ಮಲೆ ಮಹದೇಶ್ವರ ಬೆಟ್ಟ ಪ್ಲಾಸ್ಟಿಕ್ ಮುಕ್ತಗೊಳಿಸಲು ಮನವಿ: ಮೈಸೂರ್ ಮಂಜುನಾಥ್

KannadaprabhaNewsNetwork |  
Published : Jan 26, 2024, 01:49 AM IST
ಳು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಹಕಾರ ನೀಡುವಂತೆ | Kannada Prabha

ಸಾರಾಂಶ

ಧಾರ್ಮಿಕ ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಹಕಾರ ನೀಡುವಂತೆ ಮಲೆ ಮಹದೇಶ್ವರ ಬೆಟ್ಟ ಪರಿಸರ ವಾರಿಯರ್ಸ್ ಗ್ರೂಪ್ ಮೈಸೂರ್ ಮಂಜುನಾಥ್ ಭಕ್ತಾದಿಗಳಲ್ಲಿ ಮನವಿ ಮಾಡಿದರು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀ ಕ್ಷೇತ್ರ ವ್ಯಾಪ್ತಿಯ ನಾಗಮಲೆ ಸನ್ನಿಧಿಯಲ್ಲಿ ಕಾವೇರಿ ವನ್ಯಧಾಮ ಅರಣ್ಯ ಇಲಾಖೆ ಸಹಯೋಗದೊಂದಿಗೆ ಭಕ್ತಾದಿಗಳಿಗೆ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಧಾರ್ಮಿಕ ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಹಕಾರ ನೀಡುವಂತೆ ಮಲೆ ಮಹದೇಶ್ವರ ಬೆಟ್ಟ ಪರಿಸರ ವಾರಿಯರ್ಸ್ ಗ್ರೂಪ್ ಮೈಸೂರ್ ಮಂಜುನಾಥ್ ಭಕ್ತಾದಿಗಳಲ್ಲಿ ಮನವಿ ಮಾಡಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀ ಕ್ಷೇತ್ರ ವ್ಯಾಪ್ತಿಯ ನಾಗಮಲೆ ಸನ್ನಿಧಿಯಲ್ಲಿ ಕಾವೇರಿ ವನ್ಯಧಾಮ ಅರಣ್ಯ ಇಲಾಖೆ ಸಹಯೋಗದೊಂದಿಗೆ ಭಕ್ತಾದಿಗಳಿಗೆ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ನಾಗಮಲೆಗೂ ಭೇಟಿಕೊಡುವ ಭಕ್ತರು ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕವರ್ ಗಳಲ್ಲಿ ತರುವ ತಿಂಡಿ ತಿನಿಸುಗಳನ್ನು ಬಳಸಿ ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಮಾರಕವಾಗಿ ಅರಣ್ಯದಲ್ಲಿರುವ ಪ್ರಾಣಿಗಳು ಅದನ್ನು ತಿಂದು ಜೀವಹಾನಿ ಉಂಟಾಗುತ್ತಿದೆ ಜೊತೆಗೆ ಪರಿಸರಕ್ಕೂ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯಿಂದ ತೊಂದರೆ ತಪ್ಪಿಸಲು ಹುಣ್ಣಿಮೆಯ ದಿನವಾದ ಇಂದು ನಾಗಮಲೆ ಸನ್ನಿಧಿಯಲ್ಲಿ ಭಕ್ತಾದಿಗಳು ಬರುವ ಮುನ್ನ ಎಚ್ಚರಿಕೆ ವಹಿಸಿ ತಾವು ಬಳಸಿದ ಪ್ಲಾಸ್ಟಿಕ್ ಬಾಟಲ್ ಮತ್ತು ಕವರ್ ಅನ್ನು ದೇವಾಲಯದ ಪಕ್ಕದಲ್ಲಿ ಇಟ್ಟಿರುವ ಡಸ್ಟ್ ಬಿನ್ ನಲ್ಲಿ ಹಾಕಿ ಇಲ್ಲದಿದ್ದರೆ ಭಕ್ತಾದಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ಅದನ್ನು ಶೇಖರಣೆ ಮಾಡುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಬೆಟ್ಟಗುಡ್ಡ-ಗಿಡಮರ ಸಮೃದ್ಧಿಯಿಂದ ಕೂಡಿರುವ ಶ್ರೀ ಕ್ಷೇತ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಭಕ್ತಾದಿಗಳು ಸಹಕಾರ ನೀಡಬೇಕು. ಪರಿಸರವಾದಿ ಗ್ರೂಪ್ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಈ ಅಭಿಯಾನಕ್ಕೆ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳು ಸಹಕಾರ ನೀಡುವುದರ ಮೂಲಕ ನಿಗದಿತ ಸ್ಥಳದಲ್ಲಿ ಇಟ್ಟಿರುವ ಡಸ್ಟ್ ಬಿನ್ ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಮತ್ತು ಕವರ್ ಹಾಕುವಂತೆ ಮನವಿ ಮಾಡಿದರು. ಈ ವೇಳೆ ಪರಿಸರ ಸಮಿತಿಯ ಅಧ್ಯಕ್ಷ ಬೊಮ್ಮಾಯಿ ಹಾಗೂ ಅರಣ್ಯ ಇಲಾಖೆ ಗಾರ್ಡ್ ಮಹೇಶ್ ವಾಚರ್ ಚಿನ್ನಪ್ಪ ಭಕ್ತಾದಿಗಳು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ