ಬಂಡೀಪುರ ಡಿಸಿಎಫ್‌ ಆಗಿ ಪ್ರಭಾಕರ್‌ ರೀ ಎಂಟ್ರಿ!

KannadaprabhaNewsNetwork | Published : Mar 7, 2024 1:45 AM

ಸಾರಾಂಶ

ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾಗಿ ಆರು ತಿಂಗಳ ಹಿಂದೆ ನೇಮಕಗೊಂಡಿದ್ದ ಪ್ರಭಾಕರ್‌ ಎಸ್‌. ಮತ್ತೆ ರೀ ಎಂಟ್ರಿಗೆ ಸಿಎಟಿ ಆದೇಶ ನೀಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾಗಿ ಆರು ತಿಂಗಳ ಹಿಂದೆ ನೇಮಕಗೊಂಡಿದ್ದ ಪ್ರಭಾಕರ್‌ ಎಸ್‌. ಮತ್ತೆ ರೀ ಎಂಟ್ರಿಗೆ ಸಿಎಟಿ ಆದೇಶ ನೀಡಿದೆ.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಅವಧಿಗೂ ಮುನ್ನ ಸರ್ಕಾರ ವರ್ಗಾವಣೆ ಮಾಡಿದೆ ಎಂದು ಸಿಎಟಿಗೆ ಮೊರೆ ಹೋಗಿ ತಡೆಯಾಜ್ಞೆ ತಂದು ಮುಂದುವರಿದಿದ್ದರು. ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದ ಪ್ರಭಾಕರ್‌ ಎಸ್‌. ಕಳೆದ ಆರು ತಿಂಗಳಿನಿಂದ ರಜೆ ಮೇಲೆ ಇದ್ದರು. ಮಾ.5 ರಂದು ಸಿಎಟಿಯಲ್ಲಿ ವಿಚಾರಣೆ ನಡೆದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಅವರ 2 ವರ್ಷದ ಅವಧಿ ಸುಧೀರ್ಘವಾಗಿ ಮುಗಿದ ಕಾರಣ 6 ತಿಂಗಳಿನಿಂದ ಕಾದಿದ್ದ ಪ್ರಭಾಕರ್‌ ಎಸ್‌ ಅಧಿಕಾರ ಸ್ವೀಕರಿಸಲು ಸೂಚನೆ ನೀಡಿದೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಅವಧಿ ಮುಗಿದ ಹಿನ್ನಲೆ ಎರಡು ವಾರದೊಳಗೆ ಸರ್ಕಾರ ಪೋಸ್ಟಿಂಗ್‌ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ತಡೆಯಾಜ್ಞೆ ತಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯಾಗಿ ತಮಗಿಷ್ಟ ಬಂದಂತೆ ಕರ್ತವ್ಯ ನಿರ್ವಹಿಸಿದ್ದರು. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಕೂಡ ಅರಣ್ಯ ಇಲಾಖೆ ನಡೆಸಿದ ಬಹುತೇಕ ಸಭೆ, ಸಮಾರಂಭಗಳಿಗೆ ಗೈರು ಹಾಜರಾಗಿದ್ದರು. ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗು ಕ್ಷೇತ್ರ ನಿರ್ದೇಶಕರಾಗಿ ಮರು ನೇಮಕಗೊಂಡ ಪ್ರಭಾಕರ್‌ ಎಸ್‌ ಗುರುವಾರ ಬಂಡೀಪುರಕ್ಕೆ ಆಗಮಿಸಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ.ಮೊದಲು ಧ್ವನಿ ಎತ್ತಿದ್ದೇ ʼಕನ್ನಡಪ್ರಭʼ!

ಗಂಡ್ಲುಪೇಟೆ: ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಅಕ್ರಮಗಳ ಕುರಿತು ಕನ್ನಡಪ್ರಭ ಪತ್ರಿಕೆ ಅನೇಕ ವರದಿಗಳ ಬಿತ್ತರಿಸಿದ ಸರ್ಕಾರದ ಗಮನ ಸೆಳೆದಿತ್ತು ಅಲ್ಲದೆ ಸಿಎಫ್‌ ವಿರುದ್ಧ ತನಿಖೆಗೂ ಆದೇಶಿಸಿತ್ತು! ಕನ್ನಡಪ್ರಭ ಬಂಡೀಪುರ ಅರಣ್ಯ ಇಲಾಖೆಯಲ್ಲಿ ಅಕ್ರಮಗಳ ಬಗ್ಗೆ ನಿರಂತರ ದಾಖಲೆ ಸಮೇತ ವರದಿ ಪ್ರಕಟಿಸಿ ಬಿಜೆಪಿ ಸರ್ಕಾರದ ಅರಣ್ಯ ಸಚಿವ ಉಮೇಶ್‌ ಕತ್ತಿ, ಹಾಲಿ ಸಚಿವ ಈಶ್ವರ್‌ ಖಂಡ್ರೆ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗಮನ ಸೆಳೆದಿತ್ತು. ಕನ್ನಡಪ್ರಭ ಪತ್ರಿಕೆಯಲ್ಲಿ ಬಂಡೀಪುರ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ವಿರುದ್ಧ ಬಂದ ವರದಿಗೆ ದಾಖಲೆ ಸಹಿತ ಒಂದು ಸ್ಪಷ್ಟನೆ ನೀಡಲಿಲ್ಲ. ಕನ್ನಡಪ್ರಭ ವಸ್ತು ನಿಷ್ಟ ವರದಿ ಮಾಡಿತ್ತು. ವರದಿ ಪ್ರಕಟಿಸದಂತೆ ಅನೇಕ ಒತ್ತಡ ತಂದರು ಅಲ್ಲದೆ ಕನ್ನಡಪ್ರಭ ಕೇಂದ್ರ ಕಚೇರಿಗೆ ತೆರಳಿ ನನ್ನ ಮೇಲೆ ಸುಖಾ ಸುಮ್ಮನೇ ವರದಿ ಬರುತ್ತಿದೆ ಎಂದು ಹೇಳಿದ್ದರು. ಸಿಎಫ್‌ ಡಾ.ಪಿ.ರಮೇಶ್ ಕುಮಾರ್‌ ಕಳೆದ ಆರು ತಿಂಗಳ ಹಿಂದೆ ವರ್ಗಾವಣೆ ಆಗುವ ತನಕ ಸಾಕಷ್ಟು ವರದಿ ಮಾಡುವ ಮೂಲಕ ಭ್ರಷ್ಠಾಚಾರದ ವಿರುದ್ಧ ಕನ್ನಡಪ್ರಭ ಸಮರ ಸಾರುತ್ತಲೇ ಬಂದಿದೆ. ಬಂಡೀಪುರ ಆರ್‌ಎಫ್‌ಒಗಳ ಜೀಪಿಗೆ ಡಿಸೇಲ್‌ಗೆ ಮೂರು ತಿಂಗಳ ಕಾಲ ಹಣ ಕೊಟ್ಟಿರಲಿಲ್ಲ.ಜೀಪು ದುರಸ್ಥಿಗೆ ಹಣ ಕೊಟ್ಟಿಲ್ಲ. ಕೆಲ ತಿಂಗಳ ಕಾಲ ಗುಂಡ್ಲುಪೇಟೆ ಎಸಿಎಫ್‌ ಜೀಪು ಕೆಟ್ಟು ನಿಂತಿತ್ತು. ಭ್ರಷ್ಟಚಾರ ಆರೋಪ, ಟೆಂಡರ್‌ ಕರೆಯದೆ ಕಾಮಗಾರಿ ಸೇರಿದಂತೆ ಸಾಕಷ್ಟು ಗಂಭೀರ ಸ್ವರೂಪದ ಆರೋಪಗಳ ಜೊತೆಗೆ ತುಂಡು ಗುತ್ತಿಗೆಯಲ್ಲಿ ಕಾಮಗಾರಿ ನಡೆಸಿದ್ದಾರೆ ಎಂಬ ಗುರುತರ ಆರೋಪಗಳ ಬಗ್ಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿವೆ. ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ರಸ್ತೆ ದುರಸ್ಥಿ ಸೇರಿದಂತೆ ಇನ್ನಿತರ ಖರ್ಚು ಮಾಡಿದ ಆರ್‌ಎಫ್‌ಒಗಳಿಗೆ ಹಣ ನೀಡಿರಲಿಲ್ಲ ಎಂಬ ವರದಿ ರಾಜ್ಯದ ಗಮನ ಸೆಳೆದಿತ್ತು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತಂದು ವರ್ಗಾವಣೆ ಮಾಡಿಸಲು ಪ್ರಯತ್ನದ ಹಿಂದೆ ಕನ್ನಡಪ್ರಭ ವರದಿ ಹಾಗು ಮಾಹಿತಿ ಕಾರಣ.ಜನರ ಮೆಚ್ಚುಗೆ:

ಕನ್ನಡಪ್ರಭ ಪತ್ರಿಕೆ ಬಂಡೀಪುರ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ನಿರಂತರ ವರದಿ ಪ್ರಕಟಿಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದ ಬಗ್ಗೆ ನೂರಾರು ಮಂದಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಓಡಿ ಹೋದ್ರು?:

ಬಹುತೇಕ ಆರ್‌ಎಫ್‌ಒಗಳಿಗೆ ಸಿಎಫ್‌ ಸಣ್ಣ ಪುಟ್ಟ ವಿಚಾರಗಳಿಗೂ ತೊಂದರೆ ಕೊಡುತ್ತಿದ್ದರು. ಕೆಲ ಆರ್‌ಎಫ್‌ಒಗಳು ಸ್ವಯಂ ಪ್ರೇರಿತರಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಇನ್ನೂ ಕೆಲ ಸಿಎಫ್‌ ಬಂಡೀಪುರದಲ್ಲಿಯೇ ಮುಂದುವರಿದಿದ್ದರೆ ಮತ್ತಷ್ಟು ಆರ್‌ಎಫ್‌ಒಗಳು ವರ್ಗಾವಣೆಗೆ ಮುಂದಾಗಿದ್ದರು.

Share this article