ಫೋಟೋಗ್ರಫಿ ಸಹ ತಪ್ಪಸ್ಸು: ಪತ್ತಾರ

KannadaprabhaNewsNetwork |  
Published : Dec 03, 2024, 12:30 AM IST
2ಡಿಡಬ್ಲೂಡಿ1ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಘದ ಚಿತ್ರಕಲಾ ಪ್ರದರ್ಶನ ಭವನದಲ್ಲಿ ಡಾ. ಸದಾಶಿವ ಮರ್ಜಿ ಅವರ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಎಸ್‌.ಕೆ. ಪತ್ತಾರ ಮಾತನಾಡಿದರು.  | Kannada Prabha

ಸಾರಾಂಶ

ನಿಸರ್ಗದತ್ತವಾಗಿ, ನೈಸರ್ಗಿಕವಾಗಿ ಇದ್ದಂತ ಸಂದರ್ಭಗಳನ್ನು ನೋಡಿ, ಕಾದು ಕುಳಿತು ಛಾಯಾಚಿತ್ರ ತೆಗೆಯಬೇಕು. ಇದು ಬಹಳ ಕಷ್ಟದ ಕೆಲಸ.

ಧಾರವಾಡ:

ಚಿತ್ರಗಳನ್ನು ನಮಗೆ ಬೇಕಾದಾಗ ಬಿಡಿಸಬಹುದು, ಬೇಡವೆನಿಸಿದರೆ ಬಿಡಬಹುದು. ಛಾಯಾಚಿತ್ರ ತೆಗೆಯುವುದು ಹಾಗಲ್ಲ. ಫೋಟೋಗ್ರಾಫಿಗೆ ಬಹಳಷ್ಟು ತಾಳ್ಮೆ ಇರಬೇಕು. ಆ ದೃಶ್ಯಗಳಿಗಾಗಿ, ಆ ವೇಳೆಗಾಗಿ ಕಾಯುತ್ತಿರಬೇಕು. ಇದೊಂದು ತಪಸ್ಸು ಇದ್ದಂತೆ ಎಂದು ಪ್ರಾಧ್ಯಾಪಕ ಎಸ್.ಕೆ. ಪತ್ತಾರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು 69ನೇ ರಾಜ್ಯೋತ್ಸವ ನಿಮಿತ್ತ ಸಂಘದ ಚಿತ್ರಕಲಾ ಪ್ರದರ್ಶನ ಭವನದಲ್ಲಿ ಡಾ. ಸದಾಶಿವ ಮರ್ಜಿ ಅವರ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಅವರು, ನಿಸರ್ಗದತ್ತವಾಗಿ, ನೈಸರ್ಗಿಕವಾಗಿ ಇದ್ದಂತ ಸಂದರ್ಭಗಳನ್ನು ನೋಡಿ, ಕಾದು ಕುಳಿತು ಛಾಯಾಚಿತ್ರ ತೆಗೆಯಬೇಕು. ಇದು ಬಹಳ ಕಷ್ಟದ ಕೆಲಸ. ಇಂಥ ಸಾಹಸದ ಕೆಲಸವನ್ನು ಮಾಡಿದ ಡಾ. ಸದಾಶಿವ ಮರ್ಜಿ ಅವರಿಗೆ ಅಭಿನಂದನೆಗಳು. ಸಂಘವು ಛಾಯಾಚಿತ್ರ ಪ್ರದರ್ಶನಕ್ಕೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ದು ಅಭಿನಂದನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಬಾಣದ ಮಾರುತಿ ಮಾತನಾಡಿ, ಇತ್ತೀಚೆಗೆ ಸಂಘವು ‘ಚಿತ್ರಕಲಾ ಪ್ರದರ್ಶನ ಭವನ’ (ಆರ್ಟ್ ಗ್ಯಾಲರಿ) ಉದ್ಘಾಟನೆ ಮಾಡಿ, ಎಲ್ಲ ಪ್ರಕಾರದ ಕಲಾ ಪ್ರದರ್ಶನಗಳಿಗೆ ಅನುಕೂಲ ಮಾಡಿದ್ದು ನಿಜಕ್ಕೂ ಅಭಿನಂದನೀಯ. ಭವನದಲ್ಲಿ ಬೆಳಕಿನ ವ್ಯವಸ್ಥೆ ಇನ್ನೂ ಆಗಬೇಕೆಂದು ಸಲಹೆ ನೀಡುತ್ತಾ, ಡಾ. ಸದಾಶಿವ ಮರ್ಜಿ ಅವರು ರೆವಿನ್ಯೂ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾ, ಛಾಯಾಚಿತ್ರ ಕಲೆ, ಗಾಯನ, ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಭಿಮಾನ ಪಡುವಂಥದ್ದು ಎಂದು ಹೇಳಿದರು.

ವೇದಿಕೆಯಲ್ಲಿ ಶಿವಾನಂದ ಭಾವಿಕಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಸದಾಶಿವ ಮರ್ಜಿ ಮಾತನಾಡಿದರು. ಸತೀಶ ತುರಮರಿ, ವೀರಣ್ಣ ಒಡ್ಡೀನ, ವೀರಣ್ಣ ಪತ್ತಾರ, ಡಾ. ಸಿದ್ಧನಗೌಡ ಪಾಟೀಲ, ಸಿದ್ರಾಮ ಹಿಪ್ಪರಗಿ ಮುಂತಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ