ಗುಡಿಸಲಿನಲ್ಲಿ ಪೀಠ ಕಟ್ಟಲು ಸಿದ್ದ

KannadaprabhaNewsNetwork |  
Published : Sep 25, 2025, 01:03 AM IST
ಸಭೇ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಭಕ್ತರು ಜಾಗ ಕೊಟ್ಟಲ್ಲಿ ಪೀಠ ಸ್ಥಳಾಂತರ ಮಾಡುತ್ತೇವೆ. ಭಕ್ತರು ಎಲ್ಲಿ ತೋರಿಸುತ್ತಾರೋ ಅಲ್ಲಿ ಪೀಠ ಮರುಸ್ಥಾಪನೆ ಮಾಡುವೆ. ಇದೇ ವಿಚಾರವಾಗಿ ಶನಿವಾರ ಸಮುದಾಯದ ಹಿರಿಯರು, ಭಕ್ತರ ಸಭೆ ನಡೆಸಲಾಗುವುದು. ಗುಡಿಸಲಿನಲ್ಲಿ ಪೀಠ ಕಟ್ಟಲು ಸಹ ರೆಡಿ ಇದ್ದೇನೆ. ಗುಡಿಸಲಲ್ಲಿ ಇದ್ದುಕೊಂಡೆ ಸಮಾಜ ಕಟ್ಟುತ್ತೇನೆ ಎಂದು ಉಚ್ಚಾಟಿತ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಕ್ತರು ಜಾಗ ಕೊಟ್ಟಲ್ಲಿ ಪೀಠ ಸ್ಥಳಾಂತರ ಮಾಡುತ್ತೇವೆ. ಭಕ್ತರು ಎಲ್ಲಿ ತೋರಿಸುತ್ತಾರೋ ಅಲ್ಲಿ ಪೀಠ ಮರುಸ್ಥಾಪನೆ ಮಾಡುವೆ. ಇದೇ ವಿಚಾರವಾಗಿ ಶನಿವಾರ ಸಮುದಾಯದ ಹಿರಿಯರು, ಭಕ್ತರ ಸಭೆ ನಡೆಸಲಾಗುವುದು. ಗುಡಿಸಲಿನಲ್ಲಿ ಪೀಠ ಕಟ್ಟಲು ಸಹ ರೆಡಿ ಇದ್ದೇನೆ. ಗುಡಿಸಲಲ್ಲಿ ಇದ್ದುಕೊಂಡೆ ಸಮಾಜ ಕಟ್ಟುತ್ತೇನೆ ಎಂದು ಉಚ್ಚಾಟಿತ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಪಂಚಮಸಾಲಿ ಲಿಂಗಾಯತ ಮಹಾಸಭಾ ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ಸಮಾಜದ ಮುಖಂಡರು ಸಭೆ ನಡೆಸಿದರು. ಸಭೆಯಲ್ಲಿ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಾಗಿಯಾಗಿ, ಮುಂದಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ವೇಳೆ ಪಂಚಮಸಾಲಿ ಸ್ವಾಮೀಜಿ ಬೆನ್ನಿಗೆ ನಿಂತ ವಿಜಯಪುರ ಜಿಲ್ಲೆಯ ಪಂಚಮಸಾಲಿ ಮುಖಂಡರು, ಜಿಲ್ಲೆಯ ನಾನಾ ಕಡೆಗಳಿಂದ ಸಭೆಗೆ ಬಂದು ಪಂಚಮಸಾಲಿ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ಕೂಡಲಸಂಗಮ ಪೀಠದಿಂದ ಉಚ್ಚಾಟನೆ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಎಲ್ಲ ಪೂಜ್ಯರ ಆಶೀರ್ವಾದ ನಮ್ಮ ಮೇಲಿದೆ. ಅಲ್ಲಿ ಪೀಠಕ್ಕೆ ಸ್ವಂತ ಜಾಗ ನೀಡುವ ಭರವಸೆಯನ್ನು ಟ್ರಸ್ಟ್‌ನಿಂದ ನೀಡಲಾಗಿತ್ತು. ಆದರೆ ಅದು ಆಗಲಿಲ್ಲ. ಟ್ರಸ್ಟ್ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಹೇಳಿಯೂ ಮಾಡಲಿಲ್ಲ. ಹಿಂದೆ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ಮಾಡಿದ್ದೆ, ಆ ಸಮಿತಿಯಲ್ಲಿ ನಾನು ಉಪಾಧ್ಯಕ್ಷನಾಗಿದ್ದೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ ವಿಜಯಪುರ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿ, ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಶಪ್ಪನವರ ಮನೆತನಕ್ಕೆ ಖಗ್ರಾಸ ಗ್ರಹಣ ಹತ್ತಲಿದೆ. ಸ್ವಾಮೀಜಿಗಳೇ ಕಾಶಪ್ಪನವರನ್ನು ರಾಷ್ಟ್ರಾಧ್ಯಕ್ಷ ಮಾಡಿದ್ದರು. ಅವನು ಹೇಗೆ ಪೀಠದಿಂದ ಉಚ್ಚಾಟನೆ ಮಾಡೋಕೆ ಆಗತ್ತೆ?. ಕಾಶಪ್ಪನವರ ಮುಂದೆ ಅನುಭವಿಸುತ್ತಾನೆ. ಪಂಚಮಸಾಲಿ ಹೋರಾಟದಲ್ಲಿ ಸ್ವಾಮೀಜಿಗಳ ಜೊತೆಗೆ ಬಂದು, ಹೈಲೈಟ್ ಆದ. ಸ್ವಾಮೀಜಿಗಳಿಂದಲೇ ಹುನಗುಂದ ಶಾಸಕನಾದ. ಮುಂದೆ ಹುನಗುಂದ ಕ್ಷೇತ್ರದ ಜನರು ಆತನಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

----------------

ಬಾಕ್ಸ್‌.....

ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸಿ

ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಸಮೀಕ್ಷೆಯಲ್ಲಿನ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ನಮೂದು ಮಾಡಲು ನಿರ್ಣಯ ಮಾಡಲಾಯಿತು. ಜಾತಿ ಗಣತಿಯಲ್ಲಿ ಪಂಚಮಸಾಲಿ ಸಮುದಾಯ ಲಿಂಗಾಯತ ಪಂಚಮಸಾಲಿ ಬರೆಸಲು ನಿರ್ಧಾರ ಮಾಡಲಾಯಿತು. ಕಸುಬು ಎಂದು ಇರುವ ಕಾಲಂ‌ನಲ್ಲಿ ಕೃಷಿ, ಕೃಷಿ ಕಾರ್ಮಿಕರು ಎಂದ ಬರೆಸಲು ನಿರ್ಣಯಿಸಲಾಗಿದೆ. ಮೀಸಲಾತಿ ಹೋರಾಟಕ್ಕೆ ತೊಂದರೆಯಾಗದಿರಲು ಹಿಂದೂ ಧರ್ಮ ಬರೆಸಲು ನಿರ್ಧಾರ ಮಾಡಲಾಗಿದೆ. ಪ್ರತ್ಯೇಕ ಧರ್ಮ ಮಾನ್ಯತೆ ಲಿಂಗಾಯತರಿಗೆ ಸಿಕ್ಕಾಗ ನಮೂದು ಮಾಡಬಹುದು ಎಂದು ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ಮೀಸಲಾತಿ ಹೋರಾಟಕ್ಕೆ ತೊಂದರೆ ಆಗಬಾರದು ಎಂದು ಶ್ರೀಗಳು ತೆಗೆದುಕೊಂಡ ನಿರ್ಣಯಕ್ಕೆ ಸಮಾಜದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಸಮುದಾಯದ ಮುಖಂಡರಿಗೆ ಪಂಚಮಸಾಲಿ ಶ್ರೀಗಳು ವಿಷಯಗಳನ್ನು ಹಂಚಿಕೊಂಡರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ