ಹೂವಿನಹಡಗಲಿ: ಶಾಲೆಯ ಶೈಕ್ಷಣಿಕ ಪ್ರಗತಿಗೆ ದೈಹಿಕ ಶಿಕ್ಷಕರು ಶ್ರಮಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.
ಪ್ರಾರ್ಥನಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು. ಮಧ್ಯಾಹ್ನ ಬಿಸಿಯೂಟದ ವೇಳೆ ಕ್ರಮಬದ್ಧವಾಗಿ ಊಟ ಬಡಿಸುವ ಕೆಲಸವನ್ನು ನಿರ್ವಹಿಸಿ ಎಂದು ಅವರು, ಸತತವಾಗಿ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು. ವಿಶೇಷ ಕ್ರೀಡಾ ನಿಧಿ ನಿಗದಿತ ಸಮಯದಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಿ ಎಂದು ಹೇಳಿದರು.
ಜೂ.21ರಂದು ಎಲ್ಲ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಕಡ್ಡಾಯವಾಗಿ ಯೋಗ ದಿನಾಚರಣೆ ಆಚರಿಸಬೇಕೆಂದು ಹೇಳಿದರು.ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ನಿವೃತ್ತ ದೈಹಿಕ ಅಧೀಕ್ಷಕ ಎಸ್. ಮುಸ್ತಫಾ, ಗೌರವಾಧ್ಯಕ್ಷ ಬಿ.ಶಿವಾನಂದಪ್ಪ, ಮುಖ್ಯ ಗುರು ಸುರೇಶ ಅಂಗಡಿ ಮಾತನಾಡಿದರು.
ಪ್ರಭಾರ ತಾಲೂಕು ದೈಹಿಕ ಅಧೀಕ್ಷಕರಾಗಿ ಜೆ.ಪ್ರಸನ್ನಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು:
ಬಿ.ಶಿವಾನಂದಪ್ಪ (ಗೌರವಾಧ್ಯಕ್ಷ), ಶಿವಪ್ಪ (ಗೌರವಾಧ್ಯಕ್ಷ), ಪಿ.ಎನ್. ಪಾಟೀಲ್ (ಅಧ್ಯಕ್ಷ), ಜಿ.ತಾತಪ್ಪ ( ಪ್ರಧಾನ ಕಾರ್ಯದರ್ಶಿ), ಸಿದ್ದೇಶ್ (ಖಜಾಂಚಿ), ಜಗದೀಶ್, ಪ್ರಕಾಶ್, ಅಂಬಿಕಾ, ಪಂಚಪ್ಪ (ಉಪಾಧ್ಯಕ್ಷರು)
ಬಾಷಾ, ರಾಜಶೇಖರ್ (ಪತ್ರಿಕಾ ಕಾರ್ಯದರ್ಶಿ), ಅಂಬಿಕಾ (ಉಪಾಧ್ಯಕ್ಷೆ) ಅವರನ್ನು ಆಯ್ಕೆ ಮಾಡಲಾಯಿತು.