ಕನ್ನಡಪ್ರಭ ವಾರ್ತೆ ಪಾವಗಡ
ಮುಸ್ಲಿಮರಿಗೆ 4% ಮೀಸಲಾಯಿತಿಯನ್ನು ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಮಂಗಳವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಬೆಳಿಗ್ಗೆ ಪಟ್ಟಣದ ಎಸ್‌ಎಸ್‌ಕೆ ವೃತ್ತದದಿಂದ ಹೊರಟ ಪ್ರತಿಭಟನೆಕಾರರರು ಇಲ್ಲಿನ ಚಳ್ಳಕರೆ ರಸ್ತೆ ಮೂಲಕ ತೆರಳಿ ರಾಜ್ಯ ಸರ್ಕಾರದ ಆ ವೈಜ್ಞಾನಿಕ ನಡೆ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ವಿಶ್ವ ಹಿಂದೂ ಪರಿಷತ್ ತುಮಕೂರು ವಿಭಾಗದ ಕಾರ್ಯದರ್ಶಿ ಸಂಜಯ್ ಮಾತನಾಡಿ ಕೆಟಿಟಿಪಿ ಕಾಯ್ದೆಯಲ್ಲಿನ ತಿದ್ದುಪಡಿಯ 2 ಕೋಟಿ ರು. ವರೆಗಿನ ಸಿವಿಲ್ ವರ್ಕ್ ಗುತ್ತಿಗೆಗಳಲ್ಲಿ ಮತ್ತು 1 ಕೋಟಿ ರು.ವರೆಗಿನ ಸರಕು ಮತ್ತು ಸೇವಾ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡ ನಾಲ್ಕು ರಷ್ಟು ಮೀಸಲಾತಿಯನ್ನು ಅನುಮತಿಸಿರುವುದು ಖಂಡನೀಯ ಎಂದರು.ಕೆಟಿಪಿಟಿ ಕಾಯ್ದೆಗೆ ಕರ್ನಾಟಕ ಸಚಿವ ಸಂಪುಟ ಕಳೆದ ವಾರ ತಿದ್ದುಪಡಿ ಮಾಡಿ ಅನುಮೋದನೆ ನೀಡಿದ್ದು ಸಂವಿಧಾನ ಆರ್ಟಿಕಲ್ 15 ನಿರ್ದಿಷ್ಟವಾಗಿ ರಾಜ್ಯವು ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರಿಕ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಈ ಸಂಬಂಧ ಸಂವಿಧಾನ ರಚಿಸುವಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಧರ್ಮದಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ವಿವಿಧ ರಾಜ್ಯಗಳಲ್ಲಿ ಧರ್ಮದಾರಿತ ಮೀಸಲಾತಿಯನ್ನು ಒದಗಿಸಲು ಇದೇ ರೀತಿಯ ಪ್ರಯತ್ನಗಳು ನಡೆದಾಗ ನ್ಯಾಯಾಲಯಗಳು ತಿರಸ್ಕರಿಸಿವೆ. ಹೀಗಿದ್ದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿ ನೀಡುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ಸಹ ಧರ್ಮದ ಆಧಾರದ ಮೇಲೆ ಮೀಸಲಾತಿ ರದ್ದುಗೊಳಿಸಿದೆ. ಮೀಸಲಾತಿ ಪ್ರಯೋಜನಗಳಿಗಾಗಿ 77 ಸಮುದಾಯಗಳನ್ನು ಒಬಿಸಿ ಎಂದು ವರ್ಗೀಕರಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಧರ್ಮದಾರಿತ ಮೀಸಲಾತಿಯನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದ ಯಾವುದೇ ಕಲ್ಯಾಣ ಉದ್ದೇಶವಿಲ್ಲದ ಅಸಂವಿಧಾನ ಮೇಲಿನ ಮಸೂದೆಗೆ ಒಪ್ಪಿಗೆ ನೀಡದಂತೆ ನಾವು ನಿಮ್ಮನ್ನು ಕೇಳಿಕೊಳ್ಳುತೇವೆ. ಕರ್ನಾಟಕದಲ್ಲಿ ಆಡಳಿತರೂಢ ಸರ್ಕಾರದ ವೋಟ್ ಬ್ಯಾಂಕ್ ಆಗಿರುವ ಸಮುದಾಯವನ್ನು ಸಮಾಧಾನಪಡಿಸಲು ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸುವ ಕಾರ್ಯವು ರಾಷ್ಟ್ರೀಯ ಸಮಗ್ರತೆ ಏಕತೆ ಮತ್ತು ಸೌಹಾರ್ದತೆಗೆ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಬಜರಂಗದಳದ ಜಿಲ್ಲಾ ಸಂಯೋಜಕ ಎನ್.ವಿ.ಸುಮಾನ್,ಬಜರಂಗದಳದ ತಾಲೂಕು ಸಂಯೋಜಕ್ ರವಿ, ಕಾರ್ಯದರ್ಶಿ ವಾಸು ಗೋರಕ್ಷ ಪ್ರಮುಖ್ ಕಾರ್ತಿಕ್, ಮಧು ,ಧನು ,ನಾಗೇಂದ್ರ ಮಹೇಶ್, ರವಿ ,ಅನಿಲ್ ಕುಮಾರ್ ಹಾಗೂ ದೊಮ್ಮತಮರಿ ರವಿ,ರಾಮಾಂಜಿನಪ್ಪ,ವಂಕಟೇಶ್ ಅಂಜಿನಪ್ಪ,ಶಿವಯ್ಯ ರಮೇಶ್,ನರಶ್ ಅಂಜಿನಪ್ಪ ಬೀರಲಿಂಗಪ್ಪ ಹಾಗೂ ಇತರೆ ಅನೇಕ ಮಂದಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರಿದ್ದರು.