ಕೊರಟಗೆರೆ ಚಳಿಗೆ ಬೆಂಕಿ ಮುಂದೆ ಕೂತ ಜನರು

KannadaprabhaNewsNetwork |  
Published : Dec 19, 2024, 12:31 AM IST
ಚಳಿಗೆ ಬೆಂಕಿ ಮುಂದೆ ಕೂತ ಜನರು | Kannada Prabha

ಸಾರಾಂಶ

ರಾಜ್ಯದ ವಿವಿಧೆಡೆ ತಾಪಮಾನ ಕುಸಿತದಿಂದ ಚಳಿ ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳಿಂದ ವಿಪರೀತ ಚಳಿಯಾಗಿ ಜನರು ೮ ಗಂಟೆಯಾದರೂ ಚಳಿ ಇರುವ ಕಾರಣ ಜನರು ಬೆಂಕಿ ಮುಂದೆ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ ರಾಜ್ಯದ ವಿವಿಧೆಡೆ ತಾಪಮಾನ ಕುಸಿತದಿಂದ ಚಳಿ ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳಿಂದ ವಿಪರೀತ ಚಳಿಯಾಗಿ ಜನರು ೮ ಗಂಟೆಯಾದರೂ ಚಳಿ ಇರುವ ಕಾರಣ ಜನರು ಬೆಂಕಿ ಮುಂದೆ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಸೇರಿದಂತೆ ರಾಜ್ಯದ್ಯಾಂತ ಚಳಿ ಜಾಸ್ತಿಯಾಗುತ್ತಿದ್ದು, ಜನರು ಮನೆಯಿಂದ ಹೊರಲು ಆಗದೆ ಬೆಚ್ಚನೆ ಹೊದಕೆಯಿಂದ ಮನೆಯಲ್ಲಿ ಇರುವಂತಾಗಿದೆ. ಸಂಜೆ ೫ ಗಂಟೆಯಿಂದ ಬೆಳಿಗ್ಗೆ ೯ ಗಂಟೆಯಾದರೂ ಚಳಿ ಹೋಗುತ್ತಿಲ್ಲ, ಜನರು ಹೊರಗಡೆ ಬರದೆ ಮನೆಯಲ್ಲಿ ಹಾಗೂ ಬೆಂಕಿ ಮುಂದೆ ಕೂತು ಕೊಳ್ಳುತ್ತಿದ್ದಾರೆ. ಈಗಾಗಲೇ ೧೫ ಡಿಗ್ರಿ ಸೆಲ್ಷಿಯಸ್ ಚಳಿ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ದಟ್ಟವಾದ ಮಂಜು ಕವಿಯುತ್ತಿದ್ದು, ಇಬ್ಬನಿಯಿಂದಾಗಿ ೧೦ ಅಡಿ ದೂರದಲ್ಲಿರುವ ವ್ಯಕ್ತಿ ಅಥವಾ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ವಯಸ್ಸಾದವರು ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವುದು ಕಷ್ಟವಾಗುತ್ತಿದೆ, ಮುಂದೆ ಬರುವವರು ಕಾಣಿಸದೆ ಎಷ್ಟೋ ಅಪಘಾತಗಳು ಸಂಭವಿಸಿವೆ. ಆರೋಗ್ಯದಲ್ಲಿ ಏರುಪೇರು ಈ ಬಾರಿ ಎಂದು ನೋಡಿರದ ಚಳಿಯಾಗುತ್ತಿದ್ದು, ಚಳಿಗೆ ಮಕ್ಕಳು ಹಾಗೂ ವಯಸ್ಸಾದ ವೃದ್ಧರು ಮನೆಯಿಂದ ಹೊರಗಡೆ ಬಂದರೆ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚಾಗಿದೆ, ಚಳಿಗೆ ನೆಗಡಿ ಕಾಣಿಸಿಕೊಂಡರೆ ಯಾರು ನಿರ್ಲಕ್ಷ್ಯ ಮಾಡಬೇಡಿ ಯಾಕೆಂದರೆ ಸೋಂಕು ಹೆಚ್ಚಾಗಿ ಜ್ವರಕ್ಕೆ ತಿರುಗಿ ಮೈ ಕೈ ನಡುಗಲು ಪ್ರಾರಂಭಿಸುತ್ತದೆ, ಅದರಿಂದ ಮಕ್ಕಳು ಹಾಗೂ ವಯಸ್ಸಾದ ವೃದ್ದರು ಚಳಿಗೆ ಮನೆಯಲ್ಲಿ ಇದ್ದರೆ ಒಳ್ಳೆಯದು ಎಂದು ವೈದ್ಯರುಗಳು ಎಚ್ಚರಿಕೆ ನೀಡಿದ್ದಾರೆ.

ಕೋಟ್‌

ಈಗಾಗಲೇ ಚಳಿಗಾಲ ಪ್ರಾರಂಭವಾಗಿದ್ದು, ಈ ಬಾರಿ ಅತಿಹೆಚ್ಚು ಕೊರತೆ ಜಾಸ್ತಿಯಾಗಿದ್ದು, ಮಕ್ಕಳು ಹಾಗೂ ವೃದ್ದರು ಚಳಿ ಸಂದರ್ಭದಲ್ಲಿ ಹೊರಗಡೆ ಬಾರದೆ ಮನೆಯಲ್ಲಿ ಇರುವುದು ಒಳ್ಳೆಯದು, ಇತ್ತೀಚಿಗೆ ಹವಮಾನ ಏರುಪೇರಿನಿಂದ ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚು ಮಕ್ಕಳು ಶೀತ, ನೆಗಡಿ, ಕೆಮ್ಮು, ಜ್ವರದಿಂದ ಆಸ್ಪತ್ರೆ ಬರುತ್ತಿದ್ದಾರೆ, ತಮ್ಮ ಮಕ್ಕಳನ್ನು ಜೋಪಾನ ಮಾಡುವುದು ಪೋಷಕರ ಕರ್ತವ್ಯ. ಡಾ.ಲಕ್ಷ್ಮೀಕಾಂತ. ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಕೊರಟಗೆರೆ

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ