ಪಾವಗಡದಲ್ಲಿ ಅಂಬೇಡ್ಕರ್‌, ಜಗಜೀವನ್‌ರಾಮ್‌ ಜಯಂತ್ಯುತ್ಸವಕ್ಕೆ ಸಿದ್ಧತೆ

KannadaprabhaNewsNetwork | Published : Mar 11, 2024 1:17 AM

ಸಾರಾಂಶ

ತಾಲೂಕಿನ ಮಾದಿಗ ಹಾಗೂ ದಲಿತ ಸಮುದಾಯದ ಒಳತಿಗಾಗಿ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರ ಬೃಹತ್ ಸಮಾರಂಭ ಆಯೋಜನೆಗೆ ಉದ್ದೇಶಿಸಲಾಗಿದೆ. ಮಾದಿಗ ಸಮಾಜವನ್ನು ಒಗ್ಗೂಡಿಸುವ ಹಾಗೂ ಸಮಾಜದ ಎಲ್ಲಾ ಮುಖಂಡರು ಮತ್ತು ಶೋಷಿತ, ಜನಪರ ಹೋರಾಟಗಾರರ ಸಹಕಾರದ ಮೇರೆಗೆ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ದಲಿತರ ಪ್ರಗತಿಗಾಗಿ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತ್ಯುತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಸಂಬಂಧ ಇದೇ ಮಾ.16ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ದಲಿತ ಪರ ಸಂಘಟನೆ ಹಾಗೂ ಮುಖಂಡರ ಸಲಹೆ - ಸೂಚನೆಗಾಗಿ ಸಭೆ ಕರೆದಿರುವುದಾಗಿ ತಾಲೂಕು ದಲಿತ ಜಾಗೃತಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಡಿಎಸ್‌ಎಸ್‌ ಜಿಲ್ಲಾ ಯುವ ಘಟಕದ ಟಿ.ಎನ್. ಪೇಟೆ ರಮೇಶ್ ಇತರೆ ಮುಖಂಡರ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಮಾದಿಗ ಹಾಗೂ ದಲಿತ ಸಮುದಾಯದ ಒಳತಿಗಾಗಿ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರ ಬೃಹತ್ ಸಮಾರಂಭ ಆಯೋಜನೆಗೆ ಉದ್ದೇಶಿಸಲಾಗಿದೆ. ಮಾದಿಗ ಸಮಾಜವನ್ನು ಒಗ್ಗೂಡಿಸುವ ಹಾಗೂ ಸಮಾಜದ ಎಲ್ಲಾ ಮುಖಂಡರು ಮತ್ತು ಶೋಷಿತ, ಜನಪರ ಹೋರಾಟಗಾರರ ಸಹಕಾರದ ಮೇರೆಗೆ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಮಾದಿಗ ಸಮಾಜ ಹಾಗೂ ದಲಿತಪರ ಸಂಘಟನೆಯ ಎಲ್ಲಾ ಮುಖಂಡರು ಸಭೆಗೆ ಆಗಮಿಸಿ ಸಲಹೆ - ಸೂಚನೆ ನೀಡುವಂತೆ ಮನವಿ ಮಾಡಿದರು.

ಡಿಎಸ್ ಎಸ್ ಯುವ ಮುಖಂಡ ಟಿ.ಎನ್. ಪೇಟೆ ರಮೇಶ್ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತ್ಯುತ್ಸವಕ್ಕಾಗಿ ಐತಿಹಾಸಿಕ ಸಮಾರಂಭದ ಆಯೋಜನೆಗೆ ಉದ್ದೇಶಿಸಲಾಗಿದ್ದು, ಸಮಾಜದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಾಲಿ, ಮಾಜಿ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ಗಣ್ಯರು, ಸಾಹಿತಿ, ಪ್ರಗತಿಪರ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರು, ಸ್ವಸಹಾಯಕ ಸಂಘದ ಮಹಿಳಾ ಮುಖಂಡರು ಭಾಗವಹಿಸಲಿದ್ದಾರೆ. ಅಂದು ಮಾದಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ,ವಿವಿಧ ರಂಗದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ಕೈಗೊಳ್ಳಲಾಗಿದೆ. ಈ ಕಾರಣದ ಮೇರೆಗೆ ತಾಲೂಕಿನ ಎಲ್ಲಾ ದಲಿತ ವರ್ಗದ ಹಿರಿಯ ಮುಖಂಡರು ಆಗಮಿಸಿ ಸಲಹೆ ನೀಡುವಂತೆ ಕರೆ ನೀಡಿದರು.

ಸಂಘಟನೆಯ ಮುಖಂಡರಾದ ಪಳವಳ್ಳಿ ನರಸಿಂಹಪ್ಪ,ವಿಜಯಕುಮಾರ್, ಅಂಜನಮೂರ್ತಿ,ರಾಪ್ಟೆ ನಾಗರಾಜ್,ವೈ.ಎನ್. ಹೊಸಕೋಟೆ ಆರ್,ಅಂಜಯ್ಯ, ವೆಂಕಟಾಪುರ ಮೂರ್ತಿ, ಸಿ.ಕೆ.ಪುರ ಹನುಮಂತರಾಯಪ್ಪ, ಪಳವಳ್ಳಿ ಅಗ್ನಿ, ಪಾವಗಡದ ಅಂಜನ್‌ ಕುಮಾರ್, ಕಂಪ್ಯೂಟರ್ ನಾಗರಾಜ್, ಹನುಮಂತರಾಯಪ್ಪ,ಮದ್ಲೇಟಪ್ಪ, ರಾಮಾಂಜಿನಪ್ಪ ಹಾಗೂ ಇತರೆ ದಲಿತ ಸಂಘಟನೆಯ ಮುಖಂಡರಿದ್ದರು.

Share this article