ಆರೋಪಿಗಳನ್ನು ಬಂಧಿಸದ ಪೊಲೀಸರು: ಖಂಡನೆ

KannadaprabhaNewsNetwork |  
Published : Jul 08, 2024, 12:32 AM IST
ಸತ್ಯ ಶೋಧಕ ಸಮಿತಿ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಫೋಕ್ಸೋ ಕೇಸ್ ದಾಖಲಿಸಿದ್ದರೂ ಆರೋಪಿಗಳನ್ನು ಬಂಧಿಸಲಾರದ ಕಮಲಾಪುರ ಪೊಲೀಸರ ವಿರುದ್ಧ ಸತ್ಯ ಶೋಧಕ ಸಮಿತಿ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಫೋಕ್ಸೋ ಕೇಸ್ ದಾಖಲಿಸಿದ್ದರೂ ಆರೋಪಿಗಳನ್ನು ಬಂಧಿಸಲಾರದ ಕಮಲಾಪುರ ಪೊಲೀಸರ ವಿರುದ್ಧ ಸತ್ಯ ಶೋಧಕ ಸಮಿತಿ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸೂರ್ಯಕಾಂತ್ ನಿಂಬಾಳ್ಕರ್ ತಾಲೂಕಿನ ಕಿಣ್ಣಿ ಸರಪಂಚ್ ಗ್ರಾಮದಲ್ಲಿ ಜು.1ರಂದು ಉದಯಕುಮಾರ ಚನ್ನಬಸಪ್ಪ ನೊಲಕರ ಈತನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ದಾಖಲಿಸಿಕೊಳ್ಳದೆ.

ಪೋಕ್ಸೋ ಕೇಸ್ ಅಡಿಯಲ್ಲಿ ನೊಂದ ಬಾಲಕಿಯ ಕೇಸ್ ದಾಖಸಿಕೊಳ್ಳದೆ ದೂರಿಗೆ ಪ್ರತಿ ದೂರುವಾಗಿ ವಿದ್ಯಾರ್ಥಿಯ ತಂದೆ, ತಾಯಿ ಹಾಗೂ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸದೆ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ನಂತರ ಪೋಕ್ಸೋ ಕೇಸ್ ದಾಖಲಿಸಿಕೊಂಡು ಅಪರಾಧಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದರು.

ಆದರೆ, ಕಮಲಾಪುರ ಸಿಪಿಐ ಆದ ವಿ. ನಾರಾಯಣ ಅವರು ನೊಂದ ಬಾಲಕಿಗೆ ಕುಟುಂಬಕ್ಕೆ ರಕ್ಷಣೆ ನೀಡದೆ ಅವರವರ ಮಧ್ಯೆ ಹಣದ ವ್ಯವಹಾರ ಮಾಡಿಕೊಂಡು ಆರೋಪಿಯನ್ನು ಕಿಣ್ಣಿ ಸರಪಂಚ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡುತ್ತಾರೆ ಇದರ ಬಗ್ಗೆ ಗ್ರಾಮಸ್ಥರು ಇವರೊಬ್ಬ ಪೋಕ್ಸೋ ಕೇಸ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಕರ್ತವ್ಯ ಲೋಪವೆಸಗಿರುವ ಕಮಲಾಪುರನ ಸಿಪಿಐ ವಿ.ನಾರಾಯಣ, ಹಾಗೂ ಕಲಬುರ್ಗಿ ಗ್ರಾಮೀಣ ಡಿಎಸ್ಪಿ ಬಿಂದು ರಾಣಿಯ ವಿರುದ್ಧ ಕಾನೂನು ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಿ ಪ್ರಕರಣದ ತನಿಖೆಗೆ ಬೇರೆ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಸತ್ಯ ಶೋಧಕ ಸಮಿತಿ ಕಲಬುರ್ಗಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷೆಕರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಸೂರ್ಯಕಾಂತ್ ಜಿಡಗಾ, ರಮೇಶ್ ಬೆಳಕೋಟಾ, ರವಿಕುಮಾರ ಕೋರಿ, ಅಂಬರಾಯ ದಸ್ತಾಪುರ,ಅ ಬಿ ಹೊಸಮನಿ, ಮತ್ತಿತರ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ