ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ಪುಟ್ಟಣ್ಣ: ರಂಗನಾಥ್‌

KannadaprabhaNewsNetwork |  
Published : Jan 26, 2024, 01:54 AM IST
ಕೆ ಕೆ ಪಿ ಸುದ್ದಿ 03:ಶಿಕ್ಷಕರ ಕ್ಷೇತ್ರದ ಸಂಭಾವ್ಯ ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ನಗರದ ಶ್ರೀದೇಗುಲಮಠ ದಲ್ಲಿ ಪೂಜೆ ನೇರವೇರಿಸಿ ಚುನಾವಣಾ ಪ್ರಚಾರ ಕೈಗೊಂಡರು. | Kannada Prabha

ಸಾರಾಂಶ

ಕನಕಪುರ: ಪುಟ್ಟಣ್ಣ ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡಿದರು ಎಂದು ಎ.ಪಿ. ರಂಗನಾಥ್ ಟೀಕಿಸಿದರು.

ಕನಕಪುರ: ಪುಟ್ಟಣ್ಣ ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡಿದರು ಎಂದು ಎ.ಪಿ. ರಂಗನಾಥ್ ಟೀಕಿಸಿದರು.

ನಗರದ ದೇಗುಲ ಮಠಕ್ಕೆ ಭೇಟಿ ನೀಡಿದ ಜೆಡಿಎಸ್(ಎನ್‌ಡಿಎ) ಮೈತ್ರಿ ಸಂಭಾವ್ಯ ಅಭ್ಯರ್ಥಿ ಎ.ಪಿ. ರಂಗನಾಥ್ ಶ್ರೀ ದೇಗುಲಮಠದ ಕಿರಿಯ ಸ್ವಾಮೀಜಿ ಚನ್ನಬಸವಸ್ವಾಮಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.16ರಂದು ಬೆಂಗಳೂರು ನಗರ, ಗ್ರಾಮಾಂತರ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ (ಎನ್‌ಡಿಎ) ಅಭ್ಯರ್ಥಿಯಾಗಿ ನನ್ನನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಶ್ರೀ ದೇಗುಲ ಮಠದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಪ್ರಾರಂಭಿಸಿರುವುದಾಗಿ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ನಾನು ಸೋಲು ಕಂಡರೂ ಕೊರೋನಾ ಸಂಕಷ್ಟದಲ್ಲಿ ಸರ್ಕಾರದ ಸಹಕಾರದಿಂದ ನನ್ನ ಕೈಲಾದ ಸೇವೆ ಜೊತೆಗೆ, ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ನಕಲಿ ಮತಗಳನ್ನು ಪಡೆದು ಪುಟ್ಟಣ್ಣ ವಾಮಮಾರ್ಗದ ಮೂಲಕ ಗೆಲುವು ಸಾಧಿಸಿ ಶಿಕ್ಷಕರ ಯಾವುದೇ ಸಮಸ್ಯೆ ಗಳಿಗೆ ಸ್ಪಂದಿಸದೆ ಶಿಕ್ಷಕ ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

ನಕಲಿ ಮತಗಳನ್ನು ಪಡೆದು ಜಯಗಳಿಸುತ್ತಿದ್ದ ಪುಟ್ಟಣ್ಣರವರ ಬಣ್ಣ ಬಯಲಾಗಿರುವುದು ಚುನಾವಣಾ ಆಯೋಗದ ಗಮನಕ್ಕೂ ಬಂದಿದೆ. ಶಿಕ್ಷಕರು ಈ ಬಾರಿ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು, ವಿಶ್ರಾಂತ ಶಿಕ್ಷಕ ಆರ್.ವಿ. ನಾರಾಯಣ್, ಉಪನ್ಯಾಸಕ ನಾಗರಾಜು, ಅರುಣ್‌ಕುಮಾರ, ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:

ಶಿಕ್ಷಕರ ಕ್ಷೇತ್ರದ ಸಂಭಾವ್ಯ ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಕನಕಪುರದ ಶ್ರೀ ದೇಗುಲ ಮಠದಲ್ಲಿ ಪೂಜೆ ನೆರವೇರಿಸಿ ಚುನಾವಣಾ ಪ್ರಚಾರ ಕೈಗೊಂಡರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ