ಕನ್ನಡಪ್ರಭ ವಾರ್ತೆ ಹಲಗೂರು
ವಳಗೆರೆದೊಡ್ಡಿ ಗ್ರಾಮದ ನೂತನ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಫಾದರ್ ಡೇ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.ಸಂಸ್ಥೆ ನಿರ್ದೇಶಕ ಎ.ಟಿ.ಶ್ರೀನಿವಾಸ್ ಮಾತನಾಡಿ, ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿ ಜೊತೆಗೆ ಯಾವುದೇ ರೋಗ ರುಜನೆಗಳು ಬರದಂತೆ ತಡೆಗಟ್ಟಲು ಸಹಕಾರಿಯಾಗಿದೆ. ಯೋಗ ಎಂದರೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಗಳಿಸುವುದು ಎಂದರ್ಥ. ಪ್ರಾಣಾಯಾಮ ಮತ್ತು ಧ್ಯಾನದಿಂದ ಇದು ಸಾಧ್ಯ ಎಂದರು.
ನಮ್ಮ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಯೋಗ ಸಿದ್ದೌಷಧವಾಗಿದೆ. ಪ್ರಧಾನಿ ಮೋದಿ ಅವರು ಯೋಗಕ್ಕೆ ಒಂದು ವಿಶ್ವ ಮಾನ್ಯತೆಯನ್ನು ತರಲು 2017ರಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡಿದರು. ಭೌಗೋಳಿಕವಾಗಿ ವರ್ಷದ 365 ದಿನಗಳಿಗಿಂತ ಜೂನ್ 21ರಂದು ಹಗಲು ದೊಡ್ಡದಾಗಿರುತ್ತದೆ. ಆದ್ದರಿಂದ ಈ ದಿನವನ್ನು ಯೋಗ ದಿನವಾಗಿ ಆಚರಿಸಲಾಗುತ್ತಿದೆ ಎಂದರು.ಫಾದರ್ ಡೇ ಅಂಗವಾಗಿ ವಿದ್ಯಾರ್ಥಿಗಳ ಪೋಷಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ಭಾಗವಹಿಸಿ ಸಂತಸಪಟ್ಟರು. ಇದೇ ವೇಳೆ ಶಾಲೆಯಿಂದ ಎ.ಟಿ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ಹಲಗೂರು ಗ್ರಾಪಂ ಸದಸ್ಯ ಎಚ್.ಎನ್.ಶಿವಕುಮಾರ್, ಶಾಲೆ ಸಂಸ್ಥಾಪಕರಾದ ಎಚ್.ವಿ.ಅಶ್ವಿನ್ ಕುಮಾರ್, ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ, ಅಕ್ಷತಾ, ಸೇರಿದಂತೆ ಶಿಕ್ಷಕವೃಂದ ಇದ್ದರು.
ನಳಂದ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಆಚರಣೆಮದ್ದೂರು:
ಪಟ್ಟಣದ ನಳಂದ ವಿದ್ಯಾಸಂಸ್ಥೆಯಲ್ಲಿ 11ನೇ ವಿಶ್ವ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಸಂಸ್ಥೆ ಆವರಣದಲ್ಲಿ ನಡೆದ ಯೋಗ ಶಿಬಿರದಲ್ಲಿ ಖ್ಯಾತ ಯೋಗ ಗುರು ಮಲ್ಲಿಕಾರ್ಜುನ ಸ್ವಾಮಿ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು, ಪೋಷಕರು, ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕರು ಮತ್ತು ಸಿಬ್ಬಂದಿ ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು.
ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ಸ್ವಾಮಿ. ಇತ್ತೀಚಿನ ಯಾಂತ್ರಿಕ ಜೀವನದ ಜೊತೆಗೆ ಅಧಿಕ ಕೆಲಸದ ಒತ್ತಡದಿಂದಾಗಿ ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಹೀಗಾಗಿ ಉತ್ತಮ ಆರೋಗ್ಯದ ಜೀವನ ನಡೆಸಬೇಕಾದರೆ ಕನಿಷ್ಠ 30 ನಿಮಿಷವಾದರೂ ಯೋಗಾಭ್ಯಾಸಕ್ಕೆ ಮೀಸಲಿಡಬೇಕು ಎಂದರು.ಈ ವೇಳೆ ಸಂಸ್ಥೆ ಕಾರ್ಯದರ್ಶಿ ಡಾ.ಆರ್.ರಾಮಕೃಷ್ಣ, ಧರ್ಮದರ್ಶಿ ಎ.ಸಿ.ಸವಿತಾ ರಾಮಕೃಷ್ಣ, ಪ್ರಾಂಶುಪಾಲ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಸುಕನ್ಯಾ ಯೋಗ ಇದ್ದರು.