ಮದ್ಯದಂಗಡಿ ತೆರವುಗೊಳಿಸುವಂತೆ ಪ್ರತಿಭಟನೆ

KannadaprabhaNewsNetwork | Published : Nov 15, 2024 12:31 AM

ಸಾರಾಂಶ

ಮದ್ಯದಂಗಡಿ ಹಾಗೂ ಲಾಡ್ಜಿಂಗ್ ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ತಟ್ಟೆಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಮದ್ಯದಂಗಡಿ ಹಾಗೂ ಲಾಡ್ಜಿಂಗ್ ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ತಟ್ಟೆಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಟ್ಟೆಹಳ್ಳಿ ಕ್ರಾಸ್‌ನಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಅಬಕಾರಿ ಅಧಿಕಾರಿಗಳು ಮಧ್ಯದಂಗಡಿ ಸೇರಿದಂತೆ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದ್ದಾರೆ. ಮಧ್ಯದಂಗಡಿಯಿಂದಾಗಿ ಗ್ರಾಮದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಗ್ರಾಮದ ಅಂಗಡಿಗಳಲ್ಲಿ ದಿನಸಿಗಿಂತ ಸುಲಭವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಮಧ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಗ್ರಾಮ ಪಂಚಾಯಿತಿ ಎದುರು ಅನೇಕ ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.

ಹೋಟೆಲ್ ಆರಂಭಿಸುವುದಾಗಿ ಸ್ಥಳೀಯ ಗ್ರಾಮಾಡಳಿತಕ್ಕೆ ತಪ್ಪು ಮಾಹಿತಿ ನೀಡಿ ಬಾರ್ ಮತ್ತು ರೆಸ್ಟೋರೆಂಟ್ ತೆರೆದಿದ್ದಾರೆ. ಬಾರ್ ರೆಸ್ಟೋರೆಂಟ್ ನಿಂದಾಗಿ ಗ್ರಾಮದ ಘನತೆಗೆ ಧಕ್ಕೆಯಾಗುತ್ತದೆ. ಮಧ್ಯದಂಗಡಿ ತಟ್ಟೆಹಳ್ಳಿ ರಸ್ತೆಗೆ ಹೊಂದಿಕೊಂಡಿರುವುದರಿಂದ ಗ್ರಾಮಸ್ಥರಿಗೆ ಓಡಾಟಕ್ಕೆ ತೀರ್ವ ತೊಂದರೆಯಾಗುತ್ತದೆ. ಮದ್ಯದಂಗಡಿ ಪರವಾನಗಿ ನೀಡದಂತೆ ಅನೇಕ ಬಾರಿ ಅಬಕಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾಗಿ ತಿಳಿಸಿದರು.

ಸ್ಥಳಕ್ಕೆ ಬಂದ ಅಬಕಾರಿ ಎಸ್‌ಐ ಶ್ರೀಧರ್ ಪ್ರತಿಭಟನಕಾರರ ಮನವೊಲಿಸುವಲ್ಲಿ ವಿಫಲರಾದರು. ಅಬಕಾರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತರು. ಸಂಜೆ ವೇಳೆಗೆ ಸ್ಥಳಕ್ಕಾಗಮಿಸಿದ ಅಬಕಾರಿ ಜಿಲ್ಲಾಧಿಕಾರಿ ಸುಮಿತ ರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು ಮಾತಿನ ಚಕಮಕಿ ನಡೆಸಿದರು.

ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಅಬಕಾರಿ ಜಿಲ್ಲಾಧಿಕಾರಿ ಸುಮಿತ, ಸಂಜೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಸ್ಥಳದಿಂದ ತೆರಳಿದರು. ಅಧಿಕಾರಿ ಸುಮಿತಾ ಕ್ರಮ ಕೈಗೊಳುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.

ಗ್ರಾಮ ಮುಖಂಡ ಮುದ್ದುವೀರಪ್ಪ, ಸತ್ಯಣ್ಣ, ಚಿನ್ನಯ್ಯ, ರಂಗನಾಥ್, ಸಂದೀಪ, ರವಿಕುಮಾರ್, ಶಿವಕುಮಾರ್‌ಗೌಡ, ಮಹೇಶಪ್ಪ, ಜಗದೀಶ್‌ಗೌಡ, ರುದ್ರೋಜಿರಾವ್, ಹಾಲೇಶಪ್ಪ, ಲಂಕೇಶ, ಮಹಾದೇವಪ್ಪ, ರಾಮಪ್ಪ, ತಿಮ್ಮಪ್ಪ, ಮರಿಯಪ್ಪ, ರಂಗಪ್ಪ, ಕರಿಯಪ್ಪ ಇತರರಿದ್ದರು.

Share this article