ಕಸಾಪದ ಪಾವಿತ್ರ್ಯತೆ ಕಾಪಾಡಿ: ಮಾಜಿ ಶಾಸಕ ಶರಣಪ್ಪ ವಕೀಲರು

KannadaprabhaNewsNetwork |  
Published : Dec 16, 2024, 12:45 AM IST
ಪೋಟೊ14ಕೆಎಸಟಿ1: ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ಕಸಾಪ ನೂತನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಪದಗ್ರಹಣ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಒಂದು ಪವಿತ್ರವಾದ ಸಂಸ್ಥೆ. ಅದನ್ನು ಕಾಪಾಡಲು ಸಾಹಿತ್ಯದ ಕುರಿತು ಕಾರ್ಯಕ್ರಮ ಆಯೋಜನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕನ್ನಡ ಸಾಹಿತ್ಯ ಪರಿಷತ್ತು ಒಂದು ಪವಿತ್ರವಾದ ಸಂಸ್ಥೆ. ಅದನ್ನು ಕಾಪಾಡಲು ಸಾಹಿತ್ಯದ ಕುರಿತು ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ವತಿಯಿಂದ ನಡೆದ ತಾಲೂಕಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸಾಪ ಪ್ರತಿನಿಧಿಗಳ ಹಾಗೂ ಗಣ್ಯರ ಸಹಕಾರ ಪಡೆಯುವ ಮೂಲಕ ಕಾರ್ಯಕ್ರಮ ಮಾಡಬೇಕು. ಕಸಾಪ ಕಾರ್ಯಚಟುವಟಿಕೆಗಳಲ್ಲಿ ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದರು.

ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಸರ್ಕಾರದ ಅನುದಾನ ನಿರೀಕ್ಷಿಸದೆ ಜನಪ್ರತಿನಿಧಿಗಳ ಹಾಗೂ ದಾನಿಗಳ ಸಹಕಾರ ಪಡೆದುಕೊಂಡು ಮುಂದಿನ ಎರಡು ವರ್ಷದ ಅವಧಿಯಲ್ಲಿ ಎರಡು ತಾಲೂಕು ಮಟ್ಟದ ಸಮ್ಮೇಳನ ಮಾಡಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸಪಾಟೀಲ ಮಾತನಾಡಿ, ಕನ್ನಡದ ಸಂಪತ್ತನ್ನು ಸಂರಕ್ಷಣೆ ಮಾಡುವ ಕೆಲಸವಾಗಬೇಕಿದೆ. ಕನ್ನಡ ಶಾಲೆಗಳನ್ನು ಉಳಿಸುವ, ಬೆಳೆಸುವ ಕೆಲಸ ಮಾಡಬೇಕು. ನಾಡಿನ ಜನರು ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಹೊಸ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಉತ್ತಮ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಕೇಂದ್ರ ಕಸಾಪ ಸಂಘ-ಸಂಸ್ಥೆ ಪ್ರತಿನಿಧಿ ನಬಿಸಾಬ, ನ್ಯಾಯವಾದಿ ಫಕೀರಪ್ಪ ಚಳಗೇರಿ, ಜಾನಪದ ಕಲಾವಿದ ಶರಣಪ್ಪ ವಡಗೇರಿ, ಶರಣಪ್ಪ ಹೂಗಾರ, ಲೆಂಕಪ್ಪ ವಾಲಿಕಾರ, ರವೀಂದ್ರ ಬಾಕಳೆ ಮಾತನಾಡಿದರು.

ಈ ಸಂದರ್ಭ ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡ್ರು, ಹನುಮೇಶ ಗುಮಗೇರಿ, ಕಿಶನರಾವ ಕುಲಕರ್ಣಿ, ಶ್ರೀನಿವಾಸ ಜಹಗಿರದಾರ, ಚಂದಪ್ಪ ಹಕ್ಕಿ, ಅಬ್ದುಲಕರೀಂ ವಂಟೆಳಿ, ಮಂಜುನಾಥ ಗುಳೇದಗುಡ್ಡ, ನಿಂಗಪ್ಪ ಸಜ್ಜನ, ಉಮೇಶ ಹಿರೇಮಠ, ವೀರಬಸಯ್ಯ ಕಾಡಗಿಮಠ, ಮಹೇಶ ಸಿಂಗನಾಳ, ಚಂದಪ್ಪ ಗುಡಿಮನಿ, ತಾಜುದ್ದಿನ ದಳಪತಿ, ಹನುಮಂತಪ್ಪ ಈಟಿ, ಮಲ್ಲಪ್ಪ ಕುದರಿ, ನಜಿರಸಾಬ ಮೂಲಿಮನಿ, ಬಸವರಾಜ ಉಪ್ಪಲದಿನ್ನಿ, ಶ್ರೀನಿವಾಸ ಕಂಟ್ಲಿ, ಪರಶಿವಮೂರ್ತಿ ಮಾಟಲದಿನ್ನಿ, ದೇವರಾಜ ಬಡಿಗೇರ, ಶರಣಪ್ಪ ತೆಮ್ಮಿನಾಳ, ಮಹೇಶ ಹಡಪದ ಸೇರಿದಂತೆ ಹಲವರು ಇದ್ದರು. ಜುಮ್ಮನಗೌಡ ಪಾಟೀಲ ತಂಡವು ಸಂಗೀತಗಾಯನ ಪ್ರಸ್ತುತಪಡಿಸಿತು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ