ಕನ್ನಡಪ್ರಭ ವಾರ್ತೆ ಸೊರಬ
ಬುಧವಾರ ತಾಲೂಕಿನ ಮಳಲಗದ್ದೆ ಗ್ರಾಮದಲ್ಲಿ ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಪರ್ಯಾವರಣ ಸಂರಕ್ಷಣಾ ಗತಿವಿಧಿ, ಪರಿಸರ ಜಾಗೃತಿ ಟ್ರಸ್ಟ್, ಲಯನ್ಸ್ ಸಂಸ್ಥೆ, ವೃಕ್ಷ ಲಕ್ಷ ಆಂದೋಲನ, ತಾಪಂ ಸಹಯೋಗದಲ್ಲಿ ಹಮ್ಮಿಕೊಂಡ ದಂಡಾವತಿ ಜೀವವೈವಿಧ್ಯ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮಗೆ ನೀರು, ಆರೋಗ್ಯ, ಅನ್ನ ನೀಡುವ ನದಿ, ಕೆರೆ, ಹಳ್ಳ-ಕೊಳ್ಳಗಳು ನಮ್ಮ ತಾತ್ಸಾರ ಭಾವನೆಯಿಂದ ಅಮೂಲ್ಯ ಪರಿಸರ ಹಾಳುಗೆಡವುತ್ತಿದ್ದೇವೆ. ನದಿ ಮೂಲ ರಕ್ಷಣೆ ಜತೆಗೆ ಮಳೆ ತರಿಸುವ ಕಾಡಿನ ರಕ್ಷಣೆಗೂ ಮುಂದಾಗಬೇಕಿದೆ ಎಂದರು. ದಂಡಾವತಿ ಜೀವ ವೈವಿದ್ಯ ಅಭಿಯಾನ ವಿನೂತನ, ಅಗತ್ಯ ಮಾಹಿತಿ ಅರಿಯಲು ಸಹಕಾರಿಯಾಗಿದೆ. ನದಿ ಮೂಲಗಳ ಸಂರಕ್ಷಣೆಗೂ ನೆರವಾಗಿವೆ. ಬೆಳೆಯುವ ಮಕ್ಕಳಿಗೆ ಇಂತಹ ಅಭಿಯಾನ ಪ್ರಸ್ತುತದಲ್ಲಿ ತೀರಾ ಅವಶ್ಯವಿದೆ ಎಂದರು.ಸಾಹಿತಿ ರೇವಣಪ್ಪ ಬಿದರಗೆರೆ ಮಾತನಾಡಿ, ನದಿ ಉಗಮ ಮತ್ತು ಸಾಗುವ ದಾರಿಯೇ ವಿಸ್ಮಯ ಮತ್ತು ಕುತೂಹಲಕ್ಕೆ ಕಾರಣವಾಗುತ್ತದೆ. ನದಿ ಮತ್ತು ಮಲೆನಾಡಿನ ದಟ್ಟಾರಣ್ಯ ಅದೆಷ್ಟೋ ಕೌತುಕಗಳಿಗೆ ಕಾರಣವಾಗಿದ್ದರೂ ಅರಿಯಲು ನಿರ್ಲಕ್ಷಿಸುತ್ತೇವೆ. ಒಂದು ನದಿ, ಹಳ್ಳಗಳ ಅಥವಾ ಕೆರೆಗಳ ನೆಲೆ ಹಿನ್ನೆಲೆ ರೋಚಕವೆನಿಸಿದ್ದು, ಹನಿಹನಿಗೂಡಿದರೆ ಹಳ್ಳ ನುಡಿಗಟ್ಟು ಅದೆಷ್ಟು ಅರ್ಥಪೂರ್ಣ ಎನಿಸಿದೆ ಎಂದರು.
ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಆಯೋಜಕ ಪ್ರಶಾಂತ ಹುನವಳ್ಳಿ ಅವರು ಜೀವವೈವಿಧ್ಯ ದಾಖಲಾತಿ ನಡೆಸಿದರು. ಮಳಲಗದ್ದೆ ದೀಪಕ್ ಸಸ್ಯ ಪ್ರಬೇಧಗಳ ಪರಿಚಯ, ಅವುಗಳ ಬಳಕೆ, ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸುಧನ್ವ, ಸುಭಾನು ಬೀಜ ಸಂಗ್ರಹಣೆ ನಡೆಸಿದರು.