ಪ್ರಭಾ ಮಲ್ಲಿಕಾರ್ಜುನ್ ಗೆಲುವು ನಿಶ್ಚಿತ: ಶಾಸಕ ದೇವೇಂದ್ರಪ್ಪ

KannadaprabhaNewsNetwork | Published : Apr 5, 2024 1:08 AM

ಸಾರಾಂಶ

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವು ನಿಶ್ಚಿತ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಜಗಳೂರು: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವು ನಿಶ್ಚಿತ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್‌ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷದ ಮುಖಂಡರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೇ ೭ರಂದು ಚುನಾವಣೆ ನಡೆಯಲಿದೆ. ಜೂ.೪ರಂದು ಫಲಿತಾಂಶ ಬರಲಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಗೆಲುವು ನಿಶ್ಚಿತ. ವೈದ್ಯರಾದ ಅವರು ಸಮಾಜ ಸೇವಕಿಯಾಗಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಯಾರೇ ಪಕ್ಷಕ್ಕೆ ಸೇರ್ಪಡೆಯಾದರೂ ಕಾಂಗ್ರೆಸ್‌ ಪಕ್ಷದ ಬಾಗಿಲು ತೆರೆದಿರುತ್ತದೆ ಎಂದರು.

ಗ್ಯಾರಂಟಿಗಳು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ 3 ಬಾರಿ ಬಜೆಟ್ ಮಂಡಿಸಿದ್ದಾರೆ. ಬರಗಾಲ ಮಾಸುವಂತೆ ಬಜೆಟ್‌ನಲ್ಲಿ ಗ್ಯಾರಂಟಿ ಘೋಷಿಸಿದ್ದಾರೆ. ರಾಮರಾಜ್ಯ ಎಂದರೆ ರಾಮನ ಮೂರ್ತಿ ಪ್ರತಿಷ್ಠಾಪಿಸುವುದು ಅಲ್ಲ. ಮಹಾತ್ಮ ಗಾಂಧಿ ಕಂಡ ರಾಮ ರಾಜ್ಯವಾಗದಬೇಕಾದರೆ ಸಮಾನತೆ, ಸಹೋದರತೆ, ಸಹಬಾಳ್ವೆ, ವಿವಿಧತೆಯಲ್ಲಿ ಏಕತೆ ಇರಬೇಕು. ಬಿಜೆಪಿ ಅವರು ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ ಪಟೇಲ್ ಮಾತನಾಡಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಡಾ.ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡಿದ್ದಾರೆ. ಅವರನ್ನು ಆಯ್ಕೆ ಮಾಡಿರುವುದು ನಮ್ಮ ಸುದೈವ. ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿರುವ ಕಾರಣ ಡಾ.ಪ್ರಭಾ ೨.೫೦ ಲಕ್ಷ ಮತಗಳ ಅಂತರದಿಂದ ಆಯ್ಕೆಯಾಗುವುದು ಖಚಿತ ಎಂದರು.

ಕೆಪಿಸಿಸಿ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಈ ಚುನಾವಣೆ ಅಷ್ಟು ಸುಲಭವಿಲ್ಲ. ನಮ್ಮ ಕ್ಷೇತ್ರದಲ್ಲಿ ಎರಡು ಶಕ್ತಿಗಳು ಒಂದಾಗಿ 1 ಲಕ್ಷಕ್ಕೂ ಅಧಿಕ ಮತ ಹಾಕಿಸುವ ಭರವಸೆ ನೀಡಿದ್ದಾರೆ. ಹಾಗಾದರೆ ನಮಗೆ ಆ ತಾಕತ್ತು ಇಲ್ಲವೇ? ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಬೇಕಾದರೆ ಮನೆ ಮನೆಗೆ ತೆರಳಿ ಕಾರ್ಯಕ್ರಮಗಳನ್ನು ತಿಳಿಸಿ ಎಂದರು.

ಬಿದರಕೆರೆ ಬಾಬಣ್ಣ, ಗೌರಿಪುರ ಶಿವಕುಮಾರ್, ಬಸವರಾಜಪ್ಪ, ಎಂ.ಎಸ್.ಪಾಟೀಲ್, ವೈ.ಎನ್.ಮಂಜುನಾಥ್ ಸೇರಿದಂತೆ ಬಿದರಕೆರೆ, ಜಗಳೂರು ಟೌನ್, ತುಂಬಿನಕಟ್ಟೆ, ಗೌರಿಪುರ, ಭರಮಸಮುದ್ರ, ಚಿಕ್ಕಬನ್ನಿಹಟ್ಟಿ, ಅಸಗೋಡು, ಅಣಬೂರು ಗೊಲ್ಲರಹಟ್ಟಿ, ಬ್ಯಾಟಗಾರನಹಳ್ಳಿ, ಅಣಬೂರು, ಜ್ಯೋತಿಪುರ, ರಸ್ತೆಮಾಚಿಕೆರೆ, ಬುಳ್ಳಳ್ಳಿ, ಕೆಳಗೋಟೆ, ಮಾಳಮ್ಮನಹಳ್ಳಿ, ಕೊರಟಗೆರೆ ಲಮಾಣಿ ಹಟ್ಟಿ, ಗೋಕುಲಹಟ್ಟಿ, ಕಚ್ಚೇನಹಳ್ಳಿ ಗ್ರಾಮಗಳಿಂದ ೩೦೦ಕ್ಕೂ ಹೆಚ್ಚು ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.

ನಾಗರಾಜ್, ಕಾಂಗ್ರೆಸ್ ಮುಖಂಡರಾದ ಸಿ.ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಎಂ.ಡಿ.ಕೀರ್ತಿಕುಮಾರ್, ಬಿದರಕೆರೆ ಬಾಬಣ್ಣ, ಗೌರಿಪುರ ಶಿವಕುಮಾರ್, ಬಸವರಾಜಪ್ಪ, ಎಂ.ಎಸ್.ಪಾಟೀಲ್, ವೈ.ಎನ್.ಮಂಜುನಾಥ್, ದಾವಣಗೆರೆ ಕಾಂಗ್ರೆಸ್ ಮುಖಂಡ ಉಮ್ಮಣ್ಣ, ತಿಪ್ಪೇಸ್ವಾಮಿಗೌಡ, ರಂಗನಾಥ್ ರೆಡ್ಡಿ, ಓಮಣ್ಣ, ಪ್ರಕಾಶ್ ರೆಡ್ಡಿ, ಅರ್ಜುನಪ್ಪ, ಮಹಮದ್ ಅಲಿ, ಅರಸೀಕೆರೆ ಮರಿಯಣ್ಣ, ಜಿ.ಎಸ್.ಶಂಭುಲಿಂಗಪ್ಪ, ಪಪಂ ಸದಸ್ಯ ರವಿ, ಅರಿಶಿಣಗುಂಡಿ ಮಂಜುನಾಥ್, ತಾನಾಜಿ ಗೋಸಾಯಿ, ಶಿವನಗೌಡ, ಶೇಖರಪ್ಪ, ಬಿ.ಮಹೇಶ್ವರಪ್ಪ ಸೇರಿದಂತೆ ಇತರರು ಇದ್ದರು.

Share this article