ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬೀದಿ ಬೀದಿ ಬದಿಯ ವ್ಯಾಪಾರಸ್ಥರಿಂದ ಸಂತೆ ಕರ ವಸೂಲಿ ಮಾಡಬಾರದು ಎಂದು ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಬುಧವಾರ ಪುರಸಭೆಯ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಪಟ್ಟಣದ ಬೀದಿ ಬದಿಯ ವ್ಯಾಪಾರಸ್ಥರಿಗೆ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಮಾತನಾಡಿ, ಸರ್ಕಾರ ಬೀದಿ ಬದಿಯ ವ್ಯಾಪಾರಸ್ಥರಿಂದ ಸಂತೆ ಕರ, ನೆಲ ಬಾಡಿಗೆ ವಸೂಲಿ ಮಾಡಬಾರದು ಎಂದು ಆದೇಶಿಸಿದೆ. ಒಂದು ವೇಳೆ ಬೀದಿ ಬದಿಯ ವ್ಯಾಪಾರಿಗಳಿಂದ ಸಂತೆ ಕರ ಹಾಗೂ ನೆಲ ಬಾಡಿಗೆ ಇತ್ಯಾದಿ ವಸೂಲಿ ಮಾಡಿದಲ್ಲಿ ಅದನ್ನು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯಾಭಿವೃದ್ಧಿ. ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹೊರಡಿಸಿರುವ ಆದೇಶದಂತೆ ಬೀದಿ ಬದಿಯ ವ್ಯಾಪಾರಿಗಳ ಸಂರಕ್ಷಣೆ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪುರಸಭೆಯ ಎದುರು ಪ್ರತಿಭಟನೆ ನಡೆಸಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.ಈ ವೇಳೆ ಗದಗ ಜಿಲ್ಲಾ ಬೀದಿ ಬದಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಾತನಾಡಿ, ಸರ್ಕಾರದ ಆದೇಶ ಪಾಲಿಸಿ ಬೀದಿ ಬದಿಯ ವ್ಯಾಪಾರಸ್ಥರಿಂದ ಸಂತೆ ಕರ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ.ಆದ್ದರಿಂದ ಕರೆ ವಸೂಲಾತಿ ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುನೀರಸಾಬ್ ಸಿದ್ದಾಪುರ, ಹನುಮಂತ ರಾಮಗೇರಿ, ದಾದಾಪೀರ್ ಬೆಂಡಿಗೇರಿ, ಮಂಜುನಾಥ ಬಸಾಪೂರ, ಪರಶುರಾಮ ಬಳ್ಳಾರಿ, ಮೆಹಬೂಬ ಸಾಬ್ ಸುಂಡಕೆ, ರಾಜೇಸಾಬ ಮುಲ್ಲಾನವರ, ಲಕ್ಷ್ಮಣ ಮುಳಗುಂದ, ಸೋಮವ್ವ ಬೆಟಗೇರಿ, ಶಬ್ಬೀರ್ ಅಹ್ಮದ್ ಶಿರಹಟ್ಟಿ ಇದ್ದರು.