ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಮಕ್ಕಳಲ್ಲಿ ತಮ್ಮದೇ ಆದ ಕೌಶಲ್ಯತೆ ಹೊಂದಿರುತ್ತಾರೆ. ಅದನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಆಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಹೇಳಿದರು.ಪಟ್ಟಣ ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರಕಾರಿ ಪ್ರೌಢಶಾಲೆಗಳ ನೇತ್ರಾವತಿ ವಲಯ ಮಟ್ಟದ ಕ್ರೀಡಾ ಕೂಟ 2024-25 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆ ಎಂಬುದು ಮಕ್ಕಳ ಮನಸ್ಸು ಅರಳಿಸುತ್ತದೆ. ಅಲ್ಲದೆ ಶಾರೀರಿಕ ಸ್ವಾಸ್ಥ್ಯ ಕಾಪಾಡುತ್ತದೆ. ಗ್ರಾಮೀಣ ಪ್ರದೇಶದ ಅನೇಕ ಆಟಗಳು ಇಂದು ಅಳಿವಿನಂಚಿಲ್ಲಿವೆ. ಪ್ರಗತಿ ಹೊಂದಿರುವ ರಾಷ್ಟ್ರಗಳಿಗೆ ಹೋಸಲಿಸಿದರೆ ಭಾರತದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಇದೆ. ಆದರೂ ಕೂಡ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತಮ ಸಾಧನೆ ಮಾಡಲು ಅವಕಾಶ ಇದ್ದು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ.ನಾಗೇಶಪ್ಪ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷ ಕಲ್ಲೇಶಪ್ಪ, ಮಂಗೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು, ಮಂಗೋಟೆ ಹನುಮಂತಪ್ಪ, ಪಿಡಿಒ ಮಂಜುನಾಥ್, ಗಂಗನಗೌಡ, ಯು.ಹನುಮಂತಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಮ್ಮ, ಸದಸ್ಯ ವಿಜಯಕುಮಾರ್, ನೀಲಮ್ಮ, ಪ್ರಕಾಶ್, ನೀಲಕಂಠ, ಶಿಕ್ಷಕರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.ವಿದ್ಯಾರ್ಥಿಗಳಾದ ಕೆ.ಸಂಜನಾ, ಕೃತಿಕಾ, ಸೌಂದರ್ಯ, ಕವನಾ, ಸ್ಮಿತಾ, ರೇಣುಕಾ ಪ್ರಾರ್ಥಿಸಿ, ಮುಖ್ಯಶಿಕ್ಷಕ ಜಿ.ಕೊಟ್ರೇಶಪ್ಪ ಸ್ವಾಗತಿಸಿದರು. ಸಹಶಿಕ್ಷಕ ಸಿದ್ದಪ್ಪ ನಿರೂಪಿಸಿ, ಶಿಕ್ಷಕ ಶಿವರಾಜ್ ವಂದಿಸಿದರು.