ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯ ಪುರಾಣ ಪ್ರಸಿದ್ಧ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಂಕರ ಸಭಾದಿಂದ ಮಹಾ ಶಿವರಾತ್ರಿ ನಿಮಿತ್ತ ಶುಕ್ರವಾರ ಮತ್ತು ಶನಿವಾರ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ಪುರೋಹಿತರಾದ ರಾಘವೇಂದ್ರ ರಾವ್ ತಿಳಿಸಿದರು.ಶುಕ್ರವಾರ ಬೆಳಗ್ಗೆ 9 ಗಂಟೆಗೆ ರುದ್ರ ಹೋಮ, 10 ಗಂಟೆಗೆ ಕಾಶಿ ವಿಶ್ವನಾಥನಿಗೆ ಮಹಾ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಕಾಶಿವಿಶ್ವನಾಥನಿಗೆ ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 8 ವರೆಗೂ ದೇವಾಲಯ ತೆರೆದಿರುತ್ತದೆ. ಕಾಶಿ ವಿಶ್ವನಾಥನಿಗೆ ಮೂರು ಜಾವಾಭಿಷೇಕಾ ಹಾಗೂ ಮೂರು ವಿಶೇಷ ಅಲಂಕಾರ ಮಾಡುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು ಎಂದರು.ಶಿವರಾತ್ರಿ ಜಾಗರಣೆಯ ಅಂಗವಾಗಿ ರಾತ್ರಿ ಪೂರ್ಣ ದೇವಸ್ಥಾನದಲ್ಲಿ ಶ್ರುತಿ ಸಾಗರ ಭಜನಾ ಮಂಡಳಿ ವತಿಯಿಂದ ಸಂಗೀತ, ನೃತ್ಯ ಹಾಗೂ ವಿವಿಧ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ ಎಂದರು.
ಶನಿವಾರ ಬೆಳಗ್ಗೆ 6 ಗಂಟೆಗೆ ಶಿವ ಪಾರ್ವತಿ ಉತ್ಸವ ಕೋಟೆ ಬೀದಿಯಲ್ಲಿ ನೆರವೇರಲಿದೆ. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಂಕರ ಸಭಾ ಅಧ್ಯಕ್ಷ ಗುರುಸ್ವಾಮಿ ಇದ್ದರು.ಹರವು ಗ್ರಾಮದಲ್ಲಿ ಹಲವು ಕಾರ್ಯಕ್ರಮ
ಹರವು: ಪಾಡವಪುರ ತಾಲೂಕಿನ ಹರವು ಗ್ರಾಮದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಶ್ರೀಹರಶಂಕರ ಮಠ ಸೇವಾಭಿವೃದ್ಧಿ ಸಮಿತಿಯಿಂದ ಮಾ.8, 9ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮಾ.8ರ ಬೆಳಗ್ಗೆ 9.15ರಿಂದ ಹೋಮ ಹವನಗಳು ಹಾಗೂ ಸಂಜೆ 6.35 ರಿಂದ 8 ಗಂಟೆ ವರೆಗೆ ಶಿವಲಿಂಗಕ್ಕೆ ಬಿಲ್ವಪತ್ರೆ ಸಮರ್ಪಣೆ, ಮಹಾ ಮಂಗಳಾರತಿ ನಂತರ ಫಲಹಾರ ಹಾಗೂ ರಾತ್ರಿ ರಂಗ ಕಾರ್ಯಕ್ರಮಗಳು ಜರುಗಲಿವೆ.
ಇದೇ ವೇಳೆ ‘ಬಡವನ ಕೂಗು’ ಚಲನಚಿತ್ರ ಪ್ರದರ್ಶನ, ‘ಕಡೇ ವ್ಯವಸಾಯ’ ಚಲನಚಿತ್ರದ ಹಾಡು ಹಾಗೂ ಟೀಸರ್ ಪ್ರದರ್ಶನ, ‘ಮಾನವೀಯತೆ’ ಕಿರುಚುತ್ರ ಪ್ರದರ್ಶನ, ಪಡುವರಹಳ್ಳಿ ಪಾಂಡವರು ಹಾಗೂ ಪ್ರಸಂಗದ ಗೆಂಡೆ ತಿಮ್ಮ ಚಲನಚಿತ್ರಗಳ ಹಾಡುಗಳ ಪ್ರದರ್ಶನ ಮತ್ತು ಹರವು ಹಾಗೇ ಅಕ್ಕಪಕ್ಕದ ಗ್ರಾನಸ್ಥರಿಂದ ಅಖಂಡ ಭಜನೆ ನಡೆಯಲಿದೆ.ಮಾ. 9 ರಂದು ಬೆಳಗ್ಗೆ 6 ರಿಂದ ‘ಲಿಂಗಪೂಜೆ’, ಬೆಳಗ್ಗೆ 9ಕ್ಕೆ ಊರಿನ ರಥಬೀದಿಯಲ್ಲಿ ‘ಶಿವನ ರಥೋತ್ಸವ’ ನಂತರ ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.