ದಾಂಡೇಲಿ:
.ಅವರು ದಾಂಡೇಲಿಯ ಹಾರ್ನಬಿಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ''''''''''''''''ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು-ನೀವು'''''''''''''''' ಎಂಬ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅಭಿವೃದ್ಧಿ ಚಿಂತನೆ ಮಂಡಿಸಿ ಮಾತನಾಡಿದರು.
ಸಾಮಾಜಿಕ ಚಿಂತಕ ಮೀನಾಕ್ಷಿ ಸುಂದರಂ, ಕರಾವಳಿ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಸಾಕಷ್ಟು ಹಿಂದುಳಿದಿದೆ. ಇಲ್ಲಿನ ಜನ ಸಮುದಾಯದ ಧ್ವನಿ, ಚಳವಳಿಯಾಗಿ ಸರ್ಕಾರವನ್ನು ತಲುಪಬೇಕಿದೆ ಎಂದರು.ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್, ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಗಳಿಲ್ಲ. ಐಟಿ ಕಾಲೇಜುಗಳಿಲ್ಲ. ಬಹು ವ್ಯವಸ್ಥೆಯ ಆಸ್ಪತ್ರೆಗಳಿಲ್ಲ ರೈಲ್ವೆ ಸಂಪರ್ಕಗಳು ಕೂಡ ಸಮರ್ಪಕವಾಗಿಲ್ಲ. ಇದಕ್ಕೆಲ್ಲ ಪರಿಹಾರ ಎಂದರೆ ಹೋರಾಟವೊಂದೇ ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಸರ್ವಂಗೀಣ ಅಭಿವೃದ್ಧಿ ಸಮಾವೇಶ ಸಂಘಟನೆಯ ಗೌರವಾಧ್ಯಕ್ಷ ಬಿ.ಎನ್. ವಾಸರೆ, ಸಮಾವೇಶದಲ್ಲಿ ಹೊರ ತಂದಿರುವ ''''''''''''''''ಜನತೆಯ ಕೈಪಿಡಿ''''''''''''''''ಯನ್ನು ಇಲ್ಲಿ ಆಗಿರುವ ಚರ್ಚೆಗಳನ್ನೂ ಒಳಗೊಂಡು ಮತ್ತಷ್ಟು ವಿಸ್ತರಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಕೈಪಿಡಿಯಲ್ಲಿ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತಂತೆ ಸಂಗತಿಗಳಿದ್ದು ಅದರ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ಸಾಧ್ಯವಾದರೆ ಬೆಳಗಾವಿ ಅಧಿವೇಶನ ಅಥವಾ ಸರ್ಕಾರದ ಇನ್ಯಾವುದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸಲಾಗುವುದು ಎಂದರು.