ಹಕ್ಕಿನ ನೀರು ಪಡೆದರು. ಜಿಲ್ಲೆಯ ಜನಪ್ರತಿನಿಧಿಗಳು ಒಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಯಾವಾಗ ಒಂದಾಗುತ್ತಿರಿ ಎಂದು ಪ್ರಶ್ನಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ದೇವರ, ಅನೀಲಗೌಡ ಬಿರಾದಾರ, ವಿಜಯಕುಮಾರ ರಾಠೋಡ, ಪ್ರಶಾಂತ ಲಾಳಸಂಗಿ, ಈರಣಗೌಡ ಪಾಟೀಲ ಇತರರು ಇದ್ದರು.