ಭೋಗಾಪುರೇಶ ದೇವಸ್ಥಾನದಲ್ಲಿ ರಾಯರ ಆರಾಧನೆ ಸಂಪನ್ನ

KannadaprabhaNewsNetwork |  
Published : Aug 24, 2024, 01:24 AM IST
೨೩ಕೆಎನ್‌ಕೆ-೩                                      ಕನಕಗಿರಿ ತಾಲೂಕಿನ ನವಲಿ ಭೋಗಾಪುರೇಶ ದೇವಸ್ಥಾನದಲ್ಲಿ ರಾಯರ ಉತ್ತಾರಾಧನೆ ನಿಮಿತ್ತ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು.   | Kannada Prabha

ಸಾರಾಂಶ

ಕನಕಗಿರಿ ತಾಲೂಕಿನ ನವಲಿ ಗ್ರಾಮದ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಭೋಗಾಪುರೇಶ ಸೇವಾ ಪ್ರತಿಷ್ಠಾನದ ವತಿಯಿಂದ ರಾಯರ ೫೦ನೇ ವರ್ಷದ ಆರಾಧನಾ ಮಹೋತ್ಸವದ ನಡೆಯಿತು.

ಕನಕಗಿರಿ: ಪೂರ್ವಜರ ಶ್ರಮದಿಂದ ನವಲಿ ಭೋಗಾಪುರೇಶ ದೇವಸ್ಥಾನದಲ್ಲಿ ನಡೆದ ೫೦ನೇ ವರ್ಷದ ರಾಯರ ಆರಾಧನೆ ಯಶಸ್ವಿಯಾಗಿದೆ ಎಂದು ಸಂಶೋಧಕ ಪವನಕುಮಾರ ಗುಂಡೂರು ಹೇಳಿದರು.

ಅವರು ತಾಲೂಕಿನ ನವಲಿ ಗ್ರಾಮದ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಭೋಗಾಪುರೇಶ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ರಾಯರ ೫೦ನೇ ವರ್ಷದ ಆರಾಧನಾ ಮಹೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳ ಹಿಂದೆ ಇದ್ದ ನಮ್ಮ ಹಿರಿಯರು ರಾಯರ ಆರಾಧನೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ತೋರಿದ ಹಾದಿಯಲ್ಲಿ ನಾವೆಲ್ಲರೂ ನಡೆದುಕೊಳ್ಳುವ ಮೂಲಕ ರಾಘವೇಂದ್ರರ ಆರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ೫೦ನೇ ವರ್ಷದ ರಾಯರ ಆರಾಧನೆ ವೈಭವದಿಂದ ನಡೆದಿದ್ದು, ಎಲ್ಲ ವರ್ಗದವರು ವಿಭಿನ್ನ ಸೇವೆಗಳನ್ನು ಮಾಡಿ ರಾಯರ ಅನುಗ್ರಹಕ್ಕೆ ಪಾತ್ರವಾಗಿದ್ದಾರೆ ಎಂದರು.

ಇನ್ನೂ ಭೋಗಾಪುರೇಶ ದೇವಸ್ಥಾನ ನವೀಕರಣಕ್ಕೆ ಪ್ರತಿಷ್ಠಾನ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಗೋಪುರ, ದಾಸೋಹ ಭವನ, ಪ್ರಾಂಗಣದ ಅಭಿವೃದ್ಧಿಗೆ ಈಗಾಗಲೇ ಪ್ರಾಚ್ಯುವಸ್ತು ಇಲಾಖೆಯ ಅಧಿಕಾರಿಗಳು ಹಸಿರು ನಿಶಾನೆ ತೋರಿದೆ. ಇತಿಹಾಸಕ್ಕೆ ಧಕ್ಕೆಯಾಗದಂತೆ ದೇಗುಲದ ಜೀರ್ಣೋದ್ಧಾರ ಮಾಡುವ ಅಭಿಲಾಷೆ ಹೊಂದಿದ್ದೇವೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ರಾಯರ ಆರಾಧನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾರಾಯಣ ಆಚಾರ್ ನವಲಿ ಹಾಗೂ ಕಳೆದ ಆರೇಳು ವರ್ಷಗಳಿಂದ ಹಲವು ದಾಸರ, ಯತಿವರ್ಯರ ಆರಾಧನೆಗಳಿಗೆ ಆಗಮಿಸಿ ಭಜನಾ ಸೇವೆ ಸಲ್ಲಿಸಿದ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯ ಕಾರ್ಯವನ್ನು ಮೆಚ್ಚಿ ಕಲಾವಿದರೆಲ್ಲರಿಗೂ ಪ್ರತಿಷ್ಠಾನ ಗೌರವಿಸಿತು.

ಇದಕ್ಕೂ ಮೊದಲು ರಾಯರ ಭಾವಚಿತ್ರ ಮೆರವಣಿಗೆ, ಭಜನೆ ನಡೆಯಿತು.

ಹಿರಿಯರಾದ ಶ್ರೀನಿವಾಸಚಾರ್ ಪೂಜಾರ ನವಲಿ, ಮಧುಸೂದನ ಕುಲಕರ್ಣಿ, ಶ್ರೀಪಾದ ನವಲಿ, ನಾರಾಯಚಾರ್ ಬದರಿ, ಗುರುರಾಜ ಗುಂಡೂರು, ಕಲಾವಿದರಾದ ಸುರೇಶರೆಡ್ಡಿ ಮಹಲಿನಮನಿ, ಪಂಪಾಪತಿ ತುಪ್ಪದ, ಭೀಮರೆಡ್ಡಿ ಓಣಿಮನಿ, ಭೀಮರಾವ್ ಮರಾಠಿ, ಕಲೀಲ, ನಾಗರೆಡ್ಡಿ, ರಾಮಣ್ಣ ಗುಂಜಳ್ಳಿ ಹಾಗೂ ನೂರಾರು ಭಕ್ತರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ