ಕನ್ನಡಪ್ರಭ ವಾರ್ತೆ ಭಾರತೀನಗರ
ಗ್ರಾಪಂ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಎಲ್ಲರೂ ಮತದಾನ ಮಾಡಬೇಕು ಎಂದರು.
ಯಾವುದೇ ಆಮಿಷಕ್ಕೆ ಮರುಳಾಗದಿರಿ. ವಿವೇಚನೆಯಿಂದ ಮತ ಚಲಾಯಿಸಿ, ನಮ್ಮ ಮತ ನಮ್ಮಹಕ್ಕು. ಮತ ಚಲಾಯಿಸುವುದು ನಮ್ಮೆಲ್ಲರ ಹಕ್ಕು. ದೇಶದ ಭವಿಷ್ಯ ನಿಮ್ಮ ಬೆರಳಿನ ಮತದಲ್ಲಿದೆ. ಹಾಗಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ ಎಂದು ತಿಳಿಸಿದರು.ತಾಪಂ ಇಒ ಮಂಜುನಾಥ್ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಕಾರ್ಮಿಕರಿಗೆ ವೇತನ ಸಹಿತ ರಜೆ ಇದೆ. ಮತ ಹಾಕುವುದನ್ನು ಮರೆಯಬೇಡಿ ಎಂದು ತಿಳಿಸಿದರು.
ಇದೇ ವೇಳೆ ಭಾರತ್ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಹಾಗೂ ತಾಲೂಕು ಸ್ವೀಪ್ ಮಿತಿ ವತಿಯಿಂದ ನಮ್ಮ ಭವಿಷ್ಯವನ್ನು ಶಕ್ತಿಯುತ ಗೊಳಿಸಲು ಕಡ್ಡಾಯವಾಗಿ ಮತಚಲಾಯಿಸುವ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಸೋಮಶೇಖರ್ ಚಾಲನೆ ನೀಡಿದರು.ಭಾರತೀನಗರ ಗ್ರಾಪಂನಿಂದ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಪಂಜಿನ ಮತ್ತು ದೀಪದ ಮೆರವಣಿಗೆಯಲ್ಲಿ ಭಾರತೀನಗರದ ಹೆದ್ದಾರಿಯಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ಸಹಾಯಕ ನಿರ್ದೇಶಕ ಮಂಜುನಾಥ್, ಪಿಡಿಓ ಎನ್.ಸುಧಾ, ಉಪ ತಹಸೀಲ್ದಾರ್ ಶಿವಲಿಂಗಯ್ಯ, ಗ್ರಾಮಲೆಕ್ಕಿಗ ರವಿ, ಸಂಪನ್ಮೂಲ ವ್ಯಕ್ತಿ ಅಂಬರಹಳ್ಳಿ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಬೈಕ್ ರ್‍ಯಾಲಿ ಮೂಲಕ ಮತದಾನ ಜಾಗೃತಿಶ್ರೀರಂಗಪಟ್ಟಣ:ತಾಲೂಕಿನ ಬಲ್ಲೇನಹಳ್ಳಿ ಗ್ರಾಪಂ ಹಾಗೂ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಸಹಯೋಗದಲ್ಲಿ ಕೂಡಲಕುಪ್ಪೆ ಹಾಗೂ ಬನಹಳ್ಳಿಗಳಲ್ಲಿ ಬೈಕ್ ರ್‍ಯಾಲಿ ಮೂಲಕ ಮತದಾನ ಜಾಗೃತಿ ನಡೆಸಲಾಯಿತು.
ನಂತರ ಪಂಚಾಯ್ತಿ ಕಾರ್ಯಾಲಯ ಮುಂಭಾಗ ಮಾನವ ಸರಪಳಿ ರಚಿಸಿ, ಗ್ರಾಮಗಳ ಮತದಾರರಿಗೆ ಚುನಾವಣೆ ಮಾಹಿತಿಗಳ ನೀಡಿ ಮತದಾನದ ಹಕ್ಕು, ಪ್ರತಿಯೊಬ್ಬರು ಮತದಾನವನ್ನು ಅಗತ್ಯವಾಗಿ ಮಾಡುವ ನಿಯಮಗಳ ಕುರಿತು, ಪಿಡಿಒ ಸುರೇಶ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಪಂಚಾಯ್ತಿ ಸಿಬ್ಬಂದಿ ದಿವ್ಯ ಮಹೇಶ್, ಪುನೀತ್, ಅರುಣ್, ಕೂಡಲಕುಪ್ಪೆ ಸೋಮಶೇಖರ್, ಸಂಜಯ್ ಸೇರಿದಂತೆ ಇತರರು ಹಾಜರಿದ್ದರು.