ಸ್ವಯಂ ಆಡಳಿತದ ಹಕ್ಕು ಸ್ಥಾಪಿಸಿದ ದಿನವೇ ಗಣರಾಜ್ಯ

KannadaprabhaNewsNetwork |  
Published : Jan 28, 2024, 01:18 AM IST
ಪೋಟೋ (27 ಹೆಚ್‌ ಎಲ್‌ ಕೆ 2)ತಾಲೂಕಿನ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತದ ಎಪ್ಪತ್ತೈದನೆ ಗಣರಾಜ್ಯ ದಿನದಲ್ಲಿ ಮುಖ್ಯ ಶಿಕ್ಷಕ ಡಿ.ಸಿದ್ದಪ್ಪ ಮಾತನಾಡಿದರು  | Kannada Prabha

ಸಾರಾಂಶ

ಭಾರತ ದೇಶದ ಸಂವಿಧಾನ ರಚನೆಯಾಗಿ, ಪರಕೀಯರ ಆಡಳಿತದಿಂದ ಮುಕ್ತಿ ಹೊಂದಿ ಸ್ವಾತಂತ್ರ್ಯ ಸಾರ್ವಭೌಮ ಗಣತಂತ್ರ ದೇಶವಾಗಿ ಸ್ವಯಂ ಆಡಳಿತದ ಹಕ್ಕು ಸ್ಥಾಪಿಸಿದ ದಿನ ಭಾರತದ ಗಣರಾಜ್ಯ ದಿನವಾಗಿದೆ.

ಹೊಳಲ್ಕೆರೆ: ಭಾರತ ದೇಶದ ಸಂವಿಧಾನ ರಚನೆಯಾಗಿ, ಪರಕೀಯರ ಆಡಳಿತದಿಂದ ಮುಕ್ತಿ ಹೊಂದಿ ಸ್ವಾತಂತ್ರ್ಯ ಸಾರ್ವಭೌಮ ಗಣತಂತ್ರ ದೇಶವಾಗಿ ಸ್ವಯಂ ಆಡಳಿತದ ಹಕ್ಕು ಸ್ಥಾಪಿಸಿದ ದಿನ ಭಾರತದ ಗಣರಾಜ್ಯ ದಿನವಾಗಿದೆ ಎಂದು ಮುಖ್ಯಶಿಕ್ಷಕ ಡಿ.ಸಿದ್ದಪ್ಪ ಹೇಳಿದರು.

ತಾಲೂಕಿನ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತದ 75ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.

ಬ್ರಿಟೀಷರ ಆಡಳಿತದ ಭಾಗಗಳು ಹಾಗೂ 600ಕ್ಕೂ ಹೆಚ್ಚು ರಾಜರ ಆಡಳಿತ ಪ್ರದೇಶಗಳು ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾದದ್ದು ಬಹಳ ಸಾಹಸಮಯ ಚರಿತ್ರೆ. ಮತ್ತೆಂದು ಭಾರತ ಪರಕೀಯರ ದಾಸ್ಯಕ್ಕೆ ಒಳಗಾಗಬಾರದೆಂದು ಸುಭದ್ರ ಸುವ್ಯವಸ್ಥಿತ ಲಿಖಿತ ಸಂವಿಧಾನವನ್ನು ಭಾರತ ರಚಿಸಿತು. ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚಿಸಿ ಬಾಬು ರಾಜೇಂದ್ರ ಆಂಬೇಡ್ಕರ್‌ ಪ್ರಸಾದರ ಸಂವಿಧಾನ ರಚನಾ ಸಭೆಗೆ ನೀಡಿದರು. ಎಲ್ಲವನ್ನು ಕೂಲಂಕಷವಾಗಿ ಚರ್ಚಿಸಿ 1949 ನ.26ರಂದು ಭಾರತದ ಸಂವಿಧಾನ ಆಂಗೀಕರಿಸಲಾಯಿತು. ಜ.26 1950ರಂದು ಜಾರಿಯಾಯಿತು ಎಂದು ಹೇಳಿದರು.

ಸಹಶಿಕ್ಷಕ ಟಿ.ಪಿ.ಉಮೇಶ್ ಮಾತನಾಡಿ, ಸಂವಿಧಾನವು ಭಾರತ ದೇಶದ ನಾಗರೀಕರಿಗೆ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಉಚಿತ ಶಿಕ್ಷಣದ ಹಕ್ಕಿನೊಂದಿಗೆ ಇಂದು ಭಾರತ ಸಾಕ್ಷರ ಭಾರತವಾಗುವಲ್ಲಿ ಮುನ್ನಡೆಯುತ್ತಿದೆ. ಔದ್ಯೋಗಿಕ, ವೈಜ್ಞಾನಿಕ, ವೈಮಾನಿಕ, ಸಾಗರಿಕ, ಸೈನಿಕ, ಆರ್ಥಿಕ, ತಂತ್ರಜ್ಞಾನ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾರತ ಇಂದು ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ. ಇದೆಲ್ಲ ಸಾಧ್ಯವಾಗುತ್ತಿರುವುದು ಸಂವಿಧಾನದ ಪರಿಪಾಲನೆಯಿಂದ. ಎಲ್ಲರೂ ಸಂವಿಧಾನ ಅರಿಯೋಣ ಅಭಿವೃದ್ಧಿ ಹೊಂದೋಣ ಎಂದು ಹೇಳಿದರು.

ಗಣರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ತ ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಗ್ರಾಮದಲ್ಲಿ ರಾಷ್ಟ್ರ ನಾಯಕರ ಭಾವಚಿತ್ರಗಳೊಂದಿಗೆ ಜಾಥ ನಡೆಸಲಾಯಿತು. ವಿದ್ಯಾರ್ಥಿಗಳಾದ ಸಿಂಚನಾ, ಚಂದನ, ಮಾನಸ, ಮಾರುತಿ, ವಿಶಾಲ, ಉಷಾ ಗಣರಾಜ್ಯ ಮಹತ್ವದ ಕುರಿತು ಭಾಷಣ ಮಾಡಿದರು. ಸಹಶಿಕ್ಷಕರಾದ ಟಿ.ಪಿ.ಉಮೇಶ್, ಜಿ.ಎನ್.ರೇಷ್ಮಾ, ಶಾರದಮ್ಮ, ತಿಮ್ಮಮ್ಮ ಹಾಗು ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌