ಕನ್ನಡಪ್ರಭವಾರ್ತೆ ಪಾವಗಡ
ಸರ್ಕಾರದಿಂದ ಜೀರ್ಣೋದ್ದಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವಾಸ್ತುಶಿಲ್ಪ ಸಮಿತಿಯ ಸದಸ್ಯರ ತಂಡ ಗುರುವಾರ ತಾಲೂಕಿನ ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ಮೀರಾ ನಾಟುಪಲ್ಲಿ ನಾಗೇಶ್ವರ್, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ನಾಗಲಮಡಿಕೆಯ ಶ್ರೀ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನ ಪರಿಶೀಲನೆ ನಡೆಸಲಾಗಿದೆ. ಅಗಮನಾಶಾಸ್ತ್ರದ ಪ್ರಕಾರ, ವಾಸ್ತುಶಿಲ್ಪ ಸಮಿತಿಯೊಂದಿಗೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ವರದಿ ಕಳುಹಿಸಲಿದ್ದು, ಸರ್ಕಾರದ ಆದೇಶ ಜಾರಿಯಾಗುತ್ತಿದ್ದಂತೆ ದೇವಸ್ಥಾನ ಜೀರ್ಣೋದ್ಧಾರ ಕೈಗೊಳ್ಳುವುದಾಗಿ ಹೇಳಿದರು.ಧಾರ್ಮಿಕ ದತ್ತಿ ಇಲಾಖೆ ಪಂಡಿತರಾದ ಜಿ.ಎ.ವಿಜಯಕುಮಾರ್ ಮಾತನಾಡಿ, ದೇವಸ್ಥಾನದ ಸಮಗ್ರ ಪ್ರಗತಿ ಮತ್ತು ಆಲಂಕಾರ ಕುರಿತು ನೀಲ ನಕ್ಷೆ ಸಿದ್ಧಪಡಿಸಿ ಪರೀಶೀಲನಾ ವರದಿವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ರಾಷ್ಟ್ರಿಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ, ತಾಲೂಕು ಕಿಸಾನ್ ಸಂಘದ ನಿರ್ದೇಶಕ ಕೆ.ಗೋಪಾಲ್ ಮಾತನಾಡಿದರು.ದೇವಸ್ಥಾನದ ಸೇವಾ ಸಮಯ ಮತ್ತು ಪೂಜೆ ವಿಚಾರಗಳಲ್ಲಿ ಭಕ್ತರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಇಲ್ಲಿನ ದೇವಸ್ಥಾನದ ಪಾರುಪತ್ಯದಾರ ಉಮಾಶಂಕರ್ ಮತ್ತು ಅರ್ಚಕರಾದ ಬದರಿನಾಥ್ ನಡುವೆ ಸಮನ್ವಯದ ಕೊರತೆ ಇದೆ. ಪರಿಣಾಮ ಇದರಿಂದ ಪೂಜೆ ಪುನಸ್ಕಾರದ ವೇಳೆ ಭಕ್ತರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಆಗಬೇಕೆಂದು ಅಧಿಕಾರಿಗಳಿಗೆ ದೂರಿದರು. ಈ ವೇಳೆ ತಹಸೀಲ್ದಾರ್ ಸಂತೋಷ್ ಕುಮಾರ್, ಶಿರಸೇದಾರರಾದ ನರಸಿಂಹಮೂರ್ತಿ, ಕಂದಾಯ ತನಿಖಾಧಿಕಾರಿ ರವಿಕುಮಾರ್ ಹಾಗೂ ಪತ್ರಕರ್ತ ಸತ್ಯ ಲೋಕೇಶ್, ಗ್ರಾಮಲೆಕ್ಕಿಗರಾದ ಮಧು ಹಾಗೂ ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಫೋಟೋ 14ಪಿವಿಡಿ2ಪಾವಗಡ,ರಾಜ್ಯ ರೈತ ಸಂಘದ ಅಧ್ಯಕ್ಷ ವಿ.ನಾಗಭೂಷಣರೆಡ್ಡಿ ಹಾಗೂ ಇತರೆ ಭಕ್ತರ ಮನವಿ ಮೇರೆಗೆ,ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.