ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್‌ ಮಾಡಿ

KannadaprabhaNewsNetwork |  
Published : Oct 10, 2025, 01:02 AM IST
ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಶಿಫಾರಸು ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮೂಡಲಗಿ ತಹಶೀಲ್ದಾರ ಮುಖಾಂತರ  ಮೂಡಲಗಿ ತಾಲೂಕಾ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕರ್ನಾಟಕ ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಶಿಫಾರಸ್‌ ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂಡಲಗಿ ತಹಸೀಲ್ದಾರ್‌ ಮೂಲಕ ಮೂಡಲಗಿ ತಾಲೂಕು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಕರ್ನಾಟಕ ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಶಿಫಾರಸ್‌ ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂಡಲಗಿ ತಹಸೀಲ್ದಾರ್‌ ಮೂಲಕ ಮೂಡಲಗಿ ತಾಲೂಕು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಕುರುಬ ಸಮುದಾಯವನ್ನು ಕೇಂದ್ರದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಂತೆ ಕೇಂದ್ರ ಸರ್ಕಾರ ಬುಡಕಟ್ಟು ಆಯೋಗದವರು ಕರ್ನಾಟಕ ರಾಜ್ಯ ಸರ್ಕಾರದಿಂದ ವರದಿ ಕೇಳರುವುದಾಗಿ ವಿಶ್ವಸನೀಯವಾಗಿ ತಿಳಿದು ಬಂದಿರುತ್ತದೆ. ಈ ಕುರಿತು ಪರಿಶೀಲಸಲು ಮುಖ್ಯಮಂತ್ರಿಗಳು ಸೆ.15 ಮತ್ತು 19 ರಂದು ಸಭೆ ಕರೆದು ಕಾರಣಾಂತರಗಳಿಂದಾಗಿ ಮುಂದೂಡಿರುವುದು ತಿಳಿದು ಬಂದಿರುತ್ತದೆ. ಆದರೆ, ಇತ್ತೀಚೆಗೆ ಕರ್ನಾಟಕದ ವಾಲ್ಮೀಕಿ ಸಮುದಾಯದವರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ರಾಜ್ಯದ ಕುರುಬರು, ಗೊಲ್ಲರು ಮತ್ತು ಗಂಗಾ ಮತಸ್ಥ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೋರಿ ಕೇಂದ್ರ ಮಾಡಕೂಡದೆಂದು ಶಿಫಾರಸ್‌ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿರುವದು ಶೋಚನೀಯ. ಯಾವುದೇ ವ್ಯಕ್ತಿ ಅಥವಾ ಸಮುದಾಯ ತನ್ನ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಬಹುದೇ ಈಡೇರಿಸಬಾರದಂದು ಹೊರತು ಬೇರೆ ಸಮುದಾಯಗಳ ಬೇಡಿಕೆಯನ್ನು ಆಗ್ರಹಿಸುವದು ಬಾಲಿಶವು, ಸ್ವಾರ್ಥಪರವೂ ಮತ್ತು ಅವಿವೇಕದ ಆಗ್ರಹವಾಗುತ್ತದೆ. ಕುರುಬ ಸಮುದಾಯವು ಕರ್ನಾಟಕದ ಪ್ರಾಚೀನ ಮತ್ತು ಆದಿಮ ಸಮಾಜವಾಗಿದೆ. ಇತಿಹಾಸ ಪೂರ್ವಕಾಲದಿಂದಲೂ ನಮ್ಮ ಸಮಾಜದ ಮೂಲ ಉದ್ಯೋಗ ಕುರಿಗಾಹಿಕೆ ಮತ್ತು ಕಂಬಳಿ ನೇಕಾರಿಕೆಯಾಗಿದೆ. ನಮ್ಮ ವೃತ್ತಿಯ ಅವಶ್ಯಕತೆಯಿಂದಾಗಿ ನಾವು ಅಲೆಮಾರಿ ಜೀವನವನ್ನು ಬದುಕುತ್ತಿದ್ದೇವೆ. ಆದುನಿಕತೆಯಿಂದಾಗಿ ನಮ್ಮ ಕಂಬಳಿ ನೇಕಾರಿಕೆ ಉದ್ಯೋಗವು ನಿಂತು ಹೋಗಿದೆ ಈ ಕಾರಣಗಳಿಂದಾಗಿ ನಾವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳದಿರುತ್ತೇವೆ. ಅಲ್ಲದೆ, ಕೇಂದ್ರ ಲೋಕೂರು ಆಯೋಗದವರು ನಿಗದಿಪಡಿಸಿರುವ ಪರಿಶಿಷ್ಟ ಪಂಗಡದ ಎಲ್ಲ ಗುಣಲಕ್ಷಣಗಳನ್ನು ಹೊಂದಿರುತ್ತೇವೆ. ಮೇಲಾಗಿ ಮೈಸೂರು ಮೂಲದ ಕರ್ನಾಟಕ ರಾಜ್ಯ ಬುಡಕಟ್ಟು ಕರ್ನಾಟಕದ ರಾಜ್ಯಾದ್ಯಂತ ನಿರ್ದೆಶನಾಲಯದವರು ಕುರುಬ ಸಮುದಾಯದವರು ಲೋಕೂರು ಆಯೋಗದವರು ನಿಗದಿಪಡಿಸಿರುವ ಪರಿಶಿಷ್ಟ ಪಂಗಡದ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವದಾಗಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿರುವದು ತಿಳಿದುಬಂದಿರುತ್ತದೆ. ಆದ್ದರಿಂದ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು, ನಮ್ಮ ಸಹೋದರ ಸಮಾಜಗಳಾದ ಗಂಗಾ ಮತಸ್ಥರು ಹಾಗು ಗೊಲ್ಲರನ್ನೂ ಕೂಡ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ರಾಜ್ಯ ಸರಕಾರವನ್ನು ಮನವಿ ಮೂಲಕ ಆಗ್ರಹಿಸಿದರು. ಈ ಸಮಯದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ವೇದಿಕೆಯ ತಾಲೂಕಾ ಅಧ್ಯಕ್ಷ ರೇವಣ್ಣ ಮುನ್ಯಾಳ, ಗೌರವಾಧ್ಯಕ್ಷ ಲಕ್ಕಪ್ಪ ಶಾಬನ್ನವರ, ಸಮಾಜದ ಹಿರಿಯರಾದ ಸುರೇಶ ಮಗದುಮ್, ಬಸಪ್ಪ ಗಾಡದವರ, ಪರಶುರಾಮ ಬಿಪ್ಪಣ್ಣವರ, ಲಕ್ಷ್ಮಣ ನಂದಿ, ಪಾಂಡುರಂಗ ಕುರಿ, ಬನಪ್ಪ ವಡೇರ, ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ