ಪರವಾನಗಿ ಪಡೆದ ಭೂ ಮಾಪಕರಿಗೆ ಸೌಲಭ್ಯ ಕಲ್ಪಿಸಿ

KannadaprabhaNewsNetwork | Published : Jun 30, 2025 12:34 AM

ಸರ್ಕಾರಿ ಭೂಮಾಪಕರಿಗೆ ಸರ್ಕಾರದಿಂದ ಯಾವುದೇ ಸೌಲತ್ತುಗಳು ಸಿಗದೇ ಇರುವುದು ಬೇಸರ ಸಂಗತಿ ಆಗಿದೆ. ಆದ್ದರಿಂದ ಇಲಾಖೆಯು ಕೊಡುವ ಸಂಭಾವಯಿಂದ ನಮ್ಮ ಜೀವನ ನಿರ್ವಹಣೆಗೆ ಮಾಡಲು ಸಾಧ್ಯವಾಗುತ್ತಿಲ್ಲ,ಆದ್ದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ಕೆಲಸವನ್ನು ಕಾಯಂಗೊಳಿಸಲಿ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರವು ಅನುಷ್ಠಾನ ಮಾಡುವ ಎಲ್ಲಾ ಸರ್ವೆ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಸರ್ಕಾರಿ ಭೂಮಾಪಕರಿಗೆ ಕೊಡುವ ಸೌಲತ್ತುಗಳನ್ನು ನೀಡುತ್ತಿಲ್ಲ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ತಾಲೂಕು ಅಧ್ಯಕ್ಷ ಪಾಂಡುರಂಗಯ್ಯ ತಿಳಿಸಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ತಾಲೂಕು ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಅಧಿವೇಶನದಲ್ಲಿ ಧ್ವನಿ ಎತ್ತಲು ಶಾಸಕ ಎಸ್. ಎನ್ ನಾರಾಯಣಸ್ವಾಮಿಗೆ ಮನವಿ ಪತ್ರ ನೀಡಿ ಮಾತನಾಡಿದರು.

ಸೌಲಭ್ಯ ನೀಡಲು ಮೀನಮೇಷ

ಸುಮಾರು ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಾ, ಕಾರ್ಯ ನಿರ್ವಹಿಸುತ್ತಾ ಬಂದಿರುತ್ತೇವೆ. ಆದರೂ ನಮಗೆ ಇಲಾಖೆಯಿಂದ ಯಾವುದೇ ಸೌಲತ್ತುಗಳನ್ನೂ ನೀಡುತ್ತಿಲ್ಲ. ಸರ್ಕಾರಿ ಭೂಮಾಪಕರಿಗೆ ಕೊಡುವ ಸೌಲತ್ತುಗಳನ್ನು ಪರವಾನಿಗಿ ಭೂ ಮಾಪಕರಿಗೆ ನೀಡುತ್ತಿಲ್ಲ. ನಾವು ಕೂಡ ಇಲಾಖೆಯ ಎಲ್ಲಾ ಹಂತದ ಪರೀಕ್ಷೆಗಳನ್ನು ಪಡೆದು ಉರ್ತ್ತೀಣರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಆದರೂ ತಮಗೆ ಅಗತ್ಯ ಸೌಲಭ್ಯ ನೀಡುತ್ತಿಲ್ಲ ಎಂದರು.

ರೈತರಿಂದ ಬರುವ ನೋಂದಣಿ ಪೂರ್ವ ೧೧-ಇ ನಕ್ಷೆ, ತತ್ಕಾಲ್ ಪೋಡಿ, ಅಲಿನಷೇನ್ ಪೂರ್ವ ನಕ್ಷೆ, ದರಖಾಸ್ತು ಪೋಡಿ ಅಳತೆ, ಆಕಾರ್ ಬಂದ್ ಡಿಸ್ಟಲೈಜೇಷನ್, ಸ್ವಾಮಿತ್ವ, ನಕ್ಷಾ ಮ್ಯಾಪಿಂಗ್, ಇ-ಸ್ವತ್ತು. ಕೆರೆ, ರಾಜಕಾಲುವೆ, ದೇವಸ್ಥಾನ, ಕುಂಟೆ, ಪೋಡಿ ಮುಕ್ತ ಅಳತೆ ಹಾಗೂ ಇಲಾಖೆ ಕೊಡುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಸರಿಯಾದ ಸಮಯಕ್ಕೆ ನಿರ್ವಹಿಸುತ್ತಿದ್ದೇವೆ ಎಂದರು.

ಸಂಭಾವನೆ ಸಾಕಾಗುತ್ತಿಲ್ಲಆದರೆ ನಮಗೆ ಸರ್ಕಾರದಿಂದ ಯಾವುದೇ ಸೌಲತ್ತುಗಳು ಸಿಗದೇ ಇರುವುದು ಬೇಸರ ಸಂಗತಿ ಆಗಿದೆ. ಆದ್ದರಿಂದ ಇಲಾಖೆಯು ಕೊಡುವ ಸಂಭಾವಯಿಂದ ನಮ್ಮ ಜೀವನ ನಿರ್ವಹಣೆಗೆ ಮಾಡಲು ಸಾಧ್ಯವಾಗುತ್ತಿಲ್ಲ,ಆದ್ದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ಕೆಲಸವನ್ನು ಕಾಯಂಗೊಳಿಸಿ ಸರ್ಕಾರಿ ಭೂಮಾಪಕರನ್ನಾಗಿ ಮಾಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರವಿ ರಾಜು, ನಿತಿನ್ ಪ್ರಭಾಕರ್ , ಅಜಯ್ ಕುಮಾರ್ , ರಕ್ಷಿತ್ , ಸಂತೋಷ್ ಪಿ ಎನ್ , ವೆಂಕಟೇಶ್,ಪ್ರಸಾದ್ ಹಾಗೂ ಮೊದಲಾದವರು ಇದ್ದರು.