ಹರಿಹರದಲ್ಲಿ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಸಂಪನ್ನ

KannadaprabhaNewsNetwork |  
Published : Aug 23, 2024, 01:02 AM IST
೨೨ಎಚ್‌ಆರ್‌ಆರ್೧ ನಗರದ ರಾಘವೇಂದ್ರ ಮಠದಲ್ಲಿ ಗುರುವಾರ ರಾಘವೇಂದ್ರ ಸ್ವಾಮಿಯ ರಥೋತ್ಸವ ನೆರವೇರಿತು. ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಚಾಲನೆ ನೀಡಿದರು. ಮಠದ ಪ್ರಧಾನ ಅರ್ಚಕ ವರಹಾಚಾರ್, ನಗರಸಭಾ ಸದಸ್ಯ ವಾಮನಮೂರ್ತಿ, ಮಠದ ಟ್ರಸ್ಟಿ ಎ.ಬಿ. ಬಸವರಾಜ್ ಸೇರಿದಂತೆ ಭಕ್ತಗಣ ಭಾಗವಹಿಸಿದ್ದರು. | Kannada Prabha

ಸಾರಾಂಶ

ಹರಿಹರ ನಗರದ ತುಂಗಭದ್ರಾ ನದಿ ದಡದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ೩೫೩ನೇ ಆರಾಧನಾ ಮಹೋತ್ಸವದ ಮೂರನೇ ದಿನವಾದ ಗುರುವಾರ ರಾಘವೇಂದ್ರ ಸ್ವಾಮಿ ರಥೋತ್ಸವ ನೇರವೇರಿತು.

- ವಚನಾನಂದ ಶ್ರೀ ನೇತೃತ್ವದಲ್ಲಿ ರಥ ಎಳೆದ ಅರ್ಚಕರು, ಭಕ್ತರು - - - ಕನ್ನಡಪ್ರಭ ವಾರ್ತೆ ಹರಿಹರ

ನಗರದ ತುಂಗಭದ್ರಾ ನದಿ ದಡದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ೩೫೩ನೇ ಆರಾಧನಾ ಮಹೋತ್ಸವದ ಮೂರನೇ ದಿನವಾದ ಗುರುವಾರ ರಾಘವೇಂದ್ರ ಸ್ವಾಮಿ ರಥೋತ್ಸವ ನೇರವೇರಿತು.

ಬೆಳಗ್ಗೆ ೯.೩೦ಕ್ಕೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ಅನಂತರ ವಿವಿಧ ಹೂವುಗಳಿಂದ ಅಲಂಕೃತ ರಥದಲ್ಲಿ ಮೂರ್ತಿಯನ್ನು ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಸಮ್ಮುಖ ಪ್ರತಿಷ್ಠಾಪನೆ ಮಾಡಲಾಯಿತು.

"ಗೋವಿಂದ ಗೋವಿಂದ " ಎಂದು ನಾಮಸ್ಮರಣೆ ಮಾಡುತ್ತಾ ವಚನಾನಂದ ಶ್ರೀ ಮತ್ತು ಶ್ರೀಮಠದ ಅರ್ಚಕರು ಹಾಗೂ ನೂರಾರು ಭಕ್ತರ ಸಮ್ಮುಖ ರಥವನ್ನು ಎಳೆದು ಭಕ್ತಿ ಸಮರ್ಪಿಸಲಾಯಿತು.

ರಥೋತ್ಸವದ ನಂತರ ವಿವಿಧ ಮಹಿಳಾ ಮಂಡಳಿಗಳ ಸದಸ್ಯರು ಕೋಲಾಟದ ನೃತ್ಯ ಪ್ರದರ್ಶಿಸಿದರು. ರಥೋತ್ಸವದ ನಂತರ ರಾಘವೇಂದ್ರ ಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿ, ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ನಡೆದವು.

ಮಠದ ಪ್ರಧಾನ ಅರ್ಚಕ ವರಹಾಚಾರ್, ನಗರಸಭಾ ಸದಸ್ಯ ವಾಮನಮೂರ್ತಿ, ಮಠದ ಟ್ರಸ್ಟಿ ಎ.ಬಿ. ಬಸವರಾಜ್, ಎಚ್.ಎಸ್. ಶ್ರೀಧರ್ ಶೆಟ್ಟಿ, ಶಿವಪ್ರಕಾಶ್ ಶಾಸ್ತ್ರಿ, ಪ್ರಕಾಶ್ ಕೊಳೂರು, ರಾಘವೇಂದ್ರ ಉಪಾಧ್ಯಾಯ, ಎಬಿಎಂ ನಾಗರಾಜ್, ಎಬಿಎಂ ಮಂಜುನಾಥ್, ಎಚ್. ದಿನೇಶ್, ಶ್ರೀನಿವಾಸ್ ಚಂದಾಪೂರ್, ಎಚ್.ಎಸ್. ಸುಕುಮಾರ್, ಆರ್.ವಿ. ಕೃಷ್ಣಮೂರ್ತಿ, ರಾಜು ನಾಯ್ಡು, ಶಿವಕುಮಾರ್, ವೈ. ರಘುಪತಿ, ಎಚ್. ನಿಜಗುಣ, ಕ್ಯಾಂಟಿನ್ ಮಂಜುನಾಥ್, ಅರ್ಚಕ ಪವನ್, ಭಜನಾ ಮಂಡಳಿಯ ಮಹಿಳಾ ಸದಸ್ಯರು ಸೇರಿದಂತೆ ಭಕ್ತಗಣ ಭಾಗವಹಿಸಿದ್ದರು.

- - - -೨೨ಎಚ್‌ಆರ್‌ಆರ್೧:

ಹರಿಹರ ನಗರದ ರಾಘವೇಂದ್ರ ಮಠದಲ್ಲಿ ಗುರುವಾರ ರಾಘವೇಂದ್ರ ಸ್ವಾಮಿ ರಥೋತ್ಸವ ನೆರವೇರಿತು. ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಚಾಲನೆ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ