ಅಕ್ಷರ ಕಲಿಸಿ ಬದುಕಿಗೆ ಬೆಳಕಾದ ಗುರುವನ್ನು ಮರೆಯದಿರಿ: ಮಲ್ಲೇಶಪ್ಪ

KannadaprabhaNewsNetwork |  
Published : May 26, 2025, 01:27 AM IST
ಕಡೂರು ತಾಲೂಕು ಬಾಣೂರು ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯ 1990-2000 ಸಾಲಿನ ಹಳೆ ವಿದ್ಯಾರ್ಥಿ ಸಂಘದವರು ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಕಡೂರು, ಬದುಕಿಗೆ ಬೆಳಕಾಗಿ ಅಕ್ಷರ ಕಲಿಸುವ ಎಲ್ಲಾ ಗುರುಗಳನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಹೇಳಿದರು.

ಬಾಣೂರು ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ

ಕನ್ನಡಪ್ರಭ ವಾರ್ತೆ ಕಡೂರು

ಬದುಕಿಗೆ ಬೆಳಕಾಗಿ ಅಕ್ಷರ ಕಲಿಸುವ ಎಲ್ಲಾ ಗುರುಗಳನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಹೇಳಿದರು.

ತಾಲೂಕಿನ ಬಾಣೂರು ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆ 1999-2000 ಸಾಲಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀ ಬಸವೇಶ್ವರ ಪ್ರೌಢಶಾಲೆಗೆ 50 ವರ್ಷಗಳ ಇತಿಹಾಸ ಇದ್ದು ಇಲ್ಲಿ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಹಳೆಯ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡು ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಿ ಗುರುಗಳ ಅಲ್ಪ ಋಣ ತೀರಿಸುವ ಅವಕಾಶ ಅವರಿಗೆ ಸಿಕ್ಕಿದೆ ಎಂದರು.ಗ್ರಾಮೀಣ ಭಾಗದಲ್ಲಿರುವ ಈ ಪ್ರೌಢಶಾಲೆ ತನ್ನದೇ ಆದ ವಿಶೇಷ ಗುಣ ಲಕ್ಷಣಗಳನ್ನು ಹೊಂದಿದ್ದು ಸಾವಿರಾರು ಜನರ ಬಾಳಿಗೆ ಬೆಳಕಾಗಿದೆ. ಅವರ ಜೀವನಕ್ಕೆ ಬೆಳಕಾದ ಅನೇಕ ಗುರುವರ್ಯರ ಶ್ರಮವನ್ನು ಶ್ಲಾಘಿಸಬೇಕು ಅಂತಹ ಗುರುಗಳನ್ನು ಮರೆಯದೆ 25 ವರ್ಷಗಳ ಹಿಂದಿನ ಹಳೆಯ ವಿದ್ಯಾರ್ಥಿಗಳು ಸೇರಿ ಸಲ್ಲಿಸುತ್ತಿರುವ ಈ ಗುರುವಂದನ ಕಾರ್ಯಕ್ರಮ ಮುಂದಿನ ವಿದ್ಯಾರ್ಥಿಗಳಿಗೆ ಮೌಲ್ಯಗಳ ಮಾರ್ಗದರ್ಶನ ನೀಡಿದಂತಾಗುತ್ತದೆ. ಎಲ್ಲರು ಒಂದೇ ವೇದಿಕೆಯಲ್ಲಿ ಸೇರುವುದರಿಂದ ನೆನಪು ಗಳನ್ನು ಹಂಚಿಕೊಳ್ಳಲು ಸಾಧ್ಯ, ನಿಮ್ಮ ಬಾಳು ಇನ್ನು ಉಜ್ವಲವಾಗಲಿ ಎಂದು ಹಾರೈಸಿದರು.ಶಾಲೆಯ ಮುಖ್ಯಶಿಕ್ಷಕ ವಸಂತಪ್ಪ ಮಾತನಾಡಿ ವಿದ್ಯಾರ್ಥಿಗಳು ಕಲಿತ ಶಾಲೆಯಲ್ಲಿ ಎಲ್ಲ ಶಿಕ್ಷಕರನ್ನು ಸೇರಿಸಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿರುವುದು ಸಂತಸ ತಂದಿದೆ. ಈ ಶಾಲೆಯಲ್ಲಿ ಕಲಿತು ಹೊರ ಹೋಗಿರುವ ವಿದ್ಯಾರ್ಥಿ ಗಳು ಹಳೆ ಶಾಲೆಯನ್ನು ಮರೆಯದೆ ಶಾಲೆಗೆ ಮೂಲ ಸೌಕರ್ಯಗಳನ್ನು ನೀಡಲು ಮುಂದಾದರೆ ಮುಂದಿನ ಮಕ್ಕಳಿಗೆ ಸಹಕಾರಿಯಾಗುತ್ತದೆ. ಹಳೇ ವಿದ್ಯಾರ್ಥಿಗಳ ಸಂಘಟನೆಯಿಂದ ಶಕ್ತಿ ಬಂದಿದೆ ಗುರುಗಳನ್ನು ಸ್ಮರಿಸಿಕೊಂಡು ಅವರನ್ನು ಸೇರಿಸಿ ನಡೆಸಿದ ಸ್ನೇಹ ಮಿಲನ ಕಾರ್ಯಕ್ರಮ ಸಾರ್ಥಕ ಎಂದರು.ಪ್ರಸ್ತುತ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ದಯಾನಂದ್,ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿ ಗವಿರಂಗಪ್ಪ,1990-2000 ಸಾಲಿನ ವಿದ್ಯಾರ್ಥಿಗಳಾದ ಗಿರೀಶ್,ವಸಂತ್,ಯೋಗೀಶ್,ಕೃಷ್ಣಮೂರ್ತಿ ಮತ್ತಿತರರು ಇದ್ದರು.ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ನಿವೃತ್ತಿಯಾಗಿರುವ ಬಿಸಲೆಹಳ್ಳಿಯ ಶಿಕ್ಷಕ ಸೋಮಶೇಖರಪ್ಪ ಸಾಹಿತ್ಯ ಕಲಾ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದು ಏಕಪಾತ್ರ ಅಭಿನಯ ಮಾಡಿ ಸೇರಿದ್ದ ಎಲ್ಲರನ್ನು ಮನರಂಜಿಸಿದರು.ನಿವೃತ್ತ ಶಿಕ್ಷಕರಾದ ಡಿ.ವಿ.ಈಶ್ವರಪ್ಪ, ಎಚ್.ಎಸ್.ಕುಮಾರಸ್ವಾಮಿ, ಬಿ.ಎಚ್.ಸೋಮಶೇಖರ್, ಬಿ.ಎಮ್.ರುದ್ರಪ್ಪ, ಲಿಂಗಪ್ಪ, ಜಿ.ಎಸ್.ರುದ್ರಪ್ಪ ಇವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ನಂತರ ಮೃತಪಟ್ಟಿರುವ ಶಿಕ್ಷಕಿ ಮಹಾಲಕ್ಷ್ಮೀ, ಕುಮಾರಸ್ವಾಮಿ, ಜಯೇಶ್ವರಪ್ಪ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.24ಕೆಕೆಡಿಯು1ಕಡೂರು ತಾಲೂಕು ಬಾಣೂರು ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆ 1990-2000 ಸಾಲಿನ ಹಳೆ ವಿದ್ಯಾರ್ಥಿ ಸಂಘದವರು ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ