ಲೋಕಸಭಾ ಪಾರದರ್ಶಕ ಚುನಾವಣೆ ನಡೆಸಲು ಸಿದ್ಧತೆ

KannadaprabhaNewsNetwork | Published : Mar 11, 2024 1:21 AM

ಸಾರಾಂಶ

ಚುನಾವಣಾ ಆಯೋಗ ಲೋಕಸಭಾ ಚುನಾವಣೆ ನಡೆಸಲು ಮಸ್ಟರಿಂಗ್‌ ಡಿ ಮಸ್ಟ್ರಿಂಗ್ ಮತಗಟ್ಟೆಗಳಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಿದ್ದು ಅದರಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು

ಕನ್ನಡಪ್ರಭ ವಾರ್ತೆ ಮಾಲೂರು

ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಮಸ್ಟರಿಂಗ್ ಡಿ ಮಸ್ಟ್ರಿಂಗ್ ಕೆಲವು ಮತಗಟ್ಟೆಗಳಿಗೆ ಪರಿಶೀಲನೆ ನಡೆಸಿ ಅಗತ್ಯವಿರುವ ಸೌಕರ್ಯ ಒದಗಿಸಿ ಪಾರದರ್ಶಕವಾಗಿ ಲೋಕಸಭಾ ಚುನಾವಣೆ ನಡೆಸಲು ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.

ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಮಸ್ಟರಿಂಗ್‌, ಡಿ ಮಸ್ಟ್ರಿಂಗ್ ವಿದ್ಯುನ್ಮಾನ ಮತಯಂತ್ರ ಸಂಗ್ರಹಿಸುವ ಸ್ಟ್ರಾಂಗ್ ರೂಂ ಸಿದ್ಧತೆಯ ಪರಿಶೀಲಿಸಿ ಮಾತನಾಡಿದರು.

ಸ್ಟ್ರಾಂಗ್‌ ರೂಂ ಪರಿಶೀಲನೆ

ಚುನಾವಣಾ ಆಯೋಗ ಲೋಕಸಭಾ ಚುನಾವಣೆ ನಡೆಸಲು ಮಸ್ಟರಿಂಗ್‌ ಡಿ ಮಸ್ಟ್ರಿಂಗ್ ಮತಗಟ್ಟೆಗಳಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಿದ್ದು ಅದರಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಭೇಟಿ ನೀಡಿ ಮಸ್ಟ್ ರಿಂಗ್ ಡಿ ಮಸ್ಟ್ರಿಂಗ್ ವಿದ್ಯುನ್ಮಾನ ಮತಯಂತ್ರ ಸಂಗ್ರಹಿಸಲು ಸ್ಟ್ರಾಂಗ್ ರೂಂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.ಪದವಿಪೂರ್ವ ಕಾಲೇಜಿನಲ್ಲಿ ಪ್ರತಿವರ್ಷ ಮಸ್ಟ್ ಟ್ರೈನ್ ಡಿ ಮಸ್ಟ್ರಿಂಗ್ ವಿದ್ಯುನ್ಮಾನ ಮತಯಂತ್ರ ಸಂಗ್ರಹಿಸಿ ಚುನಾವಣೆಗೆ ಬಳಸಲಾಗುತ್ತಿದೆ ಅದರಂತೆ ಲೋಕಸಭಾ ಚುನಾವಣೆಗೂ ಸಹ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣೆಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಕಳುಹಿಸಲು ಮಸ್ಟರಿಂಗ್ ಡಿ ಮಸ್ಟ್ರಿಂಗ್ ಮತ್ತು ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಲು ಸ್ಟ್ರಾಂಗ್ ರೂಂಗಳ ವ್ಯವಸ್ಥೆ ಮಾಡಲಾಗುವುದು ಇಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಪುರಸಭೆ ಹಾಗೂ ಕಂದಾಯ ಇಲಾಖೆಯು ಒದಗಿಸುತ್ತದೆ ಎಂದು ಹೇಳಿದರು.

ತಾಲೂಕಿನಲ್ಲಿ ೨೪೧ ಮತಗಟ್ಟೆ

ಜಿಲ್ಲೆಯಾದ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಮಾಲೂರು ತಾಲೂಕಿನಲ್ಲಿ ೨೪೧ ಮತಗಟ್ಟೆಗಳ ಪೈಕಿ ಎಂಟು ದುರ್ಬಲ ಮತಗಟ್ಟೆಗಳು ೩೬ ಅತಿ ಸೂಕ್ಷ್ಮ ಪಟ್ಟಣದಲ್ಲಿ ೩೩ ಮತಗಟ್ಟೆಗಳು ಮಾಲೂರಿನ ಮರಾಠಿ ಶಾಲೆಯ ಮತಗಟ್ಟೆ ಮತ್ತೆ ಮೊದಲಿನಂತೆ ಮೂಲಭೂತ ಸೌಕರ್ಯಗಳುಳ್ಳ ಕುಂಬಾರಪೇಟೆ ಸರ್ಕಾರಿ ಶಾಲೆಗೆ ಬದಲಾವಣೆ ಮಾಡಲಾಗಿದೆ, ಕುಂಬಾರಪೇಟೆ ಕೂರಂಡಳ್ಳಿ ಮತಗಟ್ಟೆಗಳಿಗೆ ಸಹ ಭೇಟಿ ನೀಡಿ ಮತಗಟ್ಟೆಗಳನ್ನು ಪರಿಶೀಲನೆ ಕಾರ್ಯ ಮಾಡಿದೆ ಎಂದು ತಿಳಿಸಿದರು.ತಹಸೀಲ್ದಾರ್ ಕೆ.ರಮೇಶ್, ಪುರಸಭಾ ಮುಖ್ಯ ಅಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ಡಿವೈಎಸ್ಪಿ ಎಚ್.ಕೆ.ನಾಕ್ತಿ, ಇನ್ಸ್‌ಪೆಕ್ಟರ್ ವಸಂತ್ ಕುಮಾರ್, ಪುರಸಭೆಯ ಅಭಿಯಂತರ ಶಾಲಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸ್, ವೆಂಕಟೇಶ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು, ಅಬಿಯಂತರ ರಾಜಗೋಪಾಲ್, ಉಪ ಪ್ರಾಂಶುಪಾಲ ರಾಮಕೃಷ್ಣಪ್ಪ, ಚುನಾವಣಾ ಶಾಖೆಯ ಸಂಪತ್ ಬಾಲಕೃಷ್ಣ, ನಂದೀಶ್ ಇದ್ದರು.

Share this article