ಕನ್ನಡಪ್ರಭ ವಾರ್ತೆ ಆಲಮಟ್ಟಿ:
ಮಕ್ಕಳ ಬುದ್ಧಿಮತ್ತೆಯ ವಿಕಸನದಲ್ಲಿ ಚಿತ್ರಕಲಾ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ. ಇದು ಜ್ಞಾನ ಭಂಡಾರದ ಪ್ರಭೆಯಾಗಿದೆ ಎಂದು ಆಲಮಟ್ಟಿಯ ಎಸ್‌ವ್ಹಿವ್ಹಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯ ಪಟ್ಟರು.ಆರ್‌ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ನಡೆದ ಡ್ರಾಯಿಂಗ್ ಲೋಹರ, ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಸಾಧನೆ ಗೈದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು. ಚಿತ್ರಕಲೆ ನಮ್ಮ ದೇಶಿ ಸಂಸ್ಕೃತಿಗಳ ಪ್ರತೀಕ. ಚಿತ್ರಕಲಾಭ್ಯಾಸದಿಂದ ಜ್ಞಾನದ ಮೆರಗು ವೃದ್ಧಿಸುತ್ತದೆ.
ಸೌಹಾರ್ದತೆಯ ಆದರ್ಶತನ ಚಿತ್ರಕಲೆಗಿದೆ. ಚೈತನ್ಯಮಯ, ಸೌಂದರ್ಯವನ್ನು ಒಳಗೊಂಡದೆ. ಸೃಜನಶೀಲ ವ್ಯಕ್ತಿತ್ವ ರೂಪಧಾರಣೆಗೆ ಪೂರಕವಾಗಿದೆ ಎಂದರು.ವಿಷಯ ಪರಿವೀಕ್ಷಕ ಬಿ.ಕೆ.ಬಿರಾದಾರ, ಅಂತರಾಳದ ಭಾವ ಜ್ಞಾನೇಂದ್ರಿ ಅರಳಿಸಬಲ್ಲ ಚಿತ್ರಕಲೆ ಮಕ್ಕಳಿಗೆ ಬಲು ಇಷ್ಟ. ಯುವಜನತೆ ಟಿವಿ.ಮೊಬೈಲ್ ದಿಂದ ದೂರವಿದ್ದು, ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಈಗ ಎಸ್ಸೆಸ್ಸೆಲ್ಸಿ ಸೇರಿದಂತೆ ಪ್ರಾಥಮಿಕ, ಪ್ರೌಢಶಾಲಾ ಹಂತದ ಎಲ್ಲ ತರಗತಿಗಳ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದು, ಮಕ್ಕಳು ಪೂರ್ವ ತಯಾರಿಯೊಂದಿಗೆ ಸಿದ್ದರಾಗಿ ಪರೀಕ್ಷೆಯಲ್ಲಿ ಯಶಸ್ಸುಗಳಿಸಬೇಕು ಎಂದು ಹಾರೈಸಿದರು.
ಡ್ರಾಯಿಂಗ್ ಲೋಯರ್, ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ 4ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉಳಿದವರು ಪ್ರಥಮ ಶ್ರೇಣಿಯಲ್ಲಿ ಪಾಸಾದ ಮಕ್ಕಳಗೆ ಪ್ರಶಸ್ತಿ, ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.ಗದಗಿನ ಜೆಟಿವಿಪಿ ಸಂಸ್ಥೆಯ ಎಸ್.ಎಸ್.ಕಳಸಾಪುರಶೆಟ್ರ, ಸಂಸ್ಕೃತ ಪಾಠ ಶಾಲೆಯ ಶಿಕ್ಷಕ ಎಸ್.ಎಸ್.ನೀಲಗುಂದ, ಈರಣ್ಣ ಗುರುಪುತ್ರನವರ, ಎಂ.ಎಚ್.ಎಂ.ಪಪೂ ಕಾಲೇಜು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ, ಡಿಗ್ರಿ ಕಾಲೇಜು ಪ್ರಾಂಶುಪಾಲ ಎಚ್.ಎನ್.ಕೆಲೂರ, ಜಿ.ಎಂ.ಕೋಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ಗುಲಾಬಚಂದ ಜಾಧವ, ಟಿ.ಬಿ.ಕರದಾನಿ, ಎಂ.ಎಸ್.ಸಜ್ಜನ, ಪಿ.ವೈ.ಧನಶೆಟ್ಟಿ, ಎಸ್.ಎಚ್.ನಾಗಣಿ, ಮಮತಾ ಕರೆಮುರಗಿ, ತನುಜಾ ಪೂಜಾರಿ, ಕವಿತಾ ಮರಡಿ, ಧನರಾಜ ಸಿಂಗಾರೆ, ತಿಮ್ಮಣ್ಣ ದಾಸರ, ಶಾಂತು ತಡಸಿ ಇದ್ದರು.