ಕನ್ನಡಪ್ರಭ ವಾರ್ತೆ ಶಹಾಬಾದ
ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾ ಕೂಟದಲ್ಲಿ ದೈಹಿಕ ಶಿಕ್ಷಕರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಪ್ರತಿಭಟನಾ ಪೂರ್ವಕವಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಕರ್ತವ್ಯಕ್ಕೆ ಹಾಜರಾದರು.ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ, ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ, 2006ರಲ್ಲಿ ಸರಕಾರ ಅಂಗೀಕರಿಸಿದ ಪ್ರೊ. ಎಲ್.ಆರ್. ವೈದ್ಯ ಸಮಿತಿ ಶಿಫಾರಸ್ಸಿನಂತೆ ಎಲ್ಲಾ 12 ಶಿಫಾರಸ್ಸನ್ನು ಸರಕಾರ ಅಂಗೀಕರಿಸಿದ್ದು, ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ, ಸವಲತ್ತು ಕಲ್ಪಿಸುವದು ಸೇರಿದಂತೆ ನಮ್ಮ ಬೇಡಿಕೆ ಈಡೇರಿಸಬೇಕೆಂದರು.
ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರನ್ನು ಭರ್ತಿ ಮಾಡುವದು, ಅವಶ್ಯಕತೆ ಇದ್ದಲ್ಲಿ ಮುಖ್ಯೋಪಾಧ್ಯ, ಪ್ರಾಂಶುಪಾಲರ ಹುದ್ದಗೆ ದೈಹಿಕ ಶಿಕ್ಷಕರನ್ನು ಪರಿಗಣಿಸುವದು, ದೈಹಿಕ ಪರಿವೀಕ್ಷಕರ ಹುದ್ದ ಸೃಷ್ಠಿಸುವದು, ಎಸ್‍ಐಟಿಎಸ್ ದೈಹಿಕ ಶಿಕ್ಷಕ ಭಾಗ ಎ ನಲ್ಲಿ ಸೇರ್ಪಡೆಗೆ ಇರುವ ಗೊಂದಲ ನಿವಾರಿಸುವರು. ಜೇಷ್ಠತಾ ಆಧಾರದ ಮೇಲೆ ದೈಹಿಕ ಶಿಕ್ಷಕರನ್ನು ಹಾಜರಾತಿ ವಹಿಯಲ್ಲಿ ನಮೂದಿಸುವರು ಇವರ ಪ್ರಮುಖ ಬೇಡಕೆಗಳಾಗಿವೆ.ಪದವಿ ಪೂರ್ವ ಕಾಲೇಜಿನಲ್ಲಿ 728 ದೈಹಿಕ ಉಪನ್ಯಾಸರ ಇಪಿ/51/ಟಿಪಿಯು/2021 ಕಡತಕ್ಕ ಆರ್ಥಿಕ ಇಲಾಖೆ ಅನುಮೊದನೆ ದೊರಕಿಸಿಕೊಡುವದು. ದೈಹಿಕ ಶಿಕ್ಷಕರಿಗೆ ಉನ್ನತ ವ್ಯಾಸಾಂಗಕ್ಕಾಗಿ ವೇತನ ಸಹಿತ ಅನುಕೂಲ ಕಲ್ಪಿಸುವದು, ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ಧೇಶನಾಲಯ ಸ್ಥಾಪಿಸುವ ಕುರಿತು ಹಾಗೂ ಕಳೆದ 17 ವರ್ಷದಿಂದ ವಿಳಂಬ ಮುಂಬಡ್ತಿ ಶೀಘ್ರ ಕೈಗೊಳ್ಳುವ ಕುರಿತು ಕಳೆದ 17 ವರ್ಷದಿಂದ ದೈಹಿಕ ಶಿಕ್ಷಕರು ಮನವಿ ಸಲ್ಲಿಸುತ್ತಾ ಬರುತ್ತಿದ್ದರು. ಸಹ ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿದರು. 2014-25ನೇ ಸಾಲಿನ ಕ್ರೀಡಾ ಕೂಟಗಳನ್ನು ಬಹಿಷ್ಕರಿಸಬೇಕೆಂಬ ಯೋಜನೆ ದೈಹಿಕ ಶಿಕ್ಷಕರದ್ದಾಗಿತ್ತು. ಆದರೆ, ಮಕ್ಕಳ ಭವಿಷ್ಯದ ಕುರಿತು ಯೋಚಿಸಿ, ಕಪ್ಪು ಪಟ್ಟಿ ಧರಿಸಿ, ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಲಾಗಿದೆ, ಆದರೆ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ನಿರಂತವಾಗಲಿದೆ ಎಂದು ಹೇಳಿದರು. ಈ ಕುರಿತು ತಹಶೀಲ್ದಾರು ಸರಕಾರದ ಗಮನಕ್ಕೆ ಹಾಗೂ ವೇದಿಕೆ ಮೇಲೆ ಇರುವ ಕಾಡಾ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಂಕ್ ಖರ್ಗೆ ಅವರ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.