ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ

KannadaprabhaNewsNetwork | Published : Mar 8, 2024 1:46 AM

ಸಾರಾಂಶ

ಚಾಮರಾಜನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನವು ಮಾ.7 ರಿಂದ 13 ರವರಗೆ ಸಾರ್ವಜನಿಕರಿಗೆ ದೊರೆಯಲಿದೆ.

ಎನ್‌.ರವಿಚಂದ್ರಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನವು ಮಾ.7 ರಿಂದ 13 ರವರಗೆ ಸಾರ್ವಜನಿಕರಿಗೆ ದೊರೆಯಲಿದೆ.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಚಾಮರಾಜನಗರ ಅವರು 88ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದ ಪ್ರಯುಕ್ತ ಆಯೋಜಿಸಿರುವ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನದಲ್ಲಿ ಜನರು ದರ್ಶನ ಪಡೆದುಕೊಳ್ಳಬಹುದಾಗಿದೆ.ದೇಶದಲ್ಲಿ 64 ಜ್ಯೋತಿರ್ಲಿಂಗಗಳಿದ್ದು, ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತಿ ಪವಿತ್ರವಾಗಿದೆ ಎಂದು ನಂಬಲಾಗಿದ್ದು, ಈ 12 ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾಕಟಾಕ್ಷ ದೊರೆತು ಮೋಕ್ಷ ಲಭಿಸಲಿದೆ ಎಂಬುದು ನಂಬಿಕೆಯಾಗಿದೆ.12 ಜ್ಯೋತಿರ್ಲಿಂಗಗಳು ಯಾವುವು?:

ಶತಮಾನಗಳ ಇತಿಹಾಸವಿರುವ ಹಾಗೂ ಪುರತನ ಇತಿಹಾಸವಿರುವ ಗುಜರಾತಿನಲ್ಲಿರುವ ಸೋಮನಾಥೇಶ್ವರ, ಮಧ್ಯಪ್ರದೇಶದ ಪುರಾತನ ಹಾಗೂ ಪವಿತ್ರ ನಗರವಾದ ಉಜ್ಜಯಿನಿಯಲ್ಲಿನ ಮಹಾಕಾಲೇಶ್ವರ, ಉತ್ತರಾಖಂಡ್ ರಾಜ್ಯದ ಹಿಮಾಲಯ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದಾರನಾಥ, ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿರುವ ಭೀಮಾಶಂಕರ, ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿರುವ ಕಾಶಿ ವಿಶ್ವನಾಥ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರ್ಯಂಬಕೇಶ್ವರ, ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜನ, ಜಾರ್ಖಂಡ್ ರಾಜ್ಯದ ದೇವಗಡ್‍ನಲ್ಲಿರುವ ವೈದ್ಯನಾಥ, ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ, ತಮಿಳುನಾಡಿನ ರಾಮೇಶ್ವರಮ್‍ನಲ್ಲಿರುವ ರಾಮನಾಥಸ್ವಾಮಿ, ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿನ ಶಿವಪುರಿ ಅಥವಾ ಮಂಡತ ಎಂಬ ದ್ವೀಪದಲ್ಲಿರುವ ಓಂಕಾರೇಶ್ವರ, ರಾಜಸ್ಥಾನ ರಾಜ್ಯದ ಜೈಪುರ್ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್‌ ಎಂಬಲ್ಲಿರುವ ಗೃಷ್ಣೇಶ್ವರ.

ಹೋಲೋಗ್ರಾಂ ಶಿವ ದರ್ಶನ:

ಚಾಮರಾಜನಗರದಲ್ಲಿ ಆಯೋಜಿಸಿರುವ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನದಲ್ಲಿ ಹೋಲೋಗ್ರಾಂ ಎಂಬ ಶಿವ ಸಿದ್ಧಗೊಳಿಸಿ, ಅದನ್ನು ಡಿಜಿಟಲಿಕರಣಗೊಳಿಸಲಾಗಿದ್ದು, ಈ ಶಿವನಲ್ಲಿ 12 ಬಣ್ಣದ ಹೂಗಳ ಅಭಿಷೇಕವನ್ನು ಸಹ ನೋಡಬಹುದಾಗಿದೆ. ಮೊದಲೇ ಹೋಲೋಗ್ರಾಂ ಶಿವ ಇಡಲಾಗಿದ್ದು, ಹೋಲೋಗ್ರಾಂ ಶಿವನ ಹಿಂದೆ ಬಲಗಡೆಗೆ 12 ಎಡಗಡೆಗೆ 12 ಶಿವಲಿಂಗಗಳನ್ನು ಇಡಲಾಗಿದ್ದು, ಮುಂದೆ ಬಸವ ಇರುವುದರಿಂದ ಹೋಲೋಗ್ರಾಂ ಶಿವ ಎಲ್ಲರನ್ನು ಆಕರ್ಷಿಸುತ್ತಿದೆ. ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮೈಸೂರು, ಯಾದಗಿರಿ, ಸರಸ್ವತಿಪುರಂ ಹಾಗೂ ಕಳೆದ ಬಾರಿ ಕೊಳ್ಳೇಗಾಲದಲ್ಲಿ ಆಯೋಜಿಸಲಾಗಿತ್ತು. ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಪುಣ್ಯಪಡೆದುಕೊಳ್ಳಬೇಕು. -ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರೀಜಿ, ಸಂಚಾಲಕರು, ಬ್ರಹ್ಮಕುಮಾರೀಸ್‌ ಚಾಮರಾಜನಗರ.

Share this article