ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ: ಡಿಸಿ

KannadaprabhaNewsNetwork |  
Published : Mar 16, 2024, 01:45 AM IST
15ಡಿಡಬ್ಲೂಡಿ4ದಿವ್ಯಪ್ರಭು, ಜಿಲ್ಲಾಧಿಕಾರಿಗಳ | Kannada Prabha

ಸಾರಾಂಶ

ಕನ್ನಡ ಭಾಷೆಯ ಬಳಕೆ ಉದ್ದೇಶಕ್ಕಾಗಿ ಕನ್ನಡ ಜ್ಞಾನವನ್ನು ಹೊಂದಿರುವ ಸಂಸ್ಥೆಯ ಹಿರಿಯ ಉದ್ಯೋಗಿಯ ನೇತೃತ್ವದಲ್ಲಿ ಕನ್ನಡ ಕೋಶ ಸ್ಥಾಪಿಸಬೇಕು.

ಧಾರವಾಡ:

ಜಿಲ್ಲೆಯಲ್ಲಿ ನಾಮ ಫಲಕಗಳನ್ನು ಮುದ್ರಿಸುವಾಗ ಶೇ. 60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್, ಸಮಾಲೋಚನ ಕೇಂದ್ರಗಳು, ಪ್ರಯೋಗಾಲಯ, ಮನೋರಂಜನ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳ ತಮ್ಮ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಶೇ. 60ರಷ್ಟು ಪ್ರದರ್ಶಿಸತಕ್ಕದ್ದು ಎಂದು ಸೂಚಿಸಿದರು.ಯಾವುದೇ ಕೈಗಾರಿಕೆ, ಅಂಗಡಿ, ಫಾರ್ಮ್ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಕನ್ನಡ ಅಧಿನಿಯಮದ ಪ್ರಕರಣಗಳ ಪಾಲಿಸಲು ವಿಫಲವಾದರೆ, ಮೊದಲನೇಯ ಅಪರಾಧಕ್ಕಾಗಿ ₹ 5 ಸಾವಿರ ವರೆಗೆ ದಂಡ, 2ನೇ ಅಪರಾಧಕ್ಕಾಗಿ ₹ 10 ಸಾವಿರ ದಂಡ, ನಂತರ ಪ್ರತಿ ಅಪರಾಧಕ್ಕಾಗಿ ₹ 20 ಸಾವಿರ ದಂಡ ವಿಧಿಸುವುದಲ್ಲದೇ, ಪರವಾನಗಿ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡೆತನದ ಕೈಗಾರಿಕಾ ಸಂಸ್ಥೆ ಸಾರ್ವಜನಿಕ ವಲಯ, ಉದ್ಯಮ, ಬ್ಯಾಂಕ್‌ ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಬಳಸತಕ್ಕದ್ದು. ಫಲಕ, ಜಾಹೀರಾತು, ರಸೀದಿ, ಬಿಲ್ಲು ಹಾಗೂ ನೋಟಿಸ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು ಎಂದು ತಿಳಿಸಿದರು. ಕನ್ನಡ ಕೋಶ ಸ್ಥಾಪನೆ..ರಾಜ್ಯದೊಳಗಿನ 100ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡೆತನದ ಪ್ರತಿಯೊಂದು ಕೈಗಾರಿಕಾ ಸಮಿತಿ, ಸಾರ್ವಜನಿಕ ವಲಯ, ಉದ್ಯಮ, ಬ್ಯಾಂಕ್‌ ಮತ್ತು ಖಾಸಗಿ ಕೈಗಾರಿಕೆಗಳು, ಸಂಸ್ಥೆಯ ದಿನನಿತ್ಯದ ಕಾರ್ಯದ ಪ್ರಕಾರಗಳ ಹಾಗೂ ನಿಯಮಿಸಬಹುದಾದಂಥ ಇತರೆ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಕನ್ನಡ ಭಾಷೆಯ ಬಳಕೆ ಉದ್ದೇಶಕ್ಕಾಗಿ ಕನ್ನಡ ಜ್ಞಾನವನ್ನು ಹೊಂದಿರುವ ಸಂಸ್ಥೆಯ ಹಿರಿಯ ಉದ್ಯೋಗಿಯ ನೇತೃತ್ವದಲ್ಲಿ ಕನ್ನಡ ಕೋಶ ಸ್ಥಾಪಿಸಬೇಕು. ಕನ್ನಡ ಭಾಷೆ ಮಾತನಾಡಲು ಬಾರದಿರುವ ಉದ್ಯೋಗಿಗಳಿಗೆ ವ್ಯವಹಾರಿಕ ಕನ್ನಡ ಭಾಷೆ ಪರಿಚಯಿಸಲು ಕನ್ನಡ ಕಲಿಕಾ ಘಟಕ ಸ್ಥಾಪಿಸುವುದು ಹಾಗೂ ಬ್ಯಾಂಕ್‌ಗಳಲ್ಲಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿ ಸಾರ್ವಜನಿಕರೊಂದಿಗೆ ತನ್ನ ಎಲ್ಲ ಸಂಪರ್ಕ ಹಾಗೂ ಪತ್ರ ವ್ಯವಹಾರದಲ್ಲಿ ಸಹ ಕನ್ನಡ ಭಾಷೆಯನ್ನು ಬಳಸತಕ್ಕದ್ದು ಎಂದು ಸೂಚಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ