ಲಕ್ಕವಳ್ಳಿ ಗ್ರಾಮದ ಕೃಷಿ ಪತ್ತಿನ ನೀರು ಬಳಕೆದಾರರ ಸಹಕಾರ ಸಂಘ ನಿಯಮಿತಕ್ಕೆ ಅವಿರೋಧವಾಗಿ
ಕನ್ನಡಪ್ರಭ ವಾರ್ತೆ, ತರೀಕೆರೆಭದ್ರಾ ಕಾಡಾ ನಿಗಮದಿಂದ ರೈತರಿಗೆ ಸೂಕ್ತ ತರಬೇತಿ ಶಿಬಿರ ಆಯೋಜಿಸಬೇಕು ಎಂದು ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಲ್.ಟಿ.ಹೇಮಣ್ಣ ಹೇಳಿದ್ದಾರೆ.
ಲಕ್ಕವಳ್ಳಿ ಗ್ರಾಮದ ಕೃಷಿ ಪತ್ತಿನ ನೀರು ಬಳಕೆದಾರರ ಸಹಕಾರ ಸಂಘ ನಿಯಮಿತಕ್ಕೆ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹರಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಭದ್ರಾ ಅಣೆಕಟ್ಟೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಬತ್ತ ಬಿತ್ತನೆ ಕುಂಠಿತಗೊಂಡಿದೆ. ಕಡಿಮೆ ಅವಧಿಯಲ್ಲಿ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಹಕಾರದೊಂದಿಗೆ ತಾಂತ್ರಿಕವಾಗಿ ಮಾಹಿತಿ ಒದಗಿಸುವ ಸಲುವಾಗಿ ಸಹಾಯವಾಣಿ ಪ್ರಾರಂಭ ಮಾಡಬೇಕು ಎಂದರು.ಭದ್ರಾ ನದಿಯಿಂದ ಹರಿಸುವ ಕಾಲುವೆ ನೀರು ಪೋಲಾಗದಂತೆ ಸಿವಿಲ್ ಕಾಮಗಾರಿ ಕೈಗೊಳ್ಳಲು ಸಂಘದಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ನರೇಗಾ ಯೋಜನೆ ಅನ್ವಯ ಕೃಷಿ ಅವಲಂಬಿತ ರೈತರಿಗೆ ಬರಗಾಲದಲ್ಲೂ ಪರಿಹಾರ ಮತ್ತು ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರೆಯಲು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ವೆಂಕಟರಮಣ, ರೈತ ಸಂಘದ ಅಧ್ಯಕ್ಷ ನಂದಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಫಣಿರಾಜ್ ಜೈನ್, ಬಿಒಜಿ ಶ್ರೀಧರ್, ಸುಬ್ರಮಣ್ಯ ಸಂಘದ ಪದಾಧಿಕಾರಿಗಳು ಕಚೇರಿ ಕಾರ್ಯದರ್ಶಿ ಶ್ರೀರಾಮು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
10ಕೆಟಿಆರ್1ಃತರೀಕೆರೆ ಸಮೀಪದ ಲಕ್ಕವಳ್ಳಿ ಗ್ರಾಮದ ಕೃಷಿ ಪತ್ತಿನ ನೀರು ಬಳಕೆದಾರರ ಸಹಕಾರ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹರಿ ಅವರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಲ್.ಟಿ.ಹೇಮಣ್ಣ, ಸಂಘದ ಉಪಾಧ್ಯಕ್ಷ ವೆಂಕಟರಮಣ ಮತ್ತಿತರರು ಇದ್ದರು.