ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ ಕ್ಷತ್ರಿಯರ ಹೊಣೆ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಜಾತಿ ಭೇದ ಮಾಡದೇ ದೀನ, ದಲಿತರ ರಕ್ಷಣೆಗಾಗಿ ಆದಿ, ಅನಾದಿ ಕಾಲದಿಂದ ನಾಡು ನುಡಿ, ಸಂಸ್ಕೃತಿ ಮಣ್ಣಿನ ಸುರಕ್ಷತೆಗಾಗಿ ಹೋಮ, ಹವನ, ಧರ್ಮ ಕಾರ್ಯ ಮಾಡುವ ಮೂಲಕ ಸನಾತನ ಧರ್ಮದ ರಕ್ಷಣೆಗೆ ಕ್ಷತ್ರಿಯ ರಾಜ ಮಹಾರಾಜರು ಬದ್ದ

ಗದಗ: ಸನಾತನ ಧರ್ಮ, ಸಂಸ್ಕೃತಿಯ ರಕ್ಷಣೆ, ಪಾಲನೆ, ಪೋಷಣೆ ಮಾಡಿ ಬೆಳೆಸುವುದು ಕ್ಷತ್ರಿಯರ ಸಾಮಾಜಿಕ ಹೊಣೆಯಾಗಿದೆ ಎಂದು ಹುಲಕೋಟಿಯ ಸಾವಯವ ಕೃಷಿ ಮಾರ್ಗದರ್ಶಕ ಗುರುನಾಥಗೌಡ ಓದುಗೌಡ್ರ ಹೇಳಿದರು.

ನಗರದ ಶ್ರೀತ್ರಿಕೂಟೇಶ್ವರ ದೇವರ ಸನ್ನಿಧಿಯಲ್ಲಿ 7 ವರ್ಷದಿಂದ ಕ್ಷತ್ರಿಯ ಫೌಂಡೇಶನ್ ವತಿಯಿಂದ ಸನಾತನಿಯರ ಮೂಲ ಗುರು ಭಗವಾನ ಗುರು ದತ್ತಾತ್ರೇಯ ಮಹಾರಾಜರ ಜಯಂತಿ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಗುರುದತ್ತ ಮಹಾ ಯಾಗ, ಹೋಮ, ಹವನ, ಕಾರ್ತವೀರ್ಯಾರ್ಜುನ ಸ್ವಾಮಿಯ ಬೀಜ ಮಂತ್ರದ ಪಠಣ, ಧಾರ್ಮಿಕ ಧರ್ಮ ಸಮಾರಂಭದಲ್ಲಿ ಮಾತನಾಡಿದರು.

ಜಾತಿ ಭೇದ ಮಾಡದೇ ದೀನ, ದಲಿತರ ರಕ್ಷಣೆಗಾಗಿ ಆದಿ, ಅನಾದಿ ಕಾಲದಿಂದ ನಾಡು ನುಡಿ, ಸಂಸ್ಕೃತಿ ಮಣ್ಣಿನ ಸುರಕ್ಷತೆಗಾಗಿ ಹೋಮ, ಹವನ, ಧರ್ಮ ಕಾರ್ಯ ಮಾಡುವ ಮೂಲಕ ಸನಾತನ ಧರ್ಮದ ರಕ್ಷಣೆಗೆ ಕ್ಷತ್ರಿಯ ರಾಜ ಮಹಾರಾಜರು ಬದ್ದವಾಗಿದ್ದರು, ಇಂದಿನ ಸಮುದಾಯಕ್ಕೆ ಇಂತಹ ಧರ್ಮ ಜಾಗೃತಿ ಸಮಾರಂಭಗಳು ಹಾಗೂ ಹೋಮ ಹವನದ ಮಹತ್ವ, ವಿಜ್ಞಾನದ ಮಹತ್ವ ಹಾಗೂ ಭಾರತದ ಪರಂಪರೆಯ ಮಹತ್ವದ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡಬೇಕು ಎಂದರು.

ಕ್ಷತ್ರಿಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಆರ್.ಟಿ. ಕಬಾಡಿ ಮಾತನಾಡಿ, ತ್ರಿಕೂಟೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 7ನೇ ವರ್ಷದ ಗುರು ದತ್ತ ಮಹಾರಾಜರ ಜಯಂತಿಯ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಸಹಕರಿಸಿದ ಸಮಾಜದ ಪ್ರತಿಯೊಬ್ಬ ಸಮುದಾಯದ ಜನರಿಗೆ ಅಭಿನಂದಿಸಿದರು.

ಗುರುದತ್ತ ಮಹಾಯಾಗ, ಹೋಮ ಹವನ, ಮಹಾ ಯಾಗ, ಕಾರ್ತ್ಯವೀರಾರ್ಜುನ ಸ್ವಾಮಿಯ ಮಂತ್ರ ಪಠಣ, ಇದರ ಮಹತ್ವ ಗದುಗಿನ ವೇದ ಪಂ. ರತ್ನಾಕರಭಟ್ ಜೋಶಿ ಹಾಗೂ ಗದುಗಿನ ಬ್ರಾಹ್ಮಣ ಪ್ರೋಹಿತರು ನೆರೆವೇರಿಸಿದರು. ಹನುಮಂತಸಾ ನಿರಂಜನ ಮಾತನಾಡಿದರು.

ನಿಸ್ವಾರ್ಥ ಧರ್ಮ ಹಾಗೂ ಸಾಮಾಜಿಕ ಸೇವೆಯಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಕ್ಷಾತ್ರ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ದಿ.ವೈದ್ಯ ಬಸವರಾಜ ಮಲಕಾಜಪ್ಪ ಕೊಂಚಿಗೇರಿಗೆ ಮರಣೋತ್ತರ ವೈದ್ಯರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಶ್ರೀ ಪ್ರಕಾಶ ಸ್ವಾಮೀಜಿ ಅವಧೂತ, ಡಿ.ಸಿ. ಬಾಕಳೆ, ಸಾಗರ ಪವಾರ, ಸಂಗಮೇಶ ಕವಳಿಕಾಯಿ, ಪರಶುರಾಮಸಾ ಹಬೀಬ, ಶಂಕರಸಾ ಕಲಬುರ್ಗಿ, ಭೀಮು ಹಬೀಬ, ನಾರಾಯಣ ನಿರಂಜನ, ಸಂಜೀವ್ ಖಟವಟೆ, ನರಸಿಂಗಸಾ ಕಬಾಡಿ, ಪ್ರಕಾಶ ಕಾಟಿಗಾರ, ದೀಪಕ ಪವಾರ, ಮೋಹನ ಹಬೀಬ, ಸಚಿನ ಖೋಡೆ, ಗೋಪಾಲ ಕಾಟವಾ, ಮೆಹರವಾಡೆ, ಶಂಕರ ಬೇವಿನಕಟ್ಟಿ, ಕಸ್ತೂರಿಬಾಯಿ ಭಾಂಡಗೆ, ಗೀತಾಬಾಯಿ, ಸರೋಜಾಬಾಯಿ ಕಾರವಾರಿ, ನಾಗರಾಜ ನಿರಂಜನ, ಗುರು ಕಬಾಡಿ, ಗಜಾನನ ಬದಿ, ಮಾಲಾಬಾಯಿ ಬದಿ, ಶಾಂತಾಬಾಯಿ ಬಾಕಳೆ, ರತ್ನಾಬಾಯಿ ಭಾಂಡಗೆ, ಸರೋಜಾಬಾಯಿ ಟೀಕಾನದಾರ, ರೇಣುಕಾಬಾಯಿ ಕಲಬುರ್ಗಿ ಹಾಗೂ ಕ್ಷತ್ರಿಯ ಬ್ರಿಗೇಡ್ ಫೌಂಡೇಶನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಭಕ್ತರು ಇದ್ದರು. ನಂತರದಲ್ಲಿ ಗುರುದತ್ತಾತ್ರೇಯ ಮಹಾರಾಜರ ಸಂಕೀರ್ತನ ಪ್ರದಕ್ಷಣೆ ವಿಜೃಂಭಣೆಯಿಂದ ನಡೆಯಿತು.

Share this article