ಕನ್ನಡಪ್ರಭ ವಾರ್ತೆ ತಾಳಿಕೋಟೆ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಡೋಣಿ ನದಿಯು ಉಕ್ಕಿ ಹರಿಯುತ್ತಿದ್ದು ತಾಳಿಕೋಟೆ-ವಿಜಯಪುರ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಕೆಳಮಟ್ಟದ ಸೇತುವೆಯು ಜಲಾವೃತವಾಗಿ ಸಂಪರ್ಕ ಬಂದ್ ಆಗಿದೆ. ಕಡಿತಗೊಂಡಿದೆ. ಡೋಣಿ ನದಿಯಲ್ಲಿ ಹೆಚ್ಚಿನ ಪ್ರವಾಹವಿದ್ದು, ಅದನ್ನು ಲೆಕ್ಕಿಸದೇ ವಾಹನಗಳು ಸಂಚಾರ ನಡೆಸಿವೆ. ಮಧ್ಯಾಹ್ನದ ನಂತರ ಪ್ರವಾಹ ಹೆಚ್ಚಾಗಿದ್ದು, ತಾಲೂಕಿನ ವಡವಡ ಗ್ರಾಮದಿಂದ ತಾಳಿಕೋಟೆ ಪಟ್ಟಣಕ್ಕೆ ಆಗಮಿಸಿದ್ದ ಇಬ್ಬರು ಪ್ರವಾಹದಲ್ಲಿ ಮುಳಗಡೆಯಾಗಿದ್ದರು. ಮುಳುಗಡೆಯಾಗಿದ್ದ ಸೇತುವೆ ದಾಟುವ ಸಮಯದಲ್ಲಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಇದರಲ್ಲಿ ಓರ್ವ ಈಜಿ ದಡ ಸೇರಿದ್ದು, ಮತ್ತೊಬ್ಬ ಬೈಕ್ ಸವಾರ ನಾಪತ್ತೆಯಾಗಿದ್ದಾನೆ.ಇಬ್ಬರನ್ನು ಬೈಕ್ ಸವಾರ ಸಂತೋಷ ಹಡಪದ(೩೨) ಮತ್ತು ಮಹಾಂತೇಶ ಹತಗೌಡರ(೪೫) ಎಂದು ಗುರುತಿಸಲಾಗಿದೆ. ಇದರಲ್ಲಿ ಕೊಚ್ಚಿ ಹೋದ ಬೈಕ್ ಸವಾರ ಸಂತೋಷ ಹಡಪದ ಎಂದು ಗುರುತಿಸಲಾಗಿದ್ದು, ಆತ ಇನ್ನು ಪತ್ತೆಯಾಗಿಲ್ಲ. ಆತನಿಗಾಗಿ ತಾಲೂಕಾಡಳಿತ ಅಗ್ನಿ ಶಾಮಕ ಸಿಬ್ಬಂದಿಗಳಲ್ಲದೇ ಮತ್ತು ಮೀನುಗಾರ ತಂಡದವರು ಸಂಜೆವರೆಗೂ ಶೋಧ ನಡೆಸಿದರು. ಆದರೂ ಪತ್ತೆಯಾಗಿಲ್ಲ. ಈ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಈ ತಾಳಿಕೋಟೆ-ವಿಜಯಪುರ ರಾಜ್ಯ ಹೆದ್ದಾರಿ ರಸ್ತೆಯನ್ನು ಪೊಲೀಸ್‌ರು ಬಂದ್ ಮಾಡಿದ್ದಾರೆ.ಕೊಚ್ಚಿಹೋದ ಯುವಕ ಸಂತೋಷ ಹಡಪದ ಶೋಧಕ್ಕಾಗಿ ನಾಳೆ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತಹಸೀಲ್ದಾರ್ ಡಾ.ವಿನಯಾ ಹೂಗಾರ ತಿಳಿಸಿದ್ದಾರೆ. ಡೋಣಿ ನದಿಯಲ್ಲಿ ಯುವಕ ಕೊಚ್ಚಿಹೋದ ಸುದ್ದಿ ತಿಳಿದು ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ನದಿ ತೀರದಿಂದ ಕೊಚ್ಚಿ ಹೋದ ಯುವಕ ಸಂತೋಷ ಹಡಪದ ಹುಡುಕಾಟದ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು. ನೀರಿನ ಮಟ್ಟ ಕಡಿಮೆಯಾಗುವವರೆಗೂ ತಾಳಿಕೋಟೆ-ವಿಜಯಪುರ ವಾಹನಗಳ ಸಂಚಾರ ಬಂದ್ ಮಾಡುವಂತೆ ಸೂಚನೆ ನೀಡಿದರು.ಕೋಟ್
ಮಧ್ಯಾಹ್ನ ೨ ಗಂಟೆಯ ನಂತರ ಸೇತುವೆ ಜಲಾವೃತಗೊಂಡಿದ್ದರಿಂದ ಪೊಲೀಸರಿಗೆ ಸೂಚನೆ ನೀಡಿ ಸಂಪೂರ್ಣ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆದರೆ ಈ ನದಿಯಲ್ಲಿ ಕೊಚ್ಚಿ ಹೋದ ಸಂತೋಷ ಎಂಬ ಯುವಕ ಪೊಲೀಸ್‌ರು ತಡೆದರೂ ಲೆಕ್ಕಿಸದೇ ಸೇತುವೆ ದಾಟಲು ಹೋಗಿದ್ದಾರೆ ಎನ್ನಲಾಗಿದೆ. ಈ ಘಟನೆ ಯಾವುದೇ ರೀತಿಯಿಂದ ಆಗಿದ್ದರೂ ಆ ಯುವಕ ಬದುಕಿ ಬರಲಿ ಎಂಬುದು ನಮ್ಮ ಆಶಯ. ಆತನಿಗಾಗಿ ನಾನಾ ರೀತಿಯ ಪ್ರಯತ್ನಗಳನ್ನು ನಡೆಸಿ ಹುಡುಕಾಡಿಸಿದ್ದೇವೆ. ಗುರುವಾರ ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಲಿದ್ದೇವೆ.ಡಾ.ವಿನಯಾ ಹೂಗಾರ, ತಹಸೀಲ್ದಾರ್‌ಸೇತುವೆ ಜಲಾವೃತಗೊಂಡಿದ್ದರಿಂದ ಎರಡುಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆ ಸಂಪರ್ಕ ಬಂದ್ ಮಾಡಿದ್ದೇವೆ, ಯಾರೂ ಬಂಡ ದೈರ್ಯಮಾಡಿ ಜಲಾವೃತವಾಗಿರುವ ಸೇತುವೆ ದಾಟುವ ದುಸ್ಸಾಹಸಕ್ಕೆ ಮುಂದಾಗಬೇಡಿ. ಸೇತುವೆಯ ಎರಡು ಬದಿಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಿಯೋಜನೆ ಮಾಡಿದ್ದೇನೆ.ಜ್ಯೋತಿ ಖೋತ್, ಪಿಎಸ್‌ಐ ತಾಳಿಕೋಟ