ಸಮಾಜಮುಖಿ ಕಾರ್ಯ ನಿರ್ವಹಿಸಿ

KannadaprabhaNewsNetwork |  
Published : Jul 08, 2024, 12:32 AM IST
ಕಾರ್ಯಕ್ರಮದಲ್ಲಿ ಜ. ಫಕೀರ ಸಿದ್ದರಾಮ ಶ್ರೀಗಳು ಮಾನಾಡಿದರು. | Kannada Prabha

ಸಾರಾಂಶ

ಮಾನವ ಜನ್ಮ ದೊಡ್ಡದು, ಸೇವೆ ಪರೋಪಕಾರದ ಮೂಲಕ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು

ಗದಗ: ಸಕಲ ಜೀವಾತ್ಮಕ್ಕೂ ಲೇಸು ಬಯಸಬೇಕೆನ್ನುವ ಶರಣರ ವಾಣಿ ಪಾಲಿಸುತ್ತ ಬಂದಿರುವ ಅಂತಾರಾಷ್ಟ್ರೀಯ ರೋಟರಿ ಕ್ಲಬ್‌ನ ಉದ್ದೇಶವನ್ನು ಸಾಕಾರಗೊಳಿಸಲು ಕ್ಲಬ್ ಪದಾಧಿಕಾರಿಗಳು ಸಮಾಜಮುಖಿ ಕಾರ್ಯ ಮಾಡಬೇಕೆಂದು ಶಿರಹಟ್ಟಿಯ ಜ. ಫಕೀರೇಶ್ವರ ಭಾವೈಕ್ಯತಾ ಪೀಠ ಸಂಸ್ಥಾನ ಮಠದ ಜ. ಫಕೀರ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಅವರು ನಗರದ ಉಷಾದೇವಿ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ಜರುಗಿದ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಜನ್ಮ ದೊಡ್ಡದು, ಸೇವೆ ಪರೋಪಕಾರದ ಮೂಲಕ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು. ಸ್ಥಾನ ಮಾನಕ್ಕಾಗಿ ಖುರ್ಚಿ ಬಿಟ್ಟು ಕೊಡದವರನ್ನು ನಾವು ಕಾಣುತ್ತೇವೆ, ಆದರೆ ರೋಟರಿಯಲ್ಲಿ ಹಾಗಿಲ್ಲ ಪ್ರತಿ ವರ್ಷ ಜುಲೈ ತಿಂಗಳಲ್ಲಿ ಹಿಂದಿನ ಅಧ್ಯಕ್ಷರು ಆತ್ಮಸಂತೋಷದಿಂದ ಹೊಸ ಅಧ್ಯಕ್ಷರಿಗೆ ಕುರ್ಚಿ ಬಿಟ್ಟು ಖುಷಿಪಡುವದು ಸ್ವಾಗತಾರ್ಹ ಎಂದರು.

ಪಿಡಿಜಿ ಆನಂದ ಕುಲಕರ್ಣಿ ಮಾತನಾಡಿ, ಜಗತ್ತಿನಲ್ಲಿ ಮಹಾಮಾರಿ ಪೊಲೀಯೋ ಜಗತ್ತಿನಾದ್ಯಂತ ಹಬ್ಬುತ್ತಿದ್ದಂತೆಯೇ ಪೊಲೀಯೋ ಮುಕ್ತ ವಿಶ್ವವನ್ನಾಗಿಸಲು ಸಮರೋಪಾದಿಯಲ್ಲಿ ಕಾರ್ಯ ಮಾಡಿದ ಹೆಗ್ಗಳಿಕೆ ರೋಟರಿಗೆ ಇದೆ. ಇಂದಿಗೂ ಪೊಲೀಯೋ ಹನಿ ಹಾಕುವ ಮೂಲಕ ಆ ಕಾರ್ಯ ಮುಂದುವರೆಸಿದೆ ಎಂದರು.

ಈ ವೇಳೆ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಡಾ.ಆರ್.ಬಿ. ಉಪ್ಪಿನ, ಕಾರ್ಯದರ್ಶಿಯಾಗಿ ಸಂತೋಷ ಅಕ್ಕಿ, ಖಜಾಂಚಿಯಾಗಿ ಶ್ರೀಧರ ಸುಲ್ತಾನಪೂರ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಸಾವಿತ್ರಿ ಭರಮಪ್ಪ ಉಪ್ಪಿನ, ದ್ರಾಕ್ಷಾಯಣಿ ಬಸನಗೌಡ ಪಾಟೀಲ ದಂಪತಿಗಳನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಅಂಧ ವಿದ್ಯಾರ್ಥಿ ಅಕ್ಷತಾ ಸಂಗಟಿ ಅವಳಿಗೆ ಸ್ಮಾರ್ಟ ವಿಜನ್ ಗ್ಲಾಸ್‌ ನೀಡಲಾಯಿತು.

ಅಸಿಸ್ಟಂಟ್ ಗವರ್ನರ ಶಿವಾಚಾರ್ಯ ಹೊಸಳ್ಳಿಮಠ, ಹೀರಾಲಾಲ ಮೇರವಾಡೆ, ಡಾ. ಜಿ.ಬಿ.ಪಾಟೀಲ, ಡಾ. ಶೇಖರ ಸಜ್ಜನರ, ಶ್ರೀಧರ ಧರ್ಮಾಯತ, ಮಹೇಶ ಹಿಂಡಿ, ಕೋಟ್ರೇಶ ಹಿರೇಗೌಡರ, ಚೆನ್ನವೀರ ಹುಣಸಿಕಟ್ಟಿ, ಶರಣಬಸಪ್ಪ ಗುಡಿಮನಿ, ಕೆ.ಎಚ್.ಬೇಲೂರ, ಡಾ. ವಿ.ಸಿ.ಕಲ್ಮಠ, ಅರವಿಂದಸಿಂಗ್ ಬ್ಯಾಳಿ, ಎನ್.ಕೆ.ಹಂಜಗಿ, ಅಶೋಕ ಅಕ್ಕಿ, ರಮೇಶ ಇಟಗಿ, ಎಚ್.ಎಸ್. ಪಾಟೀಲ, ಅಕ್ಷಯ ಶೆಟ್ಟಿ, ಡಾ. ಪಿ.ಎಸ್. ಉಗಲಾಟದ, ವಿ.ಎಸ್. ಯಳಮಲಿ, ನರೇಶ ಜೈನ್, ಕೆ.ಎನ್. ರೇವಣಕರ, ಡಾ. ಆರ್.ಕೆ. ಗಚ್ಚಿನಮಠ, ಸಾಗರಿಕಾ ಅಕ್ಕಿ, ರಾಜೇಶ್ವರಿ ಉಪ್ಪಿನ ಹಾಗೂ ಪದಾಧಿಕಾರಿಗಳು ಇದ್ದರು.

ಶ್ರೀನಿಧಿ ಉಗಲಾಟದ ಪ್ರಾರ್ಥಿಸಿದರು. ಡಾ. ಉಮೇಶ ಪುರದ, ಡಾ.ರಾಜಶೇಖರ ಬಳ್ಳಾರಿ, ಡಾ.ಕಮಲಾಕ್ಷಿ ಅಂಗಡಿ, ಮಹೇಶ ಬಾತಾಖಾನಿ, ಸುರೇಶ ಕುಂಬಾರ ಪರಿಚಯಿಸಿದರು. ಚಂದ್ರಮೌಳಿ ಜಾಲಿ ಸ್ವಾಗತಿಸಿದರು. ವೀಣಾ ತಿರ್ಲಾಪೂರ ವರದಿ ವಾಚಿಸಿದರು, ಬಾಲಕೃಷ್ಣ ಕಾಮತ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ ಅಕ್ಕಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ