ವಿಶೇಷಚೇತನರ ಸರ್ವತೋಮುಖ ಅಭಿವೃದ್ಧಿಗೆ ಸಿದ್ದ: ಶಾಸಕ ಶರತ್

KannadaprabhaNewsNetwork | Published : Mar 5, 2024 1:31 AM

ಸಾರಾಂಶ

ವಿಶೇಷ ಚೇತನರು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯಲು ಈ ಶಾಲಾ ಸಿದ್ದತಾ ಕೇಂದ್ರ ಸ್ಥಾಪಿಸಲಾಗಿದ್ದು, ಈ ಕೇಂದ್ರವು ಪ್ರತಿ ಸೋಮವಾರ ಮತ್ತು ಶುಕ್ರವಾರ ಕಾರ್ಯನಿರ್ವಹಿಸುತ್ತದೆ,

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ಅಂಗವಿಕಲತೆ ಶಾಪವಲ್ಲ, ಅವರಿಗೆ ಸಮಾಜದಲ್ಲಿ ಜೀವಿಸುವ ಅವಕಾಶಗಳನ್ನು ಕಲ್ಪಿಸುವ ಕೆಲಸವಾಗಬೇಕು, ಅವರಿಗೆ ಅನುಕಂಪಕ್ಕಿಂತ ಅವಕಾಶಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಸೂಲಿಬೆಲೆಯ ಕುರುಬರಹಟ್ಟಿ ಸರ್ಕಾರಿ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ದಿ ಆಸೋಷಿಯೇಷನ್ ಆಪ್ ಪೀಪಲ್ ವಿತ್ ಡೆಸೆಬಿಲಿಟಿ(ಎಪಿಡಿ) ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಸಿದ್ದತಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿಶೇಷ ಚೇತನರು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯಲು ಈ ಶಾಲಾ ಸಿದ್ದತಾ ಕೇಂದ್ರ ಸ್ಥಾಪಿಸಲಾಗಿದ್ದು, ಈ ಕೇಂದ್ರವು ಪ್ರತಿ ಸೋಮವಾರ ಮತ್ತು ಶುಕ್ರವಾರ ಕಾರ್ಯನಿರ್ವಹಿಸುತ್ತದೆ, ಇದೇ ಮಾದರಿಯಲ್ಲಿ ಪ್ರತಿ ಗ್ರಾಪಂಗೊಂದು ಕೇಂದ್ರ ಹಾಗೂ ಹೊಸಕೋಟೆ ನಗರಸಭೆಯ ಪ್ರತಿವಾರ್ಡಿನಲ್ಲೂ ಇಂತಹ ಕೇಂದ್ರಗಳು ಪ್ರಾರಂಭವಾಗಬೇಕು, ಇದಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳುತ್ತೇವೆ ಎಂದರು.

ಎಪಿಡಿ ಸಂಸ್ಥೆಯ ಸಮನ್ವಯ ಶಿಕ್ಷಣ ನಿರ್ದೇಶಕ ಮಲ್ಲಿಕಾರ್ಜುನಯ್ಯ ಮಾತನಾಡಿದರು ರಾಜ್ಯದಲ್ಲಿ 2 ಲಕ್ಷ 48 ಸಾವಿರ ವಿಶೇಷ ಚೇತನರನ್ನು ನಮ್ಮ ಸಂಸ್ಥೆ ಗುರುತಿಸಿದೆ, ಹೊಸಕೋಟೆ ತಾಲೂಕಿನಲ್ಲಿ 372 ಜನ ಇದ್ದಾರೆ, ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ 57 ಜನರನ್ನು ಗುರುತಿಸಲಾಗಿದ್ದು, ರಾಜ್ಯದಲ್ಲಿ ಸೂಲಿಬೆಲೆ ಯಲ್ಲಿ ಪ್ರಪ್ರಥಮ ಸಬ್ ಸೆಂಟರ್ ಉದ್ಘಾಟಿಸಲಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡರು 16 ಫಲಾನುಭವಿಗಳಿಗೆ ನಗದು ಧನಸಹಾಯ ಮಾಡಿದರು.

ಎಪಿಡಿ ಸಂಸ್ಥೆಯ ವತಿಯಿಂದ ವಿಶೇಷ ಚೇತನ 57 ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಿದರು.

ಹಿರಿಯ ಮುಖಂಡ ಬಿ.ಎನ್.ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಬಿಆರ್‍ಪಿ ನಾಗರಾಜ್,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್, ಕ್ಷೇತ್ರ ಸಮನ್ವಯ ಸಂಪನ್ಮೂಲ ವ್ಯಕ್ತಿ ನಿರ್ಮಲ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಭಾರತಸೇವಾದಲ ಅಧ್ಯಕ್ಷ ಹರೀಶ್, ಹಾಪ್‌ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್, ಡಾ.ಡಿ.ಟಿ.ವೆಂಕಟೇಶ್, ಸಿ.ಮುನಿಯಪ್ಪ, ಮರವೆಕೃಷ್ಣಪ್ಪ,ಇತರರು ಇದ್ದರು.

Share this article