ಉತ್ತಮ ಸೇವೆಯಿಂದ ನಿವೃತ್ತಿ ನಂತರವೂ ಸಮಾಜದಲ್ಲಿ ಗೌರವ: ಬಿ.ಕೆ. ನಂದನೂರ

KannadaprabhaNewsNetwork |  
Published : Jun 04, 2024, 12:30 AM IST
(ಪೋಟೊ3 ಬಿಕೆಟಿ1,  ಉಪನಿರ್ದೇಶಕ ಬಿ.ಕೆ. ನಂದನೂರ ಅವರು ಮಾತನಾಡುತ್ತಿರುವುದು. ) | Kannada Prabha

ಸಾರಾಂಶ

ಸರ್ಕಾರಿ ನೌಕರರು ನಡಿಗೆ ಜೊತೆಗೆ ಉತ್ತಮ ನಡುವಳಿಕೆ ಬೆಳೆಸಿಕೊಂಡರೆ ನಿವೃತ್ತಿಯ ನಂತರವೂ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರಿ ನೌಕರರು ನಡಿಗೆ ಜೊತೆಗೆ ಉತ್ತಮ ನಡುವಳಿಕೆ ಬೆಳೆಸಿಕೊಂಡರೆ ನಿವೃತ್ತಿಯ ನಂತರವೂ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಹಾಗೂ ಗ್ರೂಪ್ ಡಿ ನೌಕರರ ಜಿಲ್ಲಾ ಘಟಕ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಉಪನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತರಾದ ಏಳು ಜನ ಗ್ರೂಪ್ ನೌಕರರ ಮತ್ತು ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೌಕರರು ಯಾವುದೇ ಆತಂಕಕ್ಕೆ ಒಳಗಾಗದೇ ತಮಗೆ ವಹಿಸಿರುವ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದರೆ ನೌಕರಿ ಜೀವನವು ನಿವೃತ್ತಿಯೆಡೆಗೆ ಕೊಂಡೊಯ್ಯುತ್ತದೆ ಮತ್ತು ನಿವೃತ್ತಿ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿದರು.

ಸರ್ಕಾರಿ ನೌಕರರು ಸಾರ್ವಜನಿಕರ, ಶಿಕ್ಷಕರ ಕೆಲಸಗಳನ್ನು ಸುಗಮವಾಗಿ ಮಾಡಿಕೊಡುವುದರಿಂದ ನಿವೃತ್ತಿ ನಂತರದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ ಎಂದೂ ಡಿಡಿಪಿಐ ಬಿ.ಕೆ. ನಂದನೂರ ಹೇಳಿದರು.

ಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ ಮಾತನಾಡಿ, ಗ್ರೂಪ್ ಡಿ ನೌಕರರು ಮನೆ ಕೆಲಸದಂತೆ ಕಚೇರಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅಧಿಕಾರಿಗಳು ಬರುವ ಒಳಗಾಗಿ ಕಚೇರಿಯನ್ನು ಪರಿಮಳದಂತೆ ಇಟ್ಟುಕೊಳ್ಳುವಂತೆ ಮಾಡಿ ಎಲ್ಲರಿಗೂ ಮಾದರಿಯಾಗುತ್ತಾರೆ. ಹಾಗೆಯೇ ಎಲ್ಲ ನೌಕರರು ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವುದರಿಂದ ನಿವೃತ್ತಿಯಾದ ಬಳಿಕವೂ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಾರೆಂದರು.

ಜಿಲ್ಲಾ ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮಣ ಯಂಕಂಚಿ ಮಾತನಾಡಿ, ಶಿಕ್ಷಣ ಇಲಾಖೆಯು ಶಿಕ್ಷಕರ ಕೆಲಸಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ತ್ವರಿತವಾಗಿ ಮಾಡಿಕೊಡುವುದರಿಂದ ಎಲ್ಲರೂ ನೆಮ್ಮದಿಯಿಂದಿರಲು ಸಾಧ್ಯವೆಂದು ಹೇಳಿದರು.

ಜಿಲ್ಲಾಧ್ಯಕ್ಷ ಅಶೋಕ ಆರ್. ನಾಯಕ, ಹಣಮಂತ ಲಮಾಣಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಸುವರ್ಣ ಕೊಳಚಿ ಮಾತನಾಡಿದರು. ಎಸ್ಎಸ್ಕೆ ಡಿವೈಎಸ್ಪಿ ಸಿ.ಆರ್. ಓಣಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಕಿಲ್ಲೇದಾರ, ಸಂಗಮೇಶ ಕಲ್ಲೂರ, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಲ್ಲಾ, ಪಿ.ಎಸ್. ಚವ್ಹಾಣ, ಅಮೀನ್‌ ಹಳ್ಳೂರ, ಡಿ.ಟಿ. ದೊಡ್ಡಮನಿ, ಸಿದ್ದು ಜವಳಗದ್ದಿ, ಉಮೇಶ ಹಂಜಿ ಮತ್ತಿತರರು ಉಪಸ್ಥಿತರಿದ್ದರು.

ಸೇವೆಯಿಂದ ನಿವೃತ್ತರಾದ ಪ್ರದಸ ಎನ್.ಎ. ಖತೀಬ್‌, ಗ್ರೂಪ್ ಡಿ ನೌಕರರಾದ ಹೊಳಬಸಯ್ಯ ಮಠಪತಿ, ಆರ್.ಎಚ್. ವಾಲಿಕಾರ, ಎನ್.ಎಸ್. ಹೂಟಿ, ಎಚ್.ಎನ್. ಸುರಪೂರ, ಎಂ.ಐ. ಗೂಗಿಹಾಳ, ಎಲ್.ಎಂ. ಪಿಂಜಾರ ಅವರನ್ನು ಜಿಲ್ಲಾ ಉಪನಿರ್ದೇಶಕ ಬಿ.ಕೆ. ನಂದನೂರ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ವೆಂಕಟೇಶ ಇನಾಮದಾರ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ದಡ್ಡಿ ನಿರೂಪಿಸಿದರು. ಹಣಮಂತ ಲಮಾಣಿ ವಂದಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ