ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದ ಪುರಸಭಾ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಹ್ಯಾರಿಸ್ ಮಹಮ್ಮದ್ ಸುಮೈರ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಮುಖ್ಯ ಅಧಿಕಾರಿ ಸುರೇಶ್ 2024-25ನೇ ಸಾಲಿನ ಉಳಿತಾಯ ಬಜೆಟ್ ಮಂಡಿಸಿದರು.ಈ ವರ್ಷ 16.83 ಕೋಟಿ ರು. ಗಳ ಆದಾಯ ಗಳಿಸುವ ನಿರೀಕ್ಷೆ ಇದೆ. ಅದೇ ರೀತಿ ಅಂದಾಜು 16.13 ಕೋಟಿ ರು. ಖರ್ಚು ಆಗಲಿದೆ. 69.64 ಲಕ್ಷ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ಆಸ್ತಿ ತೆರಿಗೆಯಿಂದ 1.75 ಕೋಟಿ, ನೀರಿನ ತೆರಿಗೆಯಿಂದ 45.5 ಲಕ್ಷ, ಮಳಿಗೆಗಳ ಬಾಡಿಗೆಯಿಂದ 3.10 ಲಕ್ಷ, ಉದ್ದಿಮೆ ಪರವಾನಗಿಯಿಂದ 12 ಲಕ್ಷ, ನೆಲ ಬಾಡಿಗೆ 28.05 ಲಕ್ಷ, ಇತರೆ ಮೂಲಗಳಿಂದ 23.50 ಲಕ್ಷಗಳು ಆದಾಯ ಬರಲಿದೆ ಎಂದರು.ಸರ್ಕಾರದಿಂದ 15ನೇ ಹಣಕಾಸು ಅನುದಾನ 96 ಲಕ್ಷ, ಎಸ್.ಎಸ್.ಸಿ ಅನುದಾನ 34 ಲಕ್ಷ, ವಿದ್ಯುತ್ ಶಕ್ತಿ ಅನುದಾನ ಒಂದು ಕೋಟಿ ತೊಂಬತ್ತೊಂಬತ್ತು ಲಕ್ಷ, ವೇತನ ಅನುದಾನ 2.41 ಕೋಟಿ, ಕುಡಿಯುವ ನೀರಿನ ಅನುದಾನ 3 ಲಕ್ಷ ನಿರೀಕ್ಷೆ ಇದೆ ಎಂದರು.
ಪುರಸಭಾ ಕಚೇರಿಯ ನಿರ್ವಹಣೆಯ ವೆಚ್ಚ 57.85 ಲಕ್ಷ, ರಸ್ತೆ ಕಲ್ಲು ಹಸುಗಳು ಮತ್ತು ರಸ್ತೆ ಬದಿಯ ಚರಂಡಿಗಳು ಇತರೆ ಸ್ಥಿರಾಸ್ತಿಗಳಿಗೆ 46 ಲಕ್ಷ. ಬೀದಿ ದೀಪ ನಿರ್ವಹಣೆಗೆ 26 ಲಕ್ಷ, ಸದಸ್ಯರ ಪ್ರವಾಸ ಅಧ್ಯಯನಕ್ಕೆ 5 ಲಕ್ಷ, ವಾಹನಗಳ ಇಂಧನ ಹಾಗೂ ದುರಸ್ತಿ ಮತ್ತು ನಿರ್ವಹಣೆಗೆ 12.20 ಲಕ್ಷ, ಹೊರಗುತ್ತಿಗೆ ನೌಕರರು ಹಾಗೂ ನೇರ ಪಾವತಿ ನೌಕರರ ವೇತನ 65 ಲಕ್ಷ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 7 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದರು.ಅಲ್ಲದೆ ನೀರು ಸರಬರಾಜು ವಿಭಾಗದ ದುರಸ್ತಿ ಮತ್ತು ನಿರ್ವಹಣೆಗೆ 30 ಲಕ್ಷ, ಬ್ಲಿಚಿಂಗ್ ಪೌಡರ್ ಹಾಗೂ ಆಲಂ ಸರಬರಾಜುಗೆ 15 ಲಕ್ಷ, ಹೊರಗುತ್ತಿ ನೌಕರರ ವೇತನ ಪಾವತಿಗೆ 30 ಲಕ್ಷ, ಕಚೇರಿ ಯಂತ್ರೋಪಕರಣ ಹಾಗೂ ಕಂಪ್ಯೂಟರ್ಗಳಿಗೆ 5 ಲಕ್ಷ, ರಸ್ತೆಗಳ ನಿರ್ಮಾಣಕ್ಕೆ ಒಂದು ಕೋಟಿ 50 ಲಕ್ಷ, ಚರಂಡಿ ನಿರ್ಮಾಣಕ್ಕೆ ಒಂದು ಕೋಟಿ, ಮಳೆ ನೀರು, ಚರಂಡಿ ನಿರ್ಮಾಣಕ್ಕೆ 10 ಲಕ್ಷ, ನಾಗರಿಕ ವಿನ್ಯಾಸಗಳಿಗೆ 15 ಲಕ್ಷ, ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 95 ಲಕ್ಷ, ನೀರು ಸರಬರಾಜು ವಿಭಾಗಕ್ಕೆ 50 ಲಕ್ಷ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 20 ಲಕ್ಷಗಳು ವ್ಯಯವಾಗಲಿದೆ ಎಂದು ಅವರು ತಿಳಿಸಿದರು.
ಪುರಸಭಾ ಸದಸ್ಯರಾದ ವೆಂಕಟೇಶ್, ಎಚ್.ಸಿ. ನರಸಿಂಹಮೂರ್ತಿ, ಆಸಿಫ್ ಇಕ್ಬಾಲ್, ರಾಜು, ಪುಟ್ಟ ಬಸವ, ಪ್ರೇಮ್ ಸಾಗರ್, ನಂಜಪ್ಪ, ಲೋಕೇಶ್, ಶಿವಮ್ಮ, ದರ್ಶಿನಿ, ನಂದಿನಿ, ಕವಿತಾ, ಸರೋಜಮ್ಮ, ಸುಹಾಸಿನಿ, ಅನಿತಾ, ಶಾಂತಮ್ಮ, ನಾಗಮ್ಮ ಇದ್ದರು.