ದೈಹಿಕ ಶಿಕ್ಷಕರು ನೈಜ ಕ್ರೀಡಾಪಟುಗಳನ್ನು ಗುರುತಿಸಿ

KannadaprabhaNewsNetwork |  
Published : Jun 08, 2025, 03:16 AM ISTUpdated : Jun 08, 2025, 03:17 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನೈಜ ಕ್ರೀಡಾಪಟುಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ಮಾಡುವ ಕರ್ತವ್ಯ ದೈಹಿಕ ಶಿಕ್ಷಕರದ್ದಾಗಿದೆ. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಎನ್ನುವಂತೆ ಒಳ್ಳೆಯ ಮತ್ತು ನಿಜವಾದ ಕ್ರೀಡಾಪಟುವಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನೈಜ ಕ್ರೀಡಾಪಟುಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ಮಾಡುವ ಕರ್ತವ್ಯ ದೈಹಿಕ ಶಿಕ್ಷಕರದ್ದಾಗಿದೆ. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಎನ್ನುವಂತೆ ಒಳ್ಳೆಯ ಮತ್ತು ನಿಜವಾದ ಕ್ರೀಡಾಪಟುವಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯಲ್ಲಿ ನಡೆದ ಪ್ರಥಮ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಬಿ.ವೈ.ಕವಡಿ ಮಾತನಾಡಿ, ವಲಯ ಮತ್ತು ಕ್ಲಸ್ಟರ್ ಹಂತದ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುವಿನ ಸಮಗ್ರ ಮಾಹಿತಿಯನ್ನು ಕ್ರೀಡಾಕೂಟಕ್ಕೆ ಆಯೋಜಕರಿಗೆ ನೀಡಿದರೆ ಕ್ರೀಡೆಯಲ್ಲಿ ತಂಟೆ ತಕರಾರುಗಳು ಕಡಿಮೆಯಾಗುತ್ತವೆ ಎಂದರು.

ಈ ವೇಳೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಸಿ ನೆಟ್ಟು ಮಾತನಾಡಿ, ಹೆಚ್ಚಾಗುತ್ತಿರುವ ತಾಪಮಾನ ತಗ್ಗಿಸಲು ಸಾಕಷ್ಟು ಗಿಡಗಳನ್ನು ನೆಡವುದರಿಂದ ಶುದ್ಧ ಗಾಳಿ, ಮಳೆ ಲಭಿಸುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಸಿಲು ತಾಪ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಹೆಚ್ಚಳವಾಗುವುದು. ಆದ್ದರಿಂದ ಹೆಚ್ಚಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸೋಣ ಎಂದರು.

ವೇದಿಕೆ ಮೇಲೆ ಶಿಕ್ಷಕರಾದ ಶೋಭಾ ಸೋಂಪುರ್, ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಸುರೇಶ್ ಆಲೂರು, ರಾಜ್ಯ ನೌಕರರ ಸಂಘದ ಜಿಲ್ಲಾ ಖಜಾಂಚಿ ಬಿ.ಎಸ್.ಹೊಳಿ, ದೈಹಿಕ ಶಿಕ್ಷಣ ಶಿಕ್ಷಕರು ಸಂಘದ ಅಧ್ಯಕ್ಷ ಎ.ಸಿ.ಕೆರೂರ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಸಜ್ಜನ ಇದ್ದರು. ಎನ್.ಎಸ್.ಬಿರಾದರ ನಿರೂಪಿಸಿ, ದೈಹಿಕ ಶಿಕ್ಷಕ ಶಾಂತಪ್ಪ ಹವಾಲ್ದಾರ, ಇಂಡಿಯ ಕಟ್ಟಿ ಎನ್.ಡಿ. ಪನದಕಟ್ಟಿ, ಬಿ.ಎಸ್.ಕೊಂಡಗೋಳಿ, ಎಂ.ಎಸ್.ಕೊಣ್ಣೂರ, ಪಿ.ಎಸ್.ಚಿಂತಾಮಣಿ, ಆರ್.ಬಿ.ಮಠಪತಿ, ವಿಜಯಲಕ್ಷ್ಮಿ ಮಾಲಿಪಾಟೀಲ, ಕೆ.ಬಿ.ಹೊಸಮನಿ, ಎಸ್.ಕೆ.ಅಸ್ಕಿ, ಬಿ.ಜಿ.ಬಳವಾಟ ಭಾಗವಹಿಸಿದ್ದರು. ಬಾಲಾಜಿ ಸುಧಾಕರ್ ಸ್ವಾಗತಿಸಿ, ಎಸ್.ಆರ್.ಪಾಟೀಲ್ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ