ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಕರ್ನಾಟಕದ ಹೆಮ್ಮೆಯ ಕಲಾ ಪ್ರಕಾರವಾದ ಗಮಕ ಕಲೆಯನ್ನು ಪ್ರಚುರಪಡಿಸುತ್ತಿರುವುದು ಶ್ಲಾಘನಿಯ ಎಂದು ಪಟ್ಟಣದ ಶ್ರೀ ವಿವೇಕಾನಂದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಟಿ.ಜಿ.ಶಶಾಂಕ ಹೇಳಿದ್ದಾರೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ವಿವೇಕಾನಂದ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಶಾಲೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಶಾಲೆಗೆ ಹಿರಿಯರಾದ ರಾಮಸುಬ್ಬಾರಾಯ ಶೇಟ್ ಹಾಗೂ ಸುನಿತಾ ಕಿರಣ್ ಸತತವಾಗಿ ಮೂರು ವರ್ಷಗಳಿಂದ ಬಂದು ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಕಲೆಯ ಪರಿಚಯ ಹಾಗೂ ಪಠ್ಯಧಾರಿತ ಭಾಗವಾದ್ದರಿಂದ ಅಂಕಗಳಿಕೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ತರೀಕೆರೆಯಲ್ಲಿ ಶ್ರಾವಣ ಮಾಸ ಪ್ರಾರಂಭವಾದಾಗಿನಿಂದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಶಾಲಾ ಕಾಲೇಜುಗಳಲ್ಲಿ ಮಾಡುತ್ತ ಬಂದಿದ್ದೇವೆ. ಎಲ್ಲರ ಸಹಕಾರದಿಂದ ಮಕ್ಕಳಿಗೆ ಸಂಬಂಧಿತ ವಿಚಾರಗಳ ಮೂಲಕ ಅವರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.ಕಸಾಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಕುಮಾರ್ 10ನೇ ತರಗತಿಯ ಪಠ್ಯದ ಕುಮಾರವ್ಯಾಸ ಭಾರತದ ಭಾಮಿನಿ ಷಟ್ಪದಿ ಕಾವ್ಯ ಭಾಗವನ್ನು ಸುಶ್ರಾವ್ಯವಾಗಿ ವಾಚಿಸಿದರು. ಗಮಕ ಪರಿಷತ್ ಜಿಲ್ಲಾ ಅಧ್ಯಕ್ಷ ರಾಮಸುಭ್ರಯ ಶೇಟ್ ಕರ್ಣನ ದಾನ ಗುಣ ಹಾಗೂ ಸ್ವಾಮಿ ನಿಷ್ಠೆ ಎಲ್ಲರಿಗೂ ಮಾದರಿ ಯಾಗಬೇಕೆಂದು ಮಹಾಭಾರತದ ಮಹತ್ವವನ್ನು ತಮ್ಮ ವ್ಯಾಖ್ಯಾನದಲ್ಲಿ ವಿವರಿಸಿದರು.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶ್ರೀನಿವಾಸ್ ಮಾತನಾಡಿ ಮಕ್ಕಳಲ್ಲಿ ಭಾಷಾಭಿಮಾನ, ದೇಶಾಭಿಮಾನ ಹೊಂದಿ ಹಿರಿಯರಿಗೆ ತಂದೆ ತಾಯಿಗಳಿಗೆ ಹಾಗೂ ಗುರುಗಳಿಗೆ ಗೌರವ ನೀಡಬೇಕೆಂದು ತಿಳಿಸಿದರು.ಶಾಲೆ ಮುಖ್ಯಯೊಪಾಧ್ಯಯರಾದ ಡಾ. ಕೆ. ಕಾರ್ತಿಕೇಯನ್ ಭುವನೇಶ್ವರಿಗೆ ಪೋಟೋಗೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್ ಪೆನ್ನಯ್ಯ ಹಾಗೂ ಶಾಲೆ ಸಹಶಿಕ್ಷಕರು ಉಪಸ್ಥಿತರಿದ್ದರು.
-24ಕೆಟಿಆರ್.ಕೆ.8ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಟಿ.ಜಿ.ಶಶಾಂಕ ಉದ್ಘಾಟಿಸಿದರು. ತಾ.ಕಸಾಪ ಅಧ್ಯಕ್ಷ ರವಿದಳವಾಯಿ, ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಕುಮಾರ್ ಮತ್ತಿತರರು ಇದ್ದರು.